ಮಹಿಳೆ ಇಸ್ಲಾಮಿನಲ್ಲಿ

ಪ್ರೊ. ಮುಹಮ್ಮದ್‌ ಕುತುಬ್‌

ಪ್ರಾಧ್ಯಾಪಕರು: ಕಿಂಗ್‌ ಅಬ್ದುಲ್‌ ಅದೀರು್‌ ವಿಶ್ವವಿದ್ಯಾಲಯ (ಸೌದಿ ಅರೇಬಿಯಾ)

ಪರಮ ದಯಾಮಯನೂ ಕರುಣಾಳುವೂ ಆದ ಅಲ್ಲಾಹನ ನಾಮದಿ೦ದ

ಪ್ರ ಪ್ರಕಾಶಕರ ಮಾತು

ಜಗತ್ತಿನ `ಖ್ಯಾತ ವಿದ್ವಾಂಸ ಮತ್ತು ಸಾಹಿತಿಯಾಗಿರುವ ಮುಹಮ್ಮದ್‌ ಕುತುಬ್‌ ಅವರ 'ಶುಬಹಾತುನ್‌ ಹೌಲಲ್‌ ಇಸ್ಲಾಮಿ'(1slam: the misunderstood religion) ಎಂಬ ಕೃತಿಯಿಂದ ಆಯ್ದುಕೊಂಡ 'ಇಸ್ಲಾಮ್‌ ಮತ್ತು ಮಹಿಳೆಯರು' 'ಎಂಬ ಅಧ್ಯಾಯದ ಕನ್ನಡಾನುವಾದದ ಐದನೆಯ ಮುದ್ರಣವನ್ನು ವಾಚಕರ ಮುಂದಿಡಲು ಸಂಶೋಷವೆನಿಸುತ್ತಿದೆ. ಇಸ್ಲಾಮಿನಲ್ಲಿ ಮಹಿಳೆಯರ ಸ್ಥಾನಮಾನದ ಕುರಿತು ಅಲ್ಲಸಲ್ಲದ ಆರೋಪ ಅವಹೇಳನಗಳನ್ನು ವ್ಯಾಪಕವಾಗಿ ಪ್ರಚಾರಪಡಿಸಲಾಗುತ್ತಿರುವ ಹಿನ್ನೆಲೆಯಲ್ಲಿ .ಆ 'ಕುರಿತು. ವಸ್ತು ನಿಷ್ಠ ತಿಳುವಳಿಕೆ -ನೀಡುವ . ಇಂತಹ : ಸಕಾಲಿಕ ಮತ್ತು ;ಅತ್ಯ ಗತ್ಯವೆಂಬುದರಲ್ಲಿ ಸಂದೇಹವಿಲ್ಲ. "ಶುದ್ಧ ಮನಸ್ಸಿನಿಂದ ಸಮಸ್ಯೆಯ “ಅಧ್ಯಯನ ನಡೆಸ ಬಯಸುವವರಿಗೆ ಇದು. ಮಾರ್ಗವರ್ಶಿಯಾಗಬಲ್ಲು ದು. ಇಸ್ಲಾಮನ್ನು ಕಡೆಗಣಿಸಿ - ಪಾಶ್ಚಾತ್ಯರ ಅಂಧಾನುಕರಣೆ ಯಿಂದ ಮಹಿಳೋದ್ಧಾರ ಮಾಡಲು ಹೊರಟಿರುವ ಆಧುನಿಕ, ಬುದ್ಧಿ ಜೀವಿಗಳ ಕಣ್ಣು ತೆರೆಸಲಿಕ್ಕೂ ಕೃತಿ ಪರ್ಯಾಪ್ತವಿದೆ.

ಹಾಗೆಯೇ. ಸಮಾಜದಲ್ಲಿ ತಮಗಿರುವ ನೈಜ ನೆಲೆ-ಚೆಲೆಯನ್ನು ಮಸೆ nH

' ಮಾಡಿಕೊಳ್ಳಲು ಮುಸ್ಲಿ ಮ್‌ ಮಹಿಳೆಯರಿಗೂ ಸಹಾಯಕವಾಗಿದೆ.

ಇ. ಶಾಂತಿ ಪ್ರಕಾಶನ

ಮಹಿಳೆಯ ಹಕ್ಕಿನ ಬಗ್ಗೆ ತೀರಾ ಆಜ್ಜರಾಗಿದ್ದ ಅರಬ್‌ ಜನಾಂಗದಲ್ಲಿ ಪ್ರವಾದಿ ವರ್ಯರು(ಸ) ಆಕೆಗೆ ಪುರುಷನಿಗೆ ಸಮಾನವಾದ ಸ್ಥಾನಮಾನ ನೀಡಿದರು. ಆಸ್ತಿಯಲ್ಲಿ ಆಕೆಗೆ ಹಕ್ಕೇ ಇರಲಿಲ್ಲ. ಪ್ರವಾದಿವರ್ಯರು(ಸ)- ಆಕೆಗೆ ವಾರೀಸು ಹಕ್ಕನ್ನೂ ನಿರ್ಣಯಿ ಸಿದರು. ಸ್ತ್ರೀಯ ಹಕ್ಕುಗಳ ವಿವರಣೆಗಾಗಿ - ಪವಿತ್ರ ಕುರ್‌ಆನಿನಲ್ಲಿ ಅನೇಕ ಆಜ್ಜಿಗಳು ಅವತೀರ್ಣಗೊಂಡವು.

ಮಾತಾಪಿತರು ಮತ್ತಿತರ ಸಂಬಂಧಿಕರ ಆಸ್ತಿಯಲ್ಲಿ ಸ್ತ್ರೀಯರನ್ನು ವಾರಿಯದಾರ' ರೆಂದು ಪರಿಗಣಿಸಲಾಯಿತು. ಇಂದು ನಾಗರಿಕತೆಯ ಡಂಗುರ ಸಾರುತ್ತಿರುವ: ಹಲವು' ರಾಷ್ಟ್ರಗಳಲ್ಲಿ ಮಹಿಳೆಯರಿಗೆ ಆಸ್ತಿಯ ಹಕ್ಕಾಗಲಿ, ಮತದಾನದ ಹಕ್ಕಾಗಲಿ ಇಲ್ಲ.

ಬ್ರಿಟನ್‌ನಲ್ಲಿ "ಮಹಿಳೆಯರಿಗೆ ಮತದಾನದ ಹಕ್ಕು ಪ್ರಪ್ರಥಮವಾಗಿ 'ಮೊಡಿತುದು 1938ರಲ್ಲಿ. ಭಾರತೀಯ ಸಮಾಜದಲ್ಲಿ 'ಮಹಿಳೆಗೆ ಆಸ್ತಿಯ ಹಕ್ಕು ದೊರಕಿದ್ದೂ ತೀರಾ ಇತ್ತೀಚೆಗೆ. ಆದರೆ 14 ಶತಮಾನಗಳ ಹಿಂದೆಯೇ ಎಲ್ಲ ಹಕ್ಕುಗಳನ್ನೂ ಸ್ತ್ರೀಯರು ಅನುಭವಿಸುತ್ತಿದ್ದುದನ್ನು ನಾವು ಕಾಣುತ್ತೇವೆ. ಅವರಿಗೆ ಹಕ್ಕನ್ನು ಕೊಡಮಾಡಿದ ಪ್ರವಾದಿ ವರ್ಯರು(ಸ) ಎಷ್ಟು. ದೊಡ್ಡ ಅನುಗ್ರಹಿ!

ಶ್ರೀ ಅಡಿಯಾರ್‌ “ನನ್ನ ಪ್ರೀತಿಯ `ಧರ್ಮ' ಕೃತಿಯಿಂದ '

ಮಹಿಳೆ ಇಸ್ಲಾಮಿನಲ್ಲಿ

ಎಂ.

ಸ್ತ್ರೀ ಸ್ವಾತಂತ್ರ್ಯ ಮತ್ತು ಸ್ತ್ರೀ-ಪುರುಷ ಸಮಾನತೆಯು ಪೌರ್ವಾತ್ಮ ಲೋಕದಲ್ಲಿ ಕೋಲಾಹಲವೆಬ್ಬಸುತ್ತ. ಲಿರುವ ಸಮಸ್ಯೆಗಳಾಗಿವೆ.

- ಸ್ತ್ರೀ-ಪುರುಷರಿಗೆ ಇಸ್ಲಾಮ್‌ ಸಂಪೂರ್ಣ ಸಮಾನತೆ ನೀಡಿದೆಯೆಂದು ಕೆಲವರು ಸಾರುತ್ತಾರೆ. ಆದರೆ ತಮ್ಮ ಅಜ್ಞಾನ ಅಥವಾ ತಾತ್ಸಾರದಿಂದ, ಇಸ್ಲಾಮನ್ನು ಸ್ತ್ರೀಯರ ಬದ್ಧವೈರಿಯೆಂದು ಅವರು ಚಿತ್ರೀಕರಿಸುತ್ತಾರೆ. ಇಸ್ಲಾಮ್‌ ಸ್ತ್ರೀಯರ ಗೌರವಾಭಿಮಾನ ಗಳನ್ನು ತುಚ್ಛೀಕರಿಸುತ್ತದೆ. ಅವಳ ಆತ್ಮಪ್ರಜ್ಞೆಯನ್ನು ದಮನಿಸುತ್ತದೆ. ಅವಳೊಂದಿಗೆ ಮೃಗ ಸಮಾನವಾಗಿ ವರ್ತಿಸುತ್ತದೆ. ಆಕೆಯನ್ನು ಪುರುಷನ ಭೋಗವಸ್ತು ಮತ್ತು ಸ೦ತಾನೋತ್ಪತ್ತಿಯ ಯಂತ್ರವೆಂದು ಕಡೆಗಣಿಸಿದೆ. ಪುರುಷನು ಆಕೆಯನ್ನು ಗುಲಾಮಳ , ನ್ನಾಗಿಸಿ ಆಕೆಯ ಮೇಲೆ ತನ್ನ ಹಿರಿತನವನ್ನು ಮೆರೆಯುತ್ತಾನೆ ಎಂದು ಅವರು ಹೇಳುತ್ತಾರೆ. `` ಉಭಯ ವಿಭಾಗಗಳಿಗೂ ಇಸ್ಲಾಮಿನ ವಾಸ್ತವಿಕತೆಯ ಅರಿವಿಲ್ಲ. ಒಂದು ವೇಳೆ ಇದ್ದರೂ ಸತ್ಯ ಮತ್ತು ಅಸತ್ಯಗಳನ್ನು ಅವರು ಕಲಬೆರಕೆ ಮಾಡುತ್ತಿದ್ದಾರೆ.

ಇಸ್ಲಾಮಿನಲ್ಲಿ ಸ್ತ್ರೀಯರ ಸ್ಥಾನಮಾನಗಳನ್ನು ಪರಿಶೀಲಿಸುವುದಕ್ಕಿಂತ ಮುಂಚಿತವಾಗಿ ಯೂರೋಪಿನಲ್ಲಿ : ಆಕೆಯ ಸ್ಥಿತಿ ಹೇಗಿತ್ತೆಂಬುದರ ಬಗ್ಗೆ ನಾವೊಮ್ಮೆ ಸಿಂಹಾವಲೋಕನ ನಡೆಸೋಣ. ' ಅಲ್ಲಿಂದಲೇ: 'ಈ ಗೊಂದಲ ಹುಟ್ಟಿಕೊಂಡಿದೆ. ಪೌರ್ವಾತ್ಮ ಲೋಕವು ಅವರನ್ನು ಕೇವಲ ಅಂಧವಾಗಿ ಅನುಕರಿಸಿತು.

XK

ಯೂರೋಪಿನಲ್ಲಿ ಮಾತ್ರವಲ್ಲ ಇಡೀ ಜಗತ್ತಿನಲ್ಲಿಯೇ ಸ್ತ್ರೀಯು ಯಾವುದೇ _ ಸ್ಥಾನಮಾನವಿಲ್ಲದ ಕಾಲ ಕಸವಾಗಿದ್ದಳು. ವಿದ್ವಾಂಸರು" ಮತ್ತು ತತ್ವಜ್ಞಾನಿಗಳು ಆಕೆಗೆ . ಆತ್ಮವಿದೆಯೇ-ಇಲ್ಲವೇ? ಒಂದು ವೇಳೆ ಇದೆಯೆ೦ದಾದರೆ ಅದು ಮಾನವ ಆತ್ಮವೋ ಅಥವಾ ಪಶುವಿನ ಆತ್ಮವೋ? ಇನ್ನು ಒ೦ದು ವೇಳೆ ಮಾನವ ಆತ್ಮವೇ ಇದೆಯೆಂದಾದರೆ'' ಪುರುಷನ ಮಟ್ಟಿಗೆ ಆಕೆಯ ಸಾಮಾಜಿಕ ಮತ್ತು ಮಾನವೀಯ ಸ್ಥಾನವೇನು? ಗುಲಾಮರ: ಸ್ಥಾನವೋ? ಅಥವಾ ಅದಕ್ಕಿಂತ ಹೆಚ್ಚಿಗೇನಾದರೂ ಇದೆಯೇ? ಎಂದು ಶರ್ಕಿಸುತ್ತಿದ್ದರು.

6 ಮಹಿಳೆ ಇಸ್ಲಾಮಿನಲ್ಲಿ a SS

ಗ್ರೀಕ್‌ ಮತ್ತು ರೋಮ್‌ ಸಾಮ್ರಾಜ್ಯಗಳಲ್ಲಿ ಸ್ತ್ರೀಗೆ ಉನ್ನತ ಪದವಿ ನೀಡಿದ್ದ ಅಪೂರ್ವ ಸಂದರ್ಭಗಳಲ್ಲಿಯೂ, ಅದು ಸ್ತಿ ಸ್ತ್ರೀಯರಿಗೆ ಸಾರ್ವತ್ರಿಕವಾಗಿ ನೀಡಲ್ಪಟ್ಟ ಗೌರವ ವಾಗಿರಲಿಲ್ಲ. ಬದಲಾಗಿ ಕೆಲವೊಂದು ಸ್ತ್ರೀಯರಿಗೆ ಅವರ ವೈಯಕ್ತಿಕ ಪ್ರತಿಭೆಯನ್ನು ಗುರುತಿಸಿ ನೀಡಲ್ಪಟ್ಟ ಗೌರವವಾಗಿತ್ತು ಅಥವಾ ರಾಜ ದರ್ಬಾರುಗಳಿಗೆ ಅಲಂಕಾರವಾಗಿ "ವರ್ತಿಸುತ್ತಿದ್ದ ಅಂತಃಪುರದ ಕೆಲವು ಸ್ತ್ರೀಯರನ್ನು ಮಾತ್ರ ಗೌರವಿಸಲಾಗುತ್ತಿತ್ತು. ಅದು ಆಡಂಬರ ಪ್ರಿಯ ಮತ್ತು ಸುಖಲೋಲುಪ ಶ್ರೀಮಂತ ವರ್ಗದ ಆಡಂಬರ ವಸ್ತು ವೆಂಬ ನೆಲೆಯಲ್ಲಿ ದೊರೆತ ಗೌರವವಾಗಿತ್ತು. ಪುರುಷರ ಮನಸ್ಸನ್ನು ರಂಜಿಸುವ ಭೋಗ ವಸ್ತುವೆಂಬುದರ ಹೊರತು ಮಾನವೀಯ ನೆಲೆಯಲ್ಲಿ ಆಕೆಗೆ ಯಾವ ಗೌರವವೂ ದೊರೆತಿರಲಿಲ್ಲ.

ಯೂರೋಪಿನ ಗುಲಾಮ ಸಂಪ್ರದಾಯ ಮತ್ತು 'ಫ್ಯೂಡಲಿರುಮ್‌'ನ ಕಾಲಗಳಲ್ಲಿಯೂ ಸ್ತ್ರೀಯರ ಪರಿಸ್ಥಿತಿ ಹಾಗೆಯೇ ಇತ್ತು. ಸ್ತ್ರೀಯು ಅಜ್ಞಾನ ಕೂಪದಲ್ಲಿ ಬಿದ್ದು ನರಳು

ತ್ತಿದ್ದಳು. ಕೆಲವೊಮ್ಮೆ ಆಕೆಯನ್ನು ಆಡ೦ಬರ ಮತ್ತು ಲೈಂಗಿಕ ಸಂತೃಪ್ತಿಗಾಗಿ ಲಾಲಿಸುವರು.

ಇನ್ನು ಕೆಲವೊಮ್ಮೆ ತಿನ್ನುವ, ಕುಡಿಯುವ, ಹೆರುವ ಮತ್ತು ಆಹೋರಾತ್ರಿ ದುಡಿಯುವ ಮೃಗವೆಂಬಂತೆ ಕಡೆಗಣಿಸುತ್ತಿದ್ದರು.

ಹೀಗಿರುತ್ತಾ, ಕೈಗಾರಿಕಾ ಕ್ರಾಂತಿಯು ಭುಗಿಲೆದ್ದಿತು. ಅದು ಆಕೆಯನ್ನು ಮಾನವ ಇತಿಹಾಸದಲ್ಲಿಯೇ ಅತ್ಯಂತ ಭೀಕರ ದುರಂತ ಮತ್ತು ಸಂಕಷ್ಟಗಳಿಗೆ ಗುರಿಪಡಿಸಿತು.

` ಯೂರೋಪಿನ ಸ್ವಭಾವವು ಸದಾ ಸಂಕುಚಿತ ಮತ್ತು ಸ್ವಾರ್ಥ ಲಂಪಟವಾಗಿತ್ತು. ಉನ್ನತ ಔದಾರ್ಯ ಮನೋಭಾವ ಮತ್ತು ನಿಸ್ವಾರ್ಥ ಸೇವೆಯ ಉತ್ತುಂಗಕ್ಕೇರಲು ಅದರಿಂದಾಗು -ವುದಿಲ್ಲ. ಆದರೆ ಗುಲಾಮಗಿರಿ. ಮತ್ತು ಜಾಗೀರುದಾರೀ ಪದ್ಧತಿಯ ' ಕಾಲದ ಆರ್ಥಿಕ ವ್ಯವಸ್ಥೆ ಮತ್ತು ಜೇಸಾಯ ಪರಿಸ್ಥಿತಿಯು ಸ್ತ್ರೀಯರ ಸಂರಕ್ಷ ಣೆಯನ್ನು ವಹಿಸಲು ಪುರುಷನನ್ನು ನಿರ್ಬಂಧಿಸಿತು. ಮಾತ್ರವಲ್ಲ! ಡೇ ಆಕೆಯು ಬೇಸಾಯದ ಪರಿಸರಗಳಲ್ಲಿ ಕುಟುಂಬದಲ್ಲಿದ್ದ ಕೈಕಸುಬುಗಳನ್ನು ಮಾಡಿ, ತನ್ನನ್ನು ಸಂರಕ್ಷಿಸುವ ಪುರುಪನಿಗೆ ನೆರವಾಗುತ್ತಿದ್ದಳು.

,ಆದರೆ ಕೈಗಾರಿಕಾ ಕ್ರಾಂತಿಯು ನಗರ ಮತ್ತು ಗ್ರಾಮ ಪ್ರದೇಶಗಳ ಜೀವನ ` ವ್ಯವಸ್ಥೆಯನ್ನು ಸಂಪೂರ್ಣ ಬದಲಾಯಿಸಿತು. ಕುಟುಂಬದ ಬುನಾದಿಯು ಅಲುಗಾಡಿತು. ಸ್ತ್ರೀಯರು. ಮತ್ತು ಮಕ್ಕಳು ಫ್ಯಾಕ್ಟರಿಗಳಲ್ಲಿ ನೇಮಕಗೊಂಡು ಕುಟುಂಬ ಸಂಬಂಧಗಳು ಶಿಥಿಲವಾದುವು. ಎಲ್ಲಕ್ಕಿಂತ ಹೆಚ್ಚಾಗಿ. ಪರಸ್ಪರ ಸಹಾಯ ಸಂರಕ್ಷಣೆಯ ಹಳ್ಳಿ ಜೀವನವು ಮಾಯವಾಗಿ ಅನ್ಕೋನ್ಮ ಪರಿಚಯವಿಲ್ಲದ, ಪರಸ್ಪರ ಸಂರಕ್ಷಣೆಗೆ ಸಿದ್ಧರಿಲ್ಲದ, ಪ್ರತಿಯೊಬ್ಬನೂ 'ತಾನಾಯಿತು- ತನ್ನ ಕೆಲಸವಾಯಿತು' ಎಂಬಂತೆ ಒಂಟಿಯಾಗಿ ಬಾಳುವ ಹೃದಯಹೀನವಾದ ನಗರ ವಾತಾವರಣಕ್ಕೆ ಆತನು ಎಸೆಯಲ್ಪಟ್ಟನು. ಅಲ್ಲಿ ಬೆಲೆ ತೆತ್ತು ದೊರೆಯುವ .ಅಕ್ರಮ “ಲೈಂಗಿಕ ಸುಖವು ಆತನನ್ನು ವಿವಾಹ ಚಿಂತೆಗಳಿಂದ ಮುಕ್ತಗೊಳಿಸಿತು ಮತ್ತು ಕುಟುಂಬ ಪಾಲನೆಯ ` ಹೊಣೆಯಿಂದ` ದೂರವಿರಲು ಪ್ರೇರಕವಾಯಿತು. ಕನಿಷ್ಠ

ಮಹಿಳೆ ಇಸ್ಲಾಮಿನಲ್ಲಿ ; 7

ಪಕ್ಷ ಹೊಣೆಯನ್ನು ಕೆಲವಾರು ವರುಷಗಳ ಬಳಿಕ ವಹಿಸಿದರೆ ಸಾಕೆಂಬ ಭಾವನೆ ಬೆಳೆಯಿತು.

, ಇಲ್ಲಿ ಯೂರೋಪಿನ: ಇತಿಹಾಸವನ್ನು ಪರಿಶೀಲಿಸುವುದು ನಮ್ಮ ` ಉದ್ದೇಶವಲ್ಲ. ಬದಲಾಗಿ ಸ್ತ್ರೀಯರ ಜೀವನದ ಮೇಲೆ ಪ್ರಭಾವ ಬೀರಿದ ವಿವಿಧ ಅಂಶಗಳನ್ನು ತಿಳಿಯುವುದಾಗಿದೆ.

ಕೈಗಾರಿಕಾ ಕ್ರಾ೦ತಿಯು ಸ್ತ್ರೀಯರನ್ನು ಮತ್ತು ಮಕ್ಕಳನ್ನು ಫ್ಯಾ ಕ್ಸರಿಗಳಿಗೆ ಸಾಗಿಸಿತೆ೦ದು ನಾವು ಹೇಳಿದೆವು. ಕುಟುಂಬ ಸಂಬಂಧಗಳ ಶಿಥಿಲತೆ Hi ಅವನತಿಗೆ ಅದು ಪ್ರೇರಕವಾಯಿತು. ಆದರೆ ಸ್ತ್ರೀಯರೇ ಅದಕ್ಕೆ ಭಾರೀ ಬೆಲೆ ತೆರಬೇಕಾಯಿತು. ಹಿಂದಿಗಿಂತ ಹೆಚ್ಚು ಶ್ರಮಪಟ್ಟು ದುಡಿಯಲು ಆಕೆ ನಿರ್ಬಂಧಿತಳಾದಳು. ಆಕೆಯು ಪಾವಿತ್ರ್ಯತೆಯನ್ನು ಕಳೆದುಕೊಳ್ಳಬೇಕಾಯಿತು. ಆದರೂ ಲೌಕಿಕ ಮತ್ತು ಮಾನಸಿಕ ಸಂತೃಪ್ತಿಯು ಆಕೆಗೆ ಗಗನಕುಸುಮವಾಯಿತು. ತನ್ಮಧ್ಯೆ ಪುರುಷನು ಆಕೆಯ ಸಂರಕ್ಷಣೆಯ ನೊಗವನ್ನು ತನ್ನ ಭುಜದಿ೦ದ ಜಾರಿಸಿ, ಕರ್ತವ್ಯವನ್ನು ಆಕೆಯ ಹೆಗಲಿಗೇರಿಸಿದನು- ಆಕೆ ಪತ್ನಿಯೋ ಮಾತೆಯೋ ಎಂಬುದನ್ನು ಆತ ಗಮನಿಸಲಿಲ್ಲ. ಇನ್ನೊಂದೆಡೆ, ಫ್ಯಾಕ್ಟರಿಗಳಲ್ಲಿ ಆಕೆಯು ನಿರ್ದಾಕ್ಷಿಣ್ಯವಾಗಿ ಶೋಷಿಸಲ್ಪಟ್ಟಳು. ಸುದೀರ್ಫ ಸಮಯ ಆಕೆಯನ್ನು ದುಡಿಸಲಾಯಿತು. ಆದರೂ ಆಕೆಗೆ ಅದೇ ಫ್ಯಾಕ್ಟರಿಯಲ್ಲಿ - ಅದೇ ಕೆಲಸವನ್ನು ಮಾಡುತ್ತಿದ್ದ ಪುರುಷನಿಗಿಂತ ಕಡಿಮೆ ವೇತನ ದೊರೆಯುತ್ತಿತ್ತು!

ಯಾಕೆ ಹೀಗಾಯಿತೆಂದು ಪ್ರಶ್ನಿಸಬೇಕಾಗಿಲ್ಲ. ಅದುವೇ ಕಾಣ ಅದರ ಆತ್ಮವು ಸಂಕುಚಿತ, ಕ್ರೂರ ಮತ್ತು ಸ್ವಾರ್ಥ ಲಂಪಟವಾಗಿದೆ. ಅದು ಮಾನವನನ್ನು ಮಾನವೀಯ ದೃಷ್ಟಿಯಿಂದ ವೀಕ್ಷಿಸಲು ಎ೦ದೂ ಸಿದ್ಧವಿಲ್ಲ. ದುಷ್ಟತೆಯ ಬಾಗಿಲು ತೆರೆದಿರುವಾಗ ಶಿಷ್ಟತೆಯೆಡೆಗೆ ಅದು. ಇಣಿಕಿಯೂ ನೋಡಲಾರದು.

ಇದು ಇತಿಹಾಸದಾದೃಂತ ಯೂರೋಪಿನ ಸ್ವಭಾವ. ನಿನ್ನೆ ಮಾತ್ರವಲ್ಲ ಇಂದು ಕೂಡಾ. ದೇವನು ಅದಕ್ಕೆ ಸನ್ಮಾರ್ಗ ತೋರಿಸಿ ಉನ್ನತಿಗೇರಿಸದಿದ್ದರೆ, ನಾಳೆಯೂ ಅದು 1. ಕುರಿತು-ಲೌಕಿಕವಾದಿಗಳು ಮತ್ತು ಇತಿಹಾಸದ ಆರ್ಥಿಕ ವ್ಯಾಖ್ಕಾನಗಾರರು, ಲೌಕಿಕ ಪರಿಸ್ಥಿತಿಗಳೇ ಸಾಮಾಜಿಕ ಪದ್ಧತಿ ಮತ್ತು ಮಾನವೀಯ ಸಂಬಂಧಗಳಿಗೆ ಪ್ರೇರಕವೆ೦ದು. ಹೇಳುತ್ತಾರೆ. ಮಾನವ ಜೀವನದಲ್ಲಿ ಸಂಪತ್ತಿನ ಪ್ರಭಾವವನ್ನು ನಿಷೇಧಿಸುವಂಶಿಲ್ಲ. ಆದರೆ ಇಲ್ಲಿ ಅದೊಂದೇ ಪ್ರಬಲ ಏಕಮೇವ ಘಟಕದ ಹಾಗೂ ಮಾನವನ ಭಾವ, ವಿಚಾರ ವರ್ತನೆಗಳೆಲ್ಲವೂ ಸಂಪೂರ್ಣವಾಗಿ ಅದರ ನಿಯಂತ್ರಣದಲ್ಲಿದೆಯೆಂಬ ವಾದವನ್ನು ನಾವು ಸಂಪೂರ್ಣವಾಗಿ ನಿರಾಕರಿಸುತ್ತೇವೆ. ಐರೋಪ್ಯ ಜೀವನದ ಮೇಲೆ ಅದಕ್ಕೆ ಅಂತಹ ಪ್ರಭಾವವಿತ್ತೆ೦ಬುದು ನಿಜ. ಮಾನವೀಯ ನೆಲೆಯಲ್ಲಿ ಆರ್ಥಿಕ ಸಂಬಂಧಗಳನ್ನು ಬೆಳೆಸಿ, ಆತ್ಮ ಸಂಸ್ಕರಣೆಯ ಭಾವನೆಗಳನ್ನು ಉದ್ದೀಪನಗೊಳಿಸುವಂತಹ - ಉನ್ನತ ಆದರ್ಶದ ಅಭಾವವೇ ಅದಕ್ಕೆ ಕಾರಣವಾಗಿದೆ. ಅಲ್ಲಿ ಮುಸ್ಲಿಮ್‌ ಲೋಕದಲ್ಲಿದ್ದಂಥ ಒಲಿದು ಆದರ್ಶ ವಿರುತ್ತಿದ್ದರೆ, ಕನಿಷ್ಠ ಪಕ್ಸ ಅರ್ಥಿಕ ಒತ್ತಡಗಳನ್ನು ಎದುರಿಸಿ ಅದರ `ಬಂಧನದಿಂದ ಮಾನವನನ್ನು ವಿಮೋಚನೆಗೊಳಿಸಲು "ಸಾಧ್ಯವಿತ್ತು.

8 ಮಹಿಳೆ ಇಸ್ಲಾಮಿನಲ್ಲಿ

ಹಾಗೆಯೇ ಇರುವುದು! ಸ್ತ್ರೀಯರನ್ನೂ ಮಕ್ಕಳನ್ನೂ ಶೋಷಿಸದೆ, ಅವರೊಂದಿಗೆ ಕ್ರೂರವಾಗಿ ವರ್ತಿಸದಿರಲು ಪ್ರೇರೇಪಿಸುವ ವಾಸ್ತವಿಕತೆಯೇನು? ಕೇವಲ ಆತ್ಮಸಾಕ್ಷಿಯೊಂದೇ ಅದಕ್ಕೆ ಪ್ರೇರಕ! ಆದರೆ ಯೂರೋಪಿಗೆ ಎಂದಾದರೂ ಆತ್ಮಸಾಕ್ಷಿಯೆಂಬುದಿತ್ತೇ?

ಹೀಗಿದ್ದರೂ, ಅಕ್ರಮವನ್ನು ಸಹಿಸಲಾಗದ ಮತ್ತು ಅನುಕಂಪ ಮಿಡಿಯುವ ಹೃದಯಗಳೂ ಲಲ್ಲಿದ್ದುವು. ಅಸಹಾಯಕ ಮಕ್ಕಳಿಗಾಗಿ ಹೋರಾಡಲು ಅವರು ಸಿದ್ದರಾದರು. ಹೌದು, ಕೇವಲ ಮಕ್ಕಳಿಗಾಗಿ.. ಎಳೆ ಪ್ರಾಯದ ಮಕ್ಕಳನ್ನು ಫ್ಯಾಕ್ಟರಿಗಳಲ್ಲಿ ದುಡಿಸುವುದರ ವಿರುದ್ಧ ಸಮಾಜ ಸುಧಾರಕರು ಧ್ವನಿಯೆತ್ತಿದರು. ತಮ್ಮ ಎಳೆಸ್ಟಭಾವಕ್ಕೆ ಹೊರಲಾಗದ ಹಾಗೂ ಬೆಳವಣಿಗೆಯನ್ನು ಪ್ರತಿಕೂಲವಾಗಿ ಬಾಧಿಸುವ ಕಠಿಣ ದುಡಿಮೆಗಳಿಗೆ ಮಕ್ಕಳನ್ನು ನೇಮಿಸುವುದನ್ನು ಅವರು ಪ್ರಬಲವಾಗಿ ಖಂಡಿಸಿದರು. ಕಠಿಣ ಕೆಲಸಗಳನ್ನು ಮಾಡಿಸಿ ತುಚ್ಛ ಸಂಬಳ ನೀಡುವುದನ್ನು ಅವರು ಕಟುವಾಗಿ ಟೀಕಿಸಿದರು. ಚಳವಳಿಗಳು ಯಶಸ್ವಿ ಯಾದುವು. ಕ್ರಮೇಣ ಕೆಲಸದ ಪ್ರಾಯವನ್ನು ಹೆಚ್ಚಿಸಲಾಯಿತು. ದುಡಿಮೆಯ ಅವಧಿಯು ಕಡಿಮೆಯಾಗಿ ವೇತನ ಮಟ್ಟವು ಏರಿತು.

ಆದರೆ ಸ್ತ್ರೀಯ ಪರವಾಗಿ ವಾದಿಸಲು ಯಾರೂ ಇರಲಿಲ್ಲ. ಸ್ತ್ರೀಯರಿಗೆ ನೆರವಾಗಲು ಮನಸ್ಸು ಮತ್ತು ಭಾವನೆಗಳು ಉನ್ನತವಾಗಿರಬೇಕು. ಅದು ಯೂರೋಪಿನ ಸಾಮರ್ಥ್ಯಕ್ಕೆ ವೂರಿದ ವಿಷಯವಾಗಿದೆ. ತನ್ನಿಮಿತ್ತ ಆಕೆಯು ಸದಾ ಪರೀಕ್ಷೆಗಳ ಅಗ್ನಿಕುಂಡದಲ್ಲಿ ಬಿದ್ದು ನರಳಿದಳು. ತನಗಾರೂ ಗತಿಯಿಲ್ಲವೆಂದು ಮನಗ೦ಡಾಗ ಅಹೋರಾತ್ರಿ ದುಡಿಯಲು ನಿರ್ಬಂಧಿತಳಾದಳು. ದುಡಿಮೆ ಮತ್ತು ಅದರ: ಉತ್ಪಾದನೆ ಸಮಾನವಾಗಿದ್ದರೂ ಪುರುಷನಿ ಗಿಂತ ಕಡಿಮೆ ಸೆಂಬಳದಲ್ಲಿ ಆಕೆಯು ತೃಪ್ತಿ ಪಡೆಯಬೇಕಾಯಿತು.

ಪ್ರಥಮ ಜಾಗತಿಕ ಯುದ್ಧವು ಭುಗಿಲೆದ್ದಿತು. ಯೂರೋಪು ಮತ್ತು ಅಮೇರಿಕದ ಲಕ್ಷೋಪಲಕ್ಷ ಯುವಕರು `ವಧಿಸಲ್ಪಟ್ಟರು. ಅದರೊಂದಿಗೆ ಸ್ತ್ರೀಯು ಇತಿಹಾಸದಲ್ಲಿ ಅತ್ಕಂತ "ಕಠಿಣ ಪರೀಕ್ಷೆಗಳಿಗೆ ಕ್ರೂರ ರೀತಿಯಲ್ಲಿ ಗುರಿಯಾದಳು. ಲಕ್ಷಗಟ್ಟಲೆ ಮಂದಿ ನಿರ್ಗತಿಕರು ಮತ್ತು ವಿಧವೆಯರಾದರು. ಇದಕ್ಕೆ ಹಲವು ಕಾರಣಗಳಿದ್ದುವು. ಒಂದೆಡೆ ಪತಿಯರನ್ನು, ಕಳೆದುಕೊಂಡ ವಿಭಾಗ. ಇನ್ನೊಂದೆಡೆ ಅಂಗವಿಕಲರ ಹಾಗೂ ಯುದ್ಧದ ಕ್ರೌರ್ಯ ಮತ್ತು ಮಾರಕ ವಿಷ ಬಾಂಬುಗಳ ಆಘಾತದಿಂದ ಮಾನಸಿಕ ರೋಗಿಗಳಾದ ವಿಭಾಗ. ವರ್ಷಗಟ್ಟಲೆ ಕುಟುಂಬ ಸಂಬಂಧವನ್ನು ಕಳೆದುಕೊಂಡವರು... ಅವರಿಗೆ ವಿವಾಹ ಅಥವಾ ಕುಟುಂಬದ ಹೊಣೆಗಾರಿಕೆಯಿಲ್ಲದೇ ಕೇವಲ ಸುಖ ಸವಿಯುವುದಷ್ಟೇ ಬೇಕಾಗಿತ್ತು.

ಮತ್ತೊಂದೆಡೆ, ಯುದ್ಧದಿ೦ದಾದ ಪ್ರಾಣಹಾನಿಯಿಂದಾಗಿ ಕಾರ್ಬಾನೆಗಳಲ್ಲಿ ದುಡಿಯುವ ಪುರುಷರ ಕೊರತೆಯುಂಟಾಯಿತು. ಇದರಿಂದಾಗಿ ಸ್ತ್ರೀಯು ತನ್ನ ಹಾಗೂ ತನ್ನ ಆಶ್ರಯ ದಲ್ಲಿರುವ ವೃದ್ಧಃ ರ'ಹಾಗೂ ಮಕ್ಕ ಪೋಷಣೆಗಾಗಿ ಕಾರ್ಯಾನೆಗಳಲ್ಲಿ ದ್ಯಡಿಯಬೇಕಾಯಿತು. 4 ತತ್ಪರಿಣಾಮವಾಗಿ ಆಕೆಯು ತನ್ನ ನೈತಿಕ ಮಟ್ಟದಿ೦ದ ಕೆಳಗಿಳಿಯಬೇಕಾಯಿತು. ವಸ್ತುತಃ ಆಕೆಯ ಚಾರಿತ್ರ್ಯವು ಆಹಾರ ಸಂಪಾದನೆಗೆ ದೊಡ್ಡ ತೊಡಕಾಗಿತ್ತು! ಫ್ಯಾಕ್ಟರಿಯ ಮಾಲಿಕನಿಗೂ

ಮಹಿಳೆ ಇಸ್ಲಾಮಿನಲ್ಲಿ 9

ನಿರ್ವಾಹಕನಿಗೂ ಕೇವಲ ದುಡಿಯುವ ಹಸ್ತಗಳಷ್ಟೇ ಅಗತ್ಯವಿದ್ದುದಲ್ಲ. ಅವರಿಗೆ ಅಮೂಲ್ಕ ಅವಕಾಶ ದೊರೆಯಿತು. ಹಸಿದ ಹಕ್ಕಿಯು ಆಹಾರಕ್ಕಾಗಿ ಸ್ವಯಂ ಕೆಳಗಿಳಿದು. ಬಂದರೆ ಬೇಟೆಗಾರನೇಕೆ ಸ೦ಕೋಚ ಪಡಬೇಕು? ಪರಿಸ್ಥಿತಿಯ ಒತ್ತಡದಿ೦ದ ಆಕೆ ದುಡಿಮೆಗಿಳಿದಾಗ ಅಮೂಲ್ಯವಾದ ಇತರ ಹಲವನ್ನೂ ಆಕೆ ಕಳಕೊಳ್ಳಬೇಕಾಯಿತು. ಕೆಲಸ ಬೇಕಿದ್ದರೆ ಆಕೆ ಅದಕ್ಕೆ ಸಿದ್ಧಳಾಗಲೇ ಬೇಕಿತ್ತು.

ಅಲ್ಲಿ ಕೇವಲ ಹಸಿವು ಮತ್ತು ಅನ್ನದ ಪ್ರಶ್ನೆಯಿದ್ದುದಲ್ಲ. ಲೈಂಗಿಕಾಸಕ್ತಿಯು ನೈಜ ಕಾಮನೆಯಾಗಿದೆ. ಅದನ್ನು ಶಮನಿಸಲೇಬೇಕು. ಉಳಿದಿದ್ದ ಪುರುಷರೆಲ್ಲರೂ ವಿವಾಹ ವಾದರೂ ಅಂದು ಜೀವಿಸಿದ್ದ ಸ್ತ್ರೀಯರ ಲೈಂಗಿಕ ತೃಷೆಯನ್ನು ತಣಿಸಲು ಸಾಧ್ಯವಿರಲಿಲ್ಲ. ಯುದ್ಧ ನಿಮಿತ್ತ ಉದ್ಭವಿಸಿದ ಪುರುಷರ ಅಭಾವವು ಅಷ್ಟೊಂದು ತೀವ್ರವಾಗಿತ್ತು. ಇಂತಹ ಸಂದಿಗ್ನ ಪರಿಸ್ಥಿತಿಗಳಲ್ಲಿ ಸಮಸ್ಯೆಯ ಪರಿಹಾರಕ್ಕಾಗಿ ಇಸ್ಲಾಮ್‌ ಅಂಗೀಕರಿಸಿದಂತಹ ಪರಿಹಾರವನ್ನು ಒದಗಿಸಲು ಯೂರೋಪಿನ ಮತ ನಂಬಿಕೆಗಳು ಒಪ್ಪಿಗೆ ನೀಡಲಿಲ್ಲ. ಅದರಿಂದಾಗಿ ಸ್ತ್ರೀಯು ತನಗಿಷ್ಟವಿದ್ದರೂ ಇಲ್ಲದಿದ್ದರೂ ಜೀವನಾವಶ್ಮಕತೆಗಳಾದ ಆಹಾರ, ವಸ್ತ್ರ ಮತ್ತು ಲೈಂಗಿಕ ಕಾಮನೆಗಳ ಪೂರೈಕೆಗೆ ಚಾರಿತ್ರ್ಯ ಮತ್ತು ಸದಾಚಾರವನ್ನು ನಿರ್ಲಕ್ಷಿಸಬೇಕಾಯಿತು.

ಸ್ತ್ರೀಯು ತನ್ನ ದೌರ್ಭಾಗ್ಯವನ್ನು ಅಪ್ಪಿಕೊಂಡಳು, ಅವಳು ತನ್ನ ದೇಹವನ್ನು ಮಾನವ ರಣಹದ್ದುಗಳಿಗೆ ಸಮರ್ಪಿಸಿ ವ್ಯಾಪಾರ ಮತ್ತು ಕೈಗಾರಿಕಾ ಕೇಂದ್ರಗಳಲ್ಲಿ ದುಡಿದಳು. ಹೀಗೆ ತನ್ನ ಭಾವನೆಗಳ ಶಮನಕ್ಕೆ ದಾರಿ ಮಾಡಿಕೊಂಡಳು. ಆದರೆ ಅಷ್ಟರಿ೦ದಲೇ ಆಕೆಯ ಸಮಸ್ಯೆಗಳು ಕೊನೆಗೊಂಡುವೇ? ಇಲ್ಲ, ಅವು ಇನ್ನಷ್ಟು ಹೆಚ್ಚಾದುವು. ಫ್ಯಾಕ್ಟರಿಗಳು ಸ್ತ್ರೀಯರ ಸಂದಿಗ್ಧತೆ ಯನ್ನು ಶೋಷಿಸಿದುವು. ಫ್ಯಾಕ್ಟರಿ ಮಾಲಿಕರು ಅವರೊಂದಿಗೆ ಬುದ್ದಿ ಮತ್ತು ಆತ್ಮಸಾಕ್ಸಿಯು ಕ್ಲಮಿಸದಂತಹ ಘೋರ ಪಾತಕವೆಸಗಿದರು. ಪುರುಷರೊಂದಿಗೆ ಅದೇ ಕೆಲಸವನ್ನು ಮಾಡುವ ಸ್ತ್ರೀಯರಿಗೆ ತುಚ್ಛ ಸ೦ಬಳ ನೀಡಿದರು.

ಈಗ ಒಂದು ಕ್ರಾಂತಿ ಅನಿವಾರ್ಯವಾಗಿತ್ತು. ಶತಮಾನಗಳಿಂದ ತಾಂಡವವಾಡುತ್ತಿರುವ ಅಕ್ರಮ ಮರ್ದನಗಳನ್ನು ಕಿತ್ತೆಸೆಯುವ೦ತಹ ಕ್ರಾಂತಿ. ಸ್ತ್ರೀಗೆ ಆಕೆಯದ್ದೆ೦ದು ಏನೂ ಉಳಿದಿರಲಿಲ್ಲ? ಆಕೆ ತನ್ನ ದೇಹ, ಸೌಂದರ್ಯ, ಅಭಿಮಾನ ಮತ್ತು ನಾರಿತ್ವವನ್ನು ಗಿರವಿ ಯಿಟ್ಟಿದ್ದಳು. ತನ್ನ ಜೀವನಕ್ಕೆ ಭದ್ರತೆ ನೀಡುವ ಹಾಗೂ ಸುಖ ಸೌಭಾಗ್ಯಗಳಿಗೆ ಅರ್ಹವಾದ ಕುಟು೦ಬ ಮತ್ತು ಮಕ್ಕಳ ಸಹಜೀವನವು ಆಕೆಗೆ ನಷ್ಟಗೊ೦ಡಿತ್ತು. ಅವೆಲ್ಲವೂ ಹಾಗಿರಲಿ, ಕನಿಷ್ಟ ಪಕ್ಷ ಆಕೆಗೆ ಪುರುಷನಿಗೆ ಸಮಾನವಾದ ವೇತನವಾದರೂ ದೊರೆಯ ಬೇಕಿತ್ತಲ್ಲವೇ? ಅದು ಯಾವ ಸಾಮಾನ್ಯ ಬುದ್ಧಿಗೂ ಅರ್ಥವಾಗುವ ನ್ಯಾಯೋಚಿತ ಹಕ್ಕು.

ಆದರೆ ತನ್ನ ಅಧಿಕಾರ ಗೋಪುರದಿಂದ ಕೆಳಗಿಳಿಯಲು ಐರೋಪ್ಕನು ಒಪ್ಪಲಿಲ್ಲ. ಮಾತ್ರವಲ್ಲ ತನ್ನ ಸ್ವಾಭಾವಿಕ ಅಹಂಭಾವವನ್ನು ತೊರೆಯಲು ಆತ ಸಿದ್ಧನಿರಲಿಲ್ಲ. ಅದರಿಂದಾಗಿ ಸಂಘರ್ಷ ಅನಿವಾರೃವಾಯಿತು. ಸರ್ವ ರೀತಿಯ ಶಸ್ತ್ರಸಜ್ಜಿತ ಸಂಘರ್ಷ!

10 [ ಮಹಿಳೆ ಇಸ್ಲಾಮಿನಲ್ಲಿ

ಸ್ತ್ರೀಯರು ಮತ ಪ್ರದರ್ಶನ ಮತ್ತು ಮುಷ್ಕರಗಳ ಹಾದಿ ಹಿಡಿದರು. ಸಾರ್ವಜನಿಕ ವೇದಿಕೆಗಳೇರಿ ಭಾಷಣ ಮಾಡಿದರು. ಪತ್ರಿಕೆ ಮತ್ತು ಪ್ರಕಾಶನಗಳ ಮೂಲಕ ತಮ್ಮ ಬೇಡಿಕೆ ಗಳನ್ನು ಸಮರ್ಥವಾಗಿ ಮುಂದಿಟ್ಟರು. ದೌರ್ಜನ್ಯಗಳ ಮೂಲೋತ್ಸಾಟನೆಗೆ ಕಾನೂನು ನಿರ್ಮಾಣದಲ್ಲಿ ಭಾಗಿಯಾಗಬೇಕೆ೦ದು ಸ್ತ್ರೀಯರು ಮನಗಂಡರು. ತರುವಾಯ ಮತದಾನದ ಹಕ್ಕಿಗಾಗಿ ಕೂಗೆಬ್ಬಿಸಿದರು. ಅದು ಸ್ವಾಭಾವಿಕವಾಗಿ ಅದರ ಮುಂದಿನ ಹಂತಕ್ಕೆ ವ್ಯಾಪಿಸಿತು. ಪಾರ್ಲಿಮೆಂಟಿನಲ್ಲಿ ಪ್ರಾತಿನಿಧ್ಮ ಸಿಗಬೇಕೆಂಬ ಗದ್ದಲ ಆರಂಭಿಸಿದರು. ಪುರುಷ ಕಲಿತ ಹಾದಿಯನ್ನೇ ಅವಳೂ ಕಲಿತಳು. ಆತ ಮಾಡುತ್ತಿದ್ದ ಕೆಲಸವನ್ನೇ ಆಕೆ: ಮಾಡುತ್ತಿದ್ದಳು. ಸ್ವಾಭಾವಿಕವಾಗಿ ಉದ್ಯೋಗ ರಂಗಗಳಲ್ಲಿಯೂ ಪ್ರಾತಿನಿಧ್ಯದ ಹೋರಾಟ ಆರಂಭಿಸಿದರು.

ಇದು ಐರೋಪ್ಶ ಮಹಿಳೆಯ 'ಹಕ್ಕು ಹೋರಾಟ'ಗಳ ಕಥೆ. ಪರಸ್ಪರ. ಹೆಣೆದು ಕೊಂಡಿರುವ ಸುದೀರ್ಥವಾದ .ಹೋರಾಟ ಪರಂಪರೆಯ ಇತಿಹಾಸ. ಅದರ ಪ್ರತಿಯೊಂದು ಕೊ೦ಡಿಯೂ ಇನ್ನೊಂದರ ಅನಿವಾರ್ಯ ಮತ್ತು ಸ್ವಯಂಚಾಲಿತ ಆರಂಭವಾಗಿತ್ತು. ಪುರುಷನನ್ನು ನಾಯಕತ್ವದಿಂದಲೂ ಅಧಿಕಾರದಿಂದಲೂ ಉಚ್ಚಾಟಿಸಿದ ಸ್ತ್ರೀಯು, ದುರ್ಬಲ ಸಮಾಜದಲ್ಲಿ ತಾನು ಅಸಹಾಯಕಳೆಂಬುದನ್ನು ಬೇಗನೆ ಮನಗ೦ಂಡಳು.2

ಸ್ತ್ರೀಯು ಮಾನವ ಜೀವಿಯೆಂಬುದು ಇಸ್ಲಾಮಿನಲ್ಲಿ ಒಂದು ಮೂಲಭೂತ ವಾಸ್ತವಿಕತೆಯಾಗಿದೆ. ಪುರುಷನಲ್ಲಿರುವಂತಹ ಮಾನವ ಆತ್ಮವೇ ಸ್ತ್ರೀಯಲ್ಲಿಯೂ ಇರುವುದು. '

''ಜನರೇ, ನೀವು ನಿಮ್ಮ ಪಾಲಕ ಪ್ರಭುವನ್ನು ಭಯಪಡಿರಿ. ಅವನು ನಿಮ್ಮನ್ನು ಒಂದು ಜೀವದಿಂದ ಸೃಷ್ಟಿಸಿದನು. ಅದೇ ಜೀವದಿಂದ ಅದರ ಜೋಡಿಯನ್ನು ಉಂಟು ಮಾಡಿದನು ಮತ್ತು ಅವೆರಡರಿಂದ ಅನೇಕಾನೇಕ ಸ್ಟ್ರೀ-ಪುರುಷರನ್ನು ಲೋಕದಲ್ಲಿ ಹಬ್ಬಿಸಿದನು.''

(ಪವಿತ್ರ ಕುರ್‌ಆನ್‌, 4:1)

ಹೌದು! ಮೂಲ ಸಾರ, ಆದಿ ಮತ್ತು ಅಂತ್ಕಗಳಲ್ಲಿ ಸ್ತ್ರೀ-ಪುರುಷರು ಸಂಪೂರ್ಣ ಸಾಮ್ಯತೆ ಹೊಂದಿದ್ದಾರೆ. ಮಾನವ ಜೀವಿಯೆಂಬ ನೆಲೆಯಲ್ಲಿ ಅವರು ಸಂಪೂರ್ಣ ಸಮಾನರಾಗಿದ್ದಾರೆ. ಆದ್ದರಿಂದಲೇ ಮಾನವೀಯತೆಗೆ ಸಂಬಂಧಿಸಿದ ಎಲ್ಲ ಹಕ್ಕುಗಳ 2. ಇದು ಇತಿಹಾಸದ ಲೌಕಿಕ ವಿಮರ್ಶಕರ ಇನ್ನೊಂದು ವಾದವಾಗಿದೆ. ಆರ್ಥಿಕ ಅಂಶವೇ ಜೀವನದ ನಿಯಾಮಕ ಶಕ್ತಿ. ಕೇವಲ ಅದರಿಂದಲೇ ಸ್ತ್ರೀ ಸ್ವಾತಂತ್ಯ ಸಮಸ್ಯೆಯು ಮಟ್ಟಕ್ಕೆ ತಲಪಿದೆ. ಆರ್ಥಿಕತೆಯ ಪ್ರಾಮುಖ್ಯತೆಯನ್ನು ನಾವಿಲ್ಲಿ ಅಲ್ಲಗಳೆಯುವುದಿಲ್ಲ. ಆದರೆ ಹೀಗೆ ಸಂಭವಿಸುವುದು ಅನಿವಾರ್ಯವಾಗಿರಲಿಲ್ಲವೆಂದಷ್ಟೆ ನಾವು ಹೇಳುವುದು. ಇಸ್ಲಾಮಿನಂತೆಯೇ, ಎಲ್ಲ ಪರಿಸ್ಥಿತಿಯಲ್ಲಿಯೂ ಸ್ತ್ರೀಯರ ಸಂರಕ್ಷಣೆಯನ್ನು ಪುರುಷನ ಕರ್ತವ್ಯವಾಗಿ ನಿರ್ಣಯಿಸುವ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವ, ವಿಶಿಷ್ಟ ಸಂದರ್ಭಗಳಲ್ಲಿ ಬಹುಪತ್ನಿತ್ಚಕ್ಕೆ ಮನ್ನಣೆ ನೀಡುವ ಹಾಗೂ ಲೈಂಗಿಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡುವಂತಹ ಆದರ್ಶವು ಅಲ್ಲಿರುತ್ತಿದ್ದರೆ ಹೀಗಾಗುತ್ತಿರಲಿಲ್ಲ. ಹಾಗಿದ್ದರೆ ಸ್ತ್ರೀಯು ತನ್ನ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ನಡೆಸುವ ಅಗತ್ಕವಿರುತ್ತಿರಲಿಲ್ಲ. 'ಸರ್ವಸ್ನವನ್ನೂ ಆಕೆ ಬಲಿಯರ್ಪಿಸಬೇಕಾಗಿರಲಿಲ್ಲ.

ಮಹಿಳೆ ಇಸ್ತಾಮಿನಲ್ಲಿ 11

ಅರ್ಹತೆಯೂ ಸಮಾನವಾಗಿದೆ. ರಕ್ತ, ಮಾನ, ಸಂಪತ್ತು, ಪಾವಿತ್ರ್ಯ ಹಾಗೂ. ಅವುಗಳಿಗೆ ಸಂಬಂಧಿಸಿದ ಹಕ್ಕುಗಳಲ್ಲಿಯೂ ಅವರು ವರ್ಗ ಭೇದವಿಲ್ಲದೇ' ಸಮಾನರಾಗಿದ್ದಾರೆ.”' "ಸತ್ಯವಿಶ್ವಾಸಿಗಳೊ ಪುರುಷರು ಇತರ' ಪುರುಷರನ್ನು ಅಪಹಾಸ್ಯ ಮಾಡಬಾರದು. ಅವರು ಇವರಿಗಿಂತ ಉತ್ತಮರಿರಲೂಬಹುದು ಮತ್ತು ಸ್ತ್ರೀಯರು ಇತರ 'ಸ್ತ್ರೀಯರನ್ನೂ ಅಪಹಾಸ್ಯ ಮಾಡಬಾರದು. ಅವರು ಇವರಿಗಿಂತ ಉತ್ತಮರಿರಲೂಬಹುದು. “ಪರಸ್ಪರರನ್ನು ನಿಂದಿಸಬೇಡಿರಿ ಮತ್ತು ಒಬ್ಬರು. ಇನ್ನೊಬ್ಬರನ್ನು ಅಡ್ಡ ಹೆಸರಿ ನಿಂದ" ಕರೆಯಬೇಡಿರಿ.'' ಣೆ (ಪವಿತ್ರ ಕುರ್‌ಆನ್‌, 49:11) "'ದೋಷಾನ್ವೇಷಣೆ ಮಾಡದಿರಿ. ನಿಮ್ಮಲ್ಲಿ ಯಾರೂ ಯಾರ ಬಗ್ಗೆಯೂ ಪರದ್ಧೂಷಣೆ ಮಾಡಬಾರದು." (ಪವಿತ್ರ ಕುರ್‌ಆನ್‌, 49:12) - “ಸತ್ಯವಿಶ್ವಾಸಿಗಳೇ ನಿಮ್ಮ. ಮನೆಗಳ ಹೊರತು ಇತರರ ಮನೆಗಳಿಗೆ ಅವರ ಒಪ್ಪಿಗೆ ಷಡೆಯದೆ ಹಾಗೂ ಮನೆಯವರಿಗೆ ಸಲಾಮ್‌ ಹೇಳದೆ ಪ್ರವೇಶಿಸಬೇಡಿ. ಷಿ (ಪವಿತ್ರ ಕುರ್‌ಆನ್‌, 24: 27 "ಓರ್ವ ಮುಸ್ಲಿ: ಮನು ಇನ್ನೋರ್ವ ಮುಸ್ಲಿಮನ "ಸರ್ವಸ್ವವನ್ನೂ ಗೌರವಿಸಬೇಕು. ಧನ, ಮಾನ, ಸಂಪತ್ತು ಹೀಗೆ ಎಲ್ಲವನ್ನೂ." (ಬುಖಾರಿ, ಮುಸ್ಲಿಮ್‌) ಉಭಯ ವಿಭಾಗಗಳಿಗೂ ಪನರೋದ್ಲಿ ದೊರೆಯುವ ಪ್ರತಿಫಲವು ಸಮಾನ sli ...ಅವರ ಪ್ರಭು. ಹೇಳಿದನು, ನಾನು ನಿಮ್ಮಲ್ಲಿ ಯಾರೊಬ್ಬನ ಕರ್ಮವನ್ನೂ ನತಗಾಕಸನವಾನ್ನ, ಪುರುಷರಾಗಲಿ ಸ್ಟ್ರೀಯರಾಗಲಿ ನೀವೆಲ್ಲ ಒಂದೇ ವರ್ಗದವರು..." (ಪವಿತ್ರ ಕುರ್‌ಆನ್‌, 3:195) ಉಭಯ ವರ್ಗಗಳಿಗೂ ಭೂಮಿಯಲ್ಲಿ ಅವರ ಮಾನವೀಯ ಅಸ್ತಿತ್ವಕ್ಕೆ ಮನ್ನಣೆ ನೀಡಲಾಗಿದೆ. ಒಡೆತನ, ಹಕ್ಕು, ಸಾಲ, ಅಡವು, 'ಬಾಡಿಗೆ, ವಕ್ಫ್‌, ವ್ಯಾಪಾರ, ಮಾರಾಟ, ' ಮುಂತಾದ ವ್ಯಾವಹಾರಿಕ ರಂಗಗಳು ಸಮಾನವಾಗಿ 'ಅನುಮತಿಸಲ್ಪಟ್ಟಿವೆ'' "ಮಾತಾಷಿತರೂ ಆಪ್ತ ಬಂಧುಗಳೂ ಬಿಟ್ಟು ಹೋದ ಸಂಪತ್ತಿನಲ್ಲಿ ಪುರುಷರಿಗೆ. ಪಾಲಿದೆ. ಮಾತಾಪಿತರೂ ಅಶ್ವ ಬಂಧುಗಳೂ ಬಿಟ್ಟು ಹೋದ ಸಂಪತ್ತಿನಲ್ಲಿ ಸ್ತ್ರೀಯರಿಗೂ

ಪಾಲಿದೆ." 4 (ಪವಿತ್ರ ಕುರ್‌ಆನ್‌, 4:7) “ಪುರುಷರು ಗಳಿಸಿದುದಕ್ಕನುಸಾರವಾದ ಪಾಲು ಅವರಿಗಿದೆ, ಸ್ತ್ರೀಯರು ಗಳಿಸಿದುದಕ್ಕನುಸಾರವಾದ ಪಾಲು ಅವರಿಗಿದೆ." : (ಪವಿತ್ರ ಕುರ್‌ಆನ್‌, 4:32)

“ಇತ್ತೀಚೆಗಿನ ವರೆಗೆ 'ನಾಗರಿಕ' ಯೂರೋಪು ಇಂತಹ ಯಾವೊಂದು ಹಕ್ಕನ್ನೂ ಸ್ತ್ರೀಯರಿಗೆ ನೀಡಿರಲಿಲ್ಲ. ಪತಿ, ಪುತ್ರ ಅಥವಾ ಓರ್ವ ಸಂರಕ್ಷಕ ಪುರುಷನ ಮೂಲಕವಲ್ಲದೆ ಅದು ಆಕೆಗೆ: ಸಾಧ್ಯವಿರಲಿಲ್ಲ. ಅರ್ಥಾತ್‌ ಇಸ್ಲಾಮ್‌ ಆಗಮಿಸಿ 13 - ಶತಮಾನಗಳು ಕಳೆದಿದ್ದರೂ, ಇಸ್ಲಾಮ್‌ ನೀಡಿದ ಹಕ್ಕುಗಳು. ಐರೋಪ್ಯ ಮಹಿಳೆಗೆ ಲಭ್ಯವಾಗಿರಲಿಲ್ಲ.

12 ಮಹಿಳೆ ಇಸ್ಲಾಮಿನಲ್ಲಿ

ತರುವಾಯ ಆಕೆಯು ಅದನ್ನು ಸುಲಭದಲ್ಲಿ ಗಳಿಸಲಿಲ್ಲ. ಆಕೆಗೆ ತನ್ನ ಚಾರಿತ್ರ, ಅಭಿಮಾನ ಮತ್ತು ಸೌಂದರ್ಯವನ್ನು ಕಾಪಾಡಲಾಗಲಿಲ್ಲ ಮಾತ್ರವಲ್ಲ ಅವೆಲ್ಲವನ್ನೂ ಆಕೆ ಪಣವಿಡ ಬೇಕಾಯಿತು. ಯಾತಕ್ಕಾಗಿ? ಇತರೆಲ್ಲಾ ವ್ಯವಹಾರಗಳ೦ತೆಯೇ ಸ್ವಯಂಪ್ರೇರಿತರಾಗಿ ಹಾಗೆ ಮಾಡಬೇಕಾಯಿತು. ಆರ್ಥಿಕ ಪರಿಸ್ಥಿತಿಯ ಸಂಘರ್ಷದ ಒತ್ತಡವು ಅದಕ್ಕೆ ಪ್ರೇರಕವಾಗಿರಲಿಲ್ಲ. ಬದಲಾಗಿ ಚಿರಂತನ ಸತ್ಯ ಮತ್ತು ಶಾಶ್ವತ ನ್ಯಾಯಪ್ರಜ್ಞೆಯನ್ನು ಸಾಕ್ಷಾತ್ಕರಿಸುವ ಆಕಾಂಕ್ಷೆ ಯಿಂದ ಅರ್ಥಾತ್‌ ಇಸ್ಲಾಮ್‌ ಸಾಕ್ಷಾತ್ಕರಿಸಿದ ಸತ್ಯವನ್ನು ಸಾಧಿಸುವ ಸಹಜ ಹಂಬಲದಿಂದ! ಸಾಮಾನ್ಯವಾಗಿ ಪಾಶ್ಚಾತ್ಮ ಲೋಕವು ವಿಶೇಷತಃ ಕಮ್ಮೂನಿರುಮ್‌ ಮಾನವೀಯ ಅಸ್ತಿತ್ವವನ್ನು ಆರ್ಥಿಕ ಅಸ್ತಿತ್ವವೆ೦ದು ಪರಿಗಣಿಸುತ್ತದೆ. ಸ್ತ್ರೀಗೆ ಅಸ್ತಿತ್ವವೇ ಇರಲಿಲ್ಲವೆಂದು ಅವರು ಹೇಳುತ್ತಾರೆ ಅಥವಾ ತನ್ನ ಸ್ವಾಮ್ಯದಲ್ಲಿರುವುದನ್ನು ವ್ಯವಹರಿಸುವ ಅಧಿಕಾರವೂ ಇರಲಿಲ್ಲ. ಆರ್ಥಿಕ ಸ್ವಾತಂತ್ರ್ಯ ಲಭ್ಯವಾದಾಗ ಅರ್ಥಾತ್‌ ಪುರುಷನಿಂದ ಪ್ರತೇಕವಾಗಿ, ಸ್ವಯಂ ವ್ಯವಹರಿಸುವ ಮತ್ತು ಸ್ವತಂತ್ರವಾಗಿ ಜೀವನ ನಿರ್ವಹಿಸುವ ಒಡೆತನದ ಹಕ್ಕು ಲಭ್ಯವಾದಾಗ ಮಾತ್ರ ಆಕೆಯು ಮಾನವ ಜೀವಿಯೆ೦ದು ಪರಿಗಣಿಸಲ್ಪಟ್ಟಳು. ಮಾನವ ಜೀವನವನ್ನು ಸಂಕುಚಿತ ವಲಯದಲ್ಲಿ ಬಂಧಿಸುವ ಮತ್ತು ಅದನ್ನು

'. -ಕೇಷಲ ಒಂದು ಆರ್ಥಿಕ ಘಟಕವೆ೦ದು ಪರಿಗಣಿಸುವುದನ್ನು ನಾವು ವಿರೋಧಿಸುತ್ತೇವಾದರೂ'

ತಾತ್ವಿಕವಾಗಿ ಆತ್ಮಪ್ರಜ್ಞೆ ಮತ್ತು ಭಾವನೆಗಳನ್ನು ಮೂಡಿಸುವ ನಿಟ್ಟಿನಲ್ಲಿ ಆರ್ಥಿಕ ಸ್ವಾತಂತ್ರ್ಯದ ಪಾತ್ರದ ಬಗ್ಗೆ ನಾವು ಅವರೊಂದಿಗೆ ಸಹಮತ ಹೊಂದಿದ್ದೇವೆ. ಸ್ತ್ರೀಗೆ ಸ್ವತಂತ್ರ ಆರ್ಥಿಕ ಅಸ್ತಿತ್ವವನ್ನು ನೀಡಿರುವ ಇಸ್ಲಾಮಿಗೆ, ಬಗ್ಗೆ ಹೆಮ್ಮೆ ಪಡುವ ಸಂಪೂರ್ಣ ಹಕ್ಕಿದೆ. ಯಾರ ಮಧ್ಯಸ್ಥಿಕೆ ಅಥವಾ ಹಸ್ತಕ್ಸೇಪವಿಲ್ಲದೆಯೇ ಸ್ವಯಂ -ಸ೦ಪಾದಿಸುವ, ವ್ಯವಹರಿಸುವ ಮತ್ತು ನೇರವಾಗಿ ಸಮಾಜದಲ್ಲಿ ವಹಿವಾಟು ನಡೆಸುವ ಹಕ್ಕನ್ನು ಇಸ್ಲಾಮ್‌ ಆಕೆಗೆ ನೀಡುತ್ತದೆ. ಇಸ್ಲಾಮ್‌ ಸ್ತ್ರೀಯ ಅಸ್ತಿತ್ವವನ್ನು ಕೇವಲ ಒಡೆತನದ ಹಕ್ಕಿನ ವಿಷಯದಲ್ಲಿ ಮಾತ್ರ . ಅರಿಗೀಕರಿಸಿದ್ದಲ್ಲ. ಅವಳ ಜೀವನಕ್ಕೆ ಸಂಬಂಧಿಸಿದ ಸುಪ್ರಧಾನವಾದ ವೈವಾಹಿಕ ಸಮಸ್ಯೆ ಗಳಲ್ಲಿಯೂ ಇಸ್ಲಾಮ್‌ ಆಕೆಯ ಅಸ್ತಿತ್ವವನ್ನು ಅಂಗೀಕರಿಸಿತು. ಇಸ್ಲಾಮೂ ನೀತಿಯಂತೆ, ಸ್ತ್ರೀಯ ಒಪ್ಪಿಗೆಯಿಲ್ಲದೇ ಆಕೆಯ ವಿವಾಹ ಮಾಡಿಸಬಾರದು. ಆಕೆ ಒಪ್ಪದಿದ್ದರೆ ವಿವಾಹವು ಸಿಂಧುವಾಗಲಾರದು. "ವಿಧವೆಯನ್ನು ಆಕೆಯ ಒಪ್ಪಿಗೆಯಿಲ್ಲದೇ ವಿವಾಹ ಮಾಡಿಸಬಾರದು, ಕನೈೆಯನ್ನು ಆಕೆಯ ಒಪ್ಪಿಗೆಯಿಲ್ಲದೇ ವಿವಾಹ ಮಾಡಿಸಬಾರದು. ಆಕೆಯ ಮೌನವು ಸಮ್ಮತಿಯಾಗಿದೆ" (ಬುಖಾರಿ, ಮುಸ್ಲಿಮ್‌) ತಾನು ಒಪ್ಪಿಲ್ಲವೆಂದು ಆಕೆ ಬಹಿರ೦ಗಪಡಿಸಿದರೆ ಸಂಬಂಧವು ಅಸಿ೦ಧುವಾಗುವುದು. ಇಸ್ಲಾಮೇತರ ಪದ್ಧತಿಗಳಲ್ಲಿ, ಸ್ತ್ರೀಯು ತನಗಿಷ್ಟವಿಲ್ಲದ ವಿವಾಹದಿಂದ ತಬ್ಬಿಸಿಕೊಳ್ಳ

ಬೇಕಾದರೆ ವಕ್ರ ಮಾರ್ಗಗಳನ್ನು ಅವಲಂಬಿಸಬೇಕಾಗಿತ್ತು.

ಮಹಿಳೆ ಇಸ್ಲಾಮಿನಲ್ಲಿ 13

.. ಏಕೆಂದರೆ ಕಾನೂನು. ಅಥವಾ ನಾಡ ಸಂಪ್ರದಾಯವು ಅವಳಿಗೆ ಹಕ್ಕನ್ನು ನೀಡಿರಲಿಲ್ಲ. ಆದರೆ ಇಸ್ಲಾಮ್‌ ಅನಿಷೇಧ್ಯ ಹಕ್ಕನ್ನು ಆಕೆಗೆ ನೀಡಿತು. ಅಗತ್ಯ `ಕ೦ಡಾಗ ಆಕೆಯು ಪ್ರಸ್ತುತ ಹಕ್ಕನ್ನು ಚಲಾಯಿಸಬಹುದಾಗಿತ್ತು.” ಮಾತ್ರವಲ್ಲದೆ ಆಕೆಯೇ ಸ್ವತಃ ವಿವಾಹ ಪ್ರಸ್ತಾಪ ಮಾಡಬಹುದು. ಇಸ್ಲಾಮ್‌ ಮನ್ನಣೆ ನೀಡಿದ್ದ ಹಕ್ಕಿಗೆ ಯೂರೋಪಿನಲ್ಲಿ 20ನೇ ಶತಮಾನದಲ್ಲಷ್ಟೇ . ಅಂಗೀಕಾರ ದೊರೆಯಿತು. ಆದರೂ ಯುಗಾಂತರಗಳಿಂದ “ನಡೆದು ಬಂದ-ಹೇಯ ಸಂಪ್ರದಾಯದ ಮೇಲೆ ನಾವು ಸಾಧಿಸಿದ ಮಹಾ -ವಿಜಯವೆಂದು ಅದನ್ನು ಅವರು ಡಂಗುರ ಸಾರುತ್ತಿದ್ದಾರೆ!

_ ಲೋಕವು ಅಜ್ಞಾನಾಂಧಕಾರದಲ್ಲಿ ಪರದಾಡುತ್ತಿದ್ದ ಕಾಲದಲ್ಲಿಯೇ ಇಸ್ಲಾಮ್‌ ಮಾನವ ಜೀವಕ್ಕೆ ನೀಡಿದ ಬೆಲೆಯು ಎಷ್ಟೊಂದು ಉನ್ನತವಾಗಿತ್ತು! ಜ್ಞಾನ ಮತ್ತು .ಜ್ಞಾನ ಸಂಪಾದನೆಯು ಮಾನವನ ಅನಿವಾರೃತೆಯಾಗಿ, ಪ್ರತಿಯೊಬ್ಬ ವ್ಯಕ್ತಿಯ ಕಡ್ಡಾಯ ಕರ್ತವ್ಯವಾಗಿ ಇಸ್ಲಾಮ್‌ ನಿರ್ಣಯಿಸಿತು. ವಿದ್ಯಾಭ್ಯಾಸವು ಮಾನವಕುಲದ ಕಡ್ಡಾಯ ಕರ್ತವ್ಯವಾಗಿ ಅಂಗೀಕರಿಸಲ್ಪಟ್ಟಿತು. ಮಾತ್ರವಲ್ಲ ಇದು ದೇವ ವಿಶ್ವಾಸದ ಅಂಶ -ಮತ್ತು ಉಪಾಧಿ ಯೆಂದು ಪರಿಗಣಿಸಲ್ಪಟ್ಟಿತು. ಇಲ್ಲಿ ಇತಿಹಾಸದಲ್ಲಿ ಪ್ರಥಮವಾಗಿ ಸ್ತ್ರೀಯನ್ನು ಮಾನವ ಜೀವಿಯಾಗಿ ಪರಿಗಣಿಸಿದ ಪದ್ಧತಿಯೆಂಬ ನೆಲೆಯಲ್ಲಿಯೂ ಇಸ್ಲಾಮ್‌ - ಹೆಮ್ಮೆಪಡ ಬಹುದಾಗಿದೆ. ಜ್ಞಾನ ಸ೦ಪಾದಿಸದೆ ಮಾನವ ಜೀವವು ಸ೦ಪೂರ್ಣವಾಗದು. `ಆ ವಿಷಯದಲ್ಲಿ ಸ್ತ್ರೀ-ಪುರುಷರು ಸಮಾನರು. ವಿದ್ಯಾಭ್ಯಾಸವು ಪುರುಷನಂತೆಯೇ ಸ್ತ್ರೀಗೂ ಕಡ್ಡಾಯವಾಗಿದೆ. 'ಬೌದ್ಧಿಕ ವಿಕಾಸದ ಆಹ್ಹಾನವನ್ನು ಇಸ್ಲಾಮ್‌ ಆಕೆಗೂ ನೀಡಿತು. ಆದರೆ ಯೂರೋಪಿನಲ್ಲಿ ಇತ್ತೀಚೆಗಿನ ತನಕ ಆಕೆಗೆ ಹಕ್ಕನ್ನು ನೀಡಿರಲಿಲ್ಲ. ಕಟ್ಟಕಡೆಗೆ ಅನಿವಾರ್ಯ ಪರಿಸ್ಥಿತಿಗಳ ಒತ್ತಡದಿ೦ದಾಗಿ ಅದನ್ನು ಅನುಮತಿಸಲಾಯಿತು.

kk

ಇದರಿಂದ ಇಸ್ಲಾಮ್‌ ಸ್ತ್ರೀಗೆ ನೀಡಿರುವ ಗೌರವವನ್ನು ಗ್ರಹಿಸಬಹುದು. ಪೂರ್ಮೋಕ್ಷ ರಂಗಗಳಲ್ಲಿ ಇಸ್ಲಾಮ್‌ ಸ್ತ್ರೀಯನ್ನು ದ್ವಿತೀಯ ವರ್ಗದ ಸೃಷ್ಟಿ ಅಥವಾ ಪರಾವಲಂಬಿತ- ಸೃಷ್ಟಿಯೆಂದು ಭಾವಿಸಿದೆಯೆಂದು ಯಾರೂ ವಾದಿಸಲಾರರು. ಜೀವನದಲ್ಲಿ ಆಕೆಯು ನಿರ್ವಹಿಸಬೇಕಾದ ಪಾತ್ರವನ್ನು ಅದು ಕಡೆಗಣಿಸುವುದಿಲ್ಲ. ಹಾಗಿರುತ್ತಿದ್ದರೆ ಅದು ಸ್ತ್ರೀ

3. ಪ್ರಾಯಶಃ ಇಂದಿನ ಸಾಮಾಜಿಕ-ಆರ್ಥಿಕ ಹಿನ್ನೆಲೆಯಲ್ಲಿ, ಪ್ರಚಲಿತ ಸ೦ಪ್ರದಾಯಗಳ ಮುಂದೆ ಮತ್ತು ಹಕ್ಕು ಕೇವಲ ಮಿಥೈೆಯೆ೦ಂದು ಭಾಸವಾಗಬಹುದು. ಆದರೆ ಇಸ್ಲಾಮೂ ಪದ್ಧತಿಗೆ ವಿರುದ್ಧವಾದ ಮತ್ತು ಅದರ ಕಾನೂನುಗಳನ್ನು ಅವ್ಕಾಃ ವಹಾರಿಕಗೊಳಿಸುವ ಪರಿಸ್ಥಿ. ತಿಗಳಿಗೆ ಇಸ್ಲಾಮ್‌ ಹೊಣೆಯಲ್ಲ. ಇಸ್ಲಾಮಿನ ಆರಂಭ ಹಂತದಲ್ಲಿ ಸ್ತ್ರೀಯು ತನ್ನ ಹಕ್ಕನ್ನು ಚಲಾಯಿಸಿದ್ದಳು. ಪ್ರವಾದಿ(ಸ) ಮತ್ತು ಖಲೀಫರು(ರ) ಅದಕ್ಕೆ ಮನ್ನಣೆ ನೀಡಿದ್ದರು. ಅದರ ಮುಂದಿರುವ ಆತಂಕಗಳನ್ನು ನಿವಾರಿಸಬೇಕೆ೦ದು ನಾವು ವಾದಿಸುತ್ತಿದ್ದೇವೆ. ಆತಂಕಗಳು ಆರ್ಥಿಕ-ಸಾಮಾಜಿಕ ಪದ್ಮತಿಯಾಗಿದ್ದರೂ ಇಸ್ಲಾಮೇತರ ಸಂಪ್ರದಾಯಗಳಾಗಿದ್ದರೂ ಸರಿಯೆ.

14 ಮಹಿಳೆ ಇಸ್ಲಾಮಿನಲ್ಲಿ

ವಿದ್ಯಾಭ್ಯಾಸಕ್ಕೆ ಪ್ರಾಧಾನ್ಯತೆ ನೀಡುತ್ತಿರಲಿಲ್ಲ. ವಿದ್ಯಾಭ್ಯಾಸವು ವೈಶಿಷ್ಟ್ಯಪೂರ್ಣ ಮಹತ್ವವನ್ನು ಹೊಂದಿದೆ. “ಇಸ್ಲಾಮಿನಲ್ಲಿ ಸ್ತ್ರೀಯರ ಸ್ಥಾನಮಾನವೇನೆ೦ದು ತಿಳಿಯಲು ಇತರೆಲ್ಲಾ ವಿಷಯಗಳಂ೦ತಿರಲಿ, ಕೇವಲ ಅದು ಸ್ತ್ರೀ ವಿದ್ಯಾಭ್ಯಾಸಕ್ಕೆ ನೀಡಿರುವ ಪ್ರಾಧಾನ್ಮವೇ ಧಾರಾಳ ಸಾಕು. ಅದು ದೇವ ಮತ್ತು ಮಾನವನ ಬಳಿ ಬಹಳ ಗೌರವಾರ್ಹ ಸ್ಥಾನವಷ್ಟೆ.

ಮಾನವೀಯ ಅಸ್ತಿತ್ವ ಮತ್ತು ಅದಕ್ಕೆ ಸಂಬಂಧಿಸಿದ ಹಕ್ಕುಗಳಲ್ಲಿಯೂ ಸ್ತ್ರೀ- ಪುರುಷರ ಸಮಾನತೆಯನ್ನು . ಅಂಗೀಕರಿಸಿದ ಬಳಿಕ, ಕೆಲವು ವಿಶಿಷ್ಟ ಹಕ್ಕು ಬಾಧ್ಯತೆಗಳ ವಿಷಯದಲ್ಲಿ ಅವರೀರ್ವರಲ್ಲಿಯೂ ಇಸ್ಲಾಮ್‌ ಅಂತರವನ್ನು ಕಲ್ಪಿಸಿದೆ. ಅದನ್ನು ಎತ್ತಿ ಹಿಡಿದು ಸ್ತ್ರೀ ಸ್ವಾತಂತ್ರ್ಯದ ಪ್ರಾಯೋಜಕರು ಕೂಗೆಬ್ಬಿಸುತ್ತಿದ್ದಾರೆ. ಕೆಲವು ಯುವಕರೂ, ಬರಹಗಾರರೂ, ಸುಧಾರಕರೂ ಅವರನ್ನು ಬೆಂಬಲಿಸುತ್ತಿದ್ದಾರೆ. .

ಸ್ತ್ರೀ-ಪುರುಷರ ಮಧ್ಯೆ ಇಸ್ಲಾಮ್‌ ತೋರುವ ವ್ಯತ್ಯಾಸವನ್ನು ಚರ್ಚಿಸುವುದಕ್ಕಿಂತ ಮುಂಚಿತವಾಗಿ ಬಗ್ಗೆ ದೇಹಶಾಸ್ತ್ರ, ಜೀವಶಾಸ್ತ್ರ ಮತ್ತು ಮನಃಶಾಸ್ತ್ರಗಳಲ್ಲಿರುವ ಮೂಲ ಭೂತ ಸಿದ್ಧಾಂತವನ್ನು ನಾವು ಪರಿಶೀಲಿಸೋಣ. ತರುವಾಯ ಇಸ್ಲಾಮೊ ದೃಷ್ಟಿಕೋನವನ್ನು ವಿಶ್ಲೇಷಿಸೋಣ.

ಸ್ತ್ರೀ-ಪುರುಷರು ಒಂದೇ ವರ್ಗವೇ ಅಥವಾ ಎರಡು ವರ್ಗಗಳೇ? ಈರ್ವರ ನೀತಿಯೂ ಒಂದೇ ಅಥವಾ ಎರಡೇ? ಎಂಬುದು ಪ್ರಶ್ನೆಯ ಸಾರ.

ಸ್ತ್ರೀ-ಪುರುಷರ ಮಧ್ಯೆ ದೇಹ ರಚನೆ, ಮಾನಸಿಕ ಸ್ಥಿತ್ಯಂತರ ಮತ್ತು ಜೈವಿಕ ನೀತಿಗಳಲ್ಲಿ ಯಾವುದೇ ವೃತ್ಕಾಸವಿಲ್ಲವೆ೦ದು 'ಸ್ತ್ರೀ ಸ್ವಾತ೦ತ್ರ್ಯವಾದಿ'ಗಳು ಹೇಳುವುದಿದ್ದರೆ, ನಮಗೇನೂ ಹೇಳಲಿಕ್ಕಿಲ್ಲ. ಹಾಗಲ್ಲ ಎ೦ದಾದರೆ ಅಥವಾ ವ್ಯತ್ಯಾಸಗಳನ್ನು ಅಂಗೀಕರಿಸು ವುದಿದ್ದರೆ ಬಗ್ಗೆ ಅವರೊಂದಿಗೆ ಚರ್ಚೆ ನಡೆಸುವುದಕ್ಕೆ ಅರ್ಥವಿದೆ.

` ಸ್ತ್ರೀ-ಪುರುಷ ಸಮಾನತೆಯ ಕುರಿತು "ಮಾನವ: ಇಸ್ಲಾಮ್‌ ಮತ್ತು ಲೌಕಿಕತೆಯ ಮಧ್ಯೆ" ಎ೦ಬ ನನ್ನ ಕೃತಿಯ 'ಲೈ೦ಗಿಕ ಸಮಸ್ಕೆ' ಎ೦ಬ ಸುದೀರ್ಥು ಅಧ್ಯಾಯದಲ್ಲಿ ನಾನು ಸವಿವರವಾಗಿ ಪ್ರತಿಷಾದಿಸಿದ್ದೇನೆ. ಅದರ ಕೆಲವು ವಾಕ್ಯಗಳನ್ನು ನಾನಿಲ್ಲಿ ಉಲ್ಲೇಖಿಸುತ್ತೇನೆ:

".... ನೀತಿ ಮತ್ತು ಧ್ಯೇಯಗಳಲ್ಲಿರುವ ತೀವ್ರ ಅ೦ತರದಿಂದಾಗಿ ಸ್ತ್ರೀ- ಪುರುಷರ ನೈಸರ್ಗಿಕತೆಯೂ ವಿಭಿನ್ನವಾಗಿದೆ. ಇದು ನಿಸರ್ಗವು ಅವರಿಗಾಗಿ ನಿರ್ಣಯಿಸಿದ ಮೂಲ, ಬೇಡಿಕೆಗಳ ನಿರ್ವಹಣೆಗಾಗಿದೆ. ಪ್ರತಿಯೋರ್ವರಿಗೂ ತ೦ತಮ್ಮ ನೀತಿ ನಿರ್ವಹಣೆಗೆ ಅನುಕೂಲವಾದ ರೂಪ, ವಿನ್ಯಾಸ ಮತ್ತು ಸಾಮರ್ಥ್ಯ ನೀಡಲ್ಪಟ್ಟಿದೆ. "

"ಆದ್ದರಿಂದಲೇ ಅವರ ಮಧ್ಯೆ ಯಾಂತ್ರಿಕ ಸಮಾನತೆಯನ್ನು ಅಪೇಕ್ಷಿಸುವ ಬೂಟಾಟಿಕೆಯ ಅರ್ಥವನ್ನು ನನ್ನಿ೦ದ ಗ್ರಹಿಸಲಾಗಿಲ್ಲ. ಮಾನವೀಯ ಸಮಾನತೆಯೆ೦ಬುದು ಸ್ವಾಭಾವಿಕವಾಗಿದ್ದು, ಸುಲಭ ಗ್ರಾಹ್ಮವಾದ ಬೇಡಿಕೆಯೂ ಆಗಿದೆ. ಸ್ತ್ರೀ-ಪುರುಷರು ಮಾನವ ವರ್ಗದ ಎರಡು ಅಂಗಗಳಾಗಿದ್ದಾರೆ. ಒಂದೇ ಆತ್ಮದ ಎರಡು ಅಂಶಗಳು. ಆದರೆ ಜೀವನದ ಎಲ್ಲ ಕ್ರಿಯೆಗಳಲ್ಲಿಯೂ ಅವರ ಮಧ್ಯೆ ಸಮಾನತೆ ಪಾಲಿಸಬೇಕೆಂದು ಒತ್ತಾಯಿಸಿದರೆ, '

ಮಹಿಳೆ ಇಸ್ಲಾಮಿನಲ್ಲಿ ` 15

ಅದನ್ನು ಕಾರೃಗತೆಗೊಳಿಸುವುದು ಹೇಗೆ? ಲೋಕದ ಸ್ತ್ರೀಯರೆಲ್ಲರೂ ಸರ್ವಾನುಮತದಿಂದ ಒಂದು ಠರಾವು ಅಂಗೀಕರಿಸಿದರೂ ಅದು ಕಾರ್ಯಗತವಾದೀತೇ? ಮಾನವನ ನೈಸರ್ಗಿಕತೆಯನ್ನು ಬದಲಾಯಿಸಲು ಸಮ್ಮೇಳನ ಮತ್ತು ಶರಾವುಗಳಿ೦ದ ಸಾಧ್ಯವಾದೀತೇ? ಗರ್ಭಧಾರಣೆ, ಪ್ರಸವ ಮತ್ತು ಮೊಲೆಯೂಡಿಸುವುದರಲ್ಲಿ ಪುರುಷನು ಸ್ತ್ರೀತ್ವದಲ್ಲಿ ಸಹಭಾಗಿಯಾಗಲು ಸಾಧ್ಯವಿದೆಯೇ?"

"ಮಾನಸಿಕ ಮತ್ತು ದೈಹಿಕವಾದ ವಿಶಿಷ್ಟ ವ್ಯವಸ್ಥೆಯ ಹೊರತು ಜೈವಿಕ ಪ್ರತಿಕ್ರಿಯೆ ಗಳನ್ನು ನಿರ್ವಹಿಸಲಾದೀತೇ? ಗರ್ಭಧಾರಣೆ ಮತ್ತು ಸ್ತನ ಹಾಲಿಗೆ ಒಂದು ಪ್ರತ್ಯೇಕ ವರ್ಗವನ್ನು ನಿರ್ಧರಿಸುವಾಗ ಅವರ ಮನೋಭಾವನೆ ಮತ್ತು ಮಾನಸಿಕ ಸಾಮರ್ಥ್ಯಗಳನ್ನು ಘನ ಕರ್ತವ್ಯದ ಪೂರೈಕೆಗೆ ಅನುಗುಣವಾದ ರೀತಿಯಲ್ಲಿ ಸಿದ್ಧಪಡಿಸಬೇಕಾಗಿಲ್ಲವೇ?"

"ಮಾತೃತ್ವವು ಉದಾತ್ತ "ಭಾವನೆ, ಉತ್ಕೃಷ್ಟ ವರ್ತನೆ, ನಿರಂತರ ಶ್ರಮಿಸುವ ತಾಳ್ಮೆ, ಪರಿಶೀಲನೆ ಮತ್ತು ನಡವಳಿಕೆಗಳಲ್ಲಿ ಅತಿ ಕೋಮಲ ಮನೋಭಾವವನ್ನು ಒಳೆಗೊಂಡದ್ದಾಗಿದೆ. ಮಾತೃತ್ವದಲ್ಲಿ ಗರ್ಭಧಾರಣೆ ಮತ್ತು ಮೊಲೆಯುಣ್ಣಿಸುವ ದೇಹ ರಚನೆಯಲ್ಲಿ, ಮಾನಸಿಕ, ಬೌದ್ಧಿಕ ಮತ್ತು ಭಾವನಾತ್ಮಕ ಸಂಬಂಧವೂ ಅಡಕವಾಗಿದೆ. ಎರಡೂ ಅಂಶಗಳು ಪರಸ್ಪರ ಪೂರಕ ಮತ್ತು ಸಮ್ಮಿಳಿತವಾಗಿವೆ. ಅದರಲ್ಲಿ ಒಂದನ್ನು ಇನ್ನೊಂದರಿಂದ ಬೇರ್ಪಡಿಸಿ ತೆಗೆಯಲು ಸಾಧ್ಯವಿಲ್ಲ. ಅವು ಒಂಟಿಯಾಗಿರುವುದು ಅತ್ಯಪೂರ್ವ ಅದ್ಭುತವಾಗಿರಬಹುದು."

"ಕೋಮಲ ಭಾವನೆ, ಮೃದು ಮನಸ್ಸು, ಕರುಣಾಮಯ ಹೃದಯ, ಫಕ್ಕನೆ ಪ್ರತಿಕ್ರಿಯಿಸುವ ಸ್ವಭಾವ... ಇತ್ಯಾದಿ ವಿಶಿಷ್ಟತೆಗಳೆಲ್ಲವೂ ಆಕೆಯ ವಿಚಾರದ ಬದಲಾಗಿ ಭಾವನೆಯ , ಮಟ್ಟವನ್ನು ಉನ್ನತಗೊಳಿಸುತ್ತದೆ. ನಿರಂತರ ಹೊರ ಚಿಮ್ಮುವ ಪ್ರೀತಿ ವಾತ್ಸಲ್ಯ, ಪ್ರಥಮ ಸ್ಪರ್ಶದಲ್ಲಿಯೇ ತುಂಬಿ ಹರಿಯುವ ಭಾವಪರವಶತೆ ಇತ್ಯಾದಿಗಳು ಮಾತೃತ್ವದ ಪ್ರಾಮುಖ್ಯ ಘಟಕಗಳಾಗಿವೆ. ಶೈಶವದ ಬೇಡಿಕೆಗಳಿಗೆ ಕ್ಷಿಪ್ರ ಅಥವಾ ತಡವಾಗಿ ಪ್ರತಿಕ್ರಿಯಿಸುವ ಅಥವಾ ಪ್ರತಿಕ್ರಿಯಿಸದಿರುವ ವಿಚಾರಗಳ ಬದಲಿಗೆ ಹೆಚ್ಚು ಆಲೋಚಿಸದೆ ತಕ್ಷಣ ಸ್ಪಂದಿಸುವ ಸುಕೋಮಲ ಭಾವನೆಗಳ ಅಗತ್ಯವಿದೆ."

ಇವೆಲ್ಲವೂ ಸ್ತ್ರೀ ಸಹಜ ಗುಣವಾಗಿದ್ದು ಆಕೆಯ ನೈಜ ನೀತಿ ನಿರ್ವಹಣೆಗೆ ಅತ್ಯಗತ್ಯವಾಗಿರುವ ಉತ್ತಮ ವ್ಯವಸ್ಥೆಯಾಗಿದೆ.

ಆದರೆ ಪುರುಷನು ಸ್ತ್ರೀಗಿ೦ತ ಭಿನ್ನವಾದ ಕರ್ತವ್ಯಗಳನ್ನು ನಿರ್ವಹಿಸಬೇಕಾಗಿದೆ. ಆದ್ದರಿಂದಲೇ" ಆತನು ಭಿನ್ನ ಸ್ವಭಾವವನ್ನು ಹೊಂದಿದ್ದಾನೆ. ಬಾಹ್ಮ ಜಗತ್ತಿನ ಜೀವನ ಹೋರಾಟವೇ ಆತನ ಕರ್ತವ್ಯ. ಪ್ರಸ್ತುತ ಹೋರಾಟವು ವನ್ಯಮೃಗಗಳೊಂದಿಗಿರ ಬಹುದು. ಭೂಮಿ-ಆಕಾಶಗಳ ನೈಸರ್ಗಿಕ ಶಕ್ತಿಗಳ ವಿರುದ್ಧವಾಗಿರಬಹುದು. ಆಡಳಿತ ವ್ಯವಸ್ಥೆ ಅಥವಾ ಆರ್ಥಿಕ ಪದ್ಧತಿಯ ಸ್ಥಾಪನೆಗಾಗಿರುವ ಹೋರಾಟವಾಗಿರಬಹುದು. ಇವೆಲ್ಲವೂ ಆತನ ಜೀವನ ನಿರ್ವಹಣೆಗೆ ಮತ್ತು ತನ್ನನ್ನೂ ತನ್ನ ಕುಟುಂಬವನ್ನೂ ವೈರಿಗಳಿಂದ ರಕ್ಷಿಸುವುದಕ್ಕೆ ಅನಿವಾರ್ಯವಾಗಿದೆ.

16 ಮಹಿಳೆ ಇಸ್ಲಾಮಿನಲ್ಲಿ

ಕರ್ತವ್ಯ ನಿರ್ವಹಣೆಗೆ ಉಕ್ಕೇರುವ ಭಾವಾವೇಶವು ಪ್ರೇರಕ ಶಕ್ತಿಯಾಗಬಾರದು. ಅದು ಹಿತಕ್ಕಿಂತ ಹೆಚ್ಚು ಹಾನಿಕರವಾದೀತು.

ಭಾವನೆಗಳು ವಿರುದ್ಧ ದಿಕ್ಕುಗಳಿಗೆ ಓಲಾಡುತ್ತಿರುತ್ತದೆ. ಒಂದೇ ಕಡೆ ಸ್ಥಿರವಾಗಿರಲು ಅದಕ್ಕೆ ಸಾಧ್ಯವಿಲ್ಲ. ಅದು ಪದೇ ಪದೇ ಬದಲಾಗುತ್ತಿರುವ ಮಾತೃತ್ವದ ಹಿತಾಸಕ್ತಿಗಳಿಗೆ ಸರಿ ಹೊಂದುತ್ತದೆ. ಯೋಜನಾಬದ್ಧ ಕಾರ್ಯಕ್ರಮದಂತೆ ಹೆಚ್ಚು ಕಾಲ ಏಕಾಗ್ರತೆಯಿಂದ ನಿರ್ವಹಿಸಬೇಕಾದ ಕಾರ್ಯಗಳಿಗೆ ಅದು ಸಾಕಾಗುವುದಿಲ್ಲ. ಅದಕ್ಕೆ ಬುದ್ಧಿಶಕ್ತಿಯ ಅಗತ್ಯವಿದೆ. ಸ್ಟಾಭಾವಿಕವಾಗಿಯೂ ಸಾವಧಾನದಿಂದ ವಿಷಯವನ್ನು ಗ್ರಹಿಸಿ, ಹೆಜ್ಜೆಯಿರಿಸುವುದಕ್ಕಿಂತ ಮುಂಚೆ ಅದರ ಪರಿಣಾಮದ ಕುರಿತು ದೀರ್ಥ ದೃಷ್ಟಿಯಿಂದ ಪರಿಶೀಲಿಸಲು ಆಲೋಚನೆಯ ಅಗತ್ಯವಿದೆ. ಅದರ ಪ್ರತಿಕ್ರಿಯೆಯು ಉಕ್ಕೇರುವ ಭಾವನೆಗಿಂತ ನಿಧಾನವಾಗಿರುವುದು. ಅದರ ಸ್ವಭಾವವು ಚಂಚಲವಲ್ಲ. ಸಾಮರ್ಥ್ಯ ಮತ್ತು ಸಂಭಾವೃತೆಗಳ ಬಗ್ಗೆ ಗರಿಷ್ಠವಾಗಿ ಅಂದಾಜಿಸಿ ನಿರ್ದಿಷ್ಟ ಧ್ಯೇಯ ಸಾಧನೆಗೆ ಸೂಕ್ತವಾದ ಮಾರ್ಗೋಪಾಯಗಳ ಅವಲಂಬನೆಗೆ ಬುದ್ಧಿಶಕ್ತಿ, ವಿಚಾರವೇ ಪರ್ಯಾಪ್ತವಾಗಿದೆ. ವನ್ಯಮೃಗಗಳ ಬೇಟೆ, ಯಂತ್ರಗಳ ಸಂಶೋಧನೆ, ಹೊಸ ಆರ್ಥಿಕ ಪದ್ಧತಿಯ ರಚನೆ, ಸರಕಾರ ರಚನೆ, ಯುದ್ಧ ಸನ್ನಾಹ, ಶಾಂತಿ ಸ್ಥಾಪನೆ ಇತ್ಯಾದಿ ಯಾವುದೇ ಧ್ಯೇಯ ಸಾಧನೆಗೂ ವೈಚಾರಿಕ ಕ್ರಿಯೆಯ ಅಗತ್ಯವಿದೆ. ಭಾವನೆಗಳ ಚಂಚಲತೆಯು ಅವುಗಳನ್ನು ಕೆಡಿಸುವುದು.

"ಒಟ್ಟಿನಲ್ಲಿ, ಪುರುಷನು. ಆತನ ನೈಸರ್ಗಿಕ ನೀತಿ ನಿರ್ವಹಣೆಗೆ ಪೂರಕವಾದ ರಚನೆಯನ್ನು ಹೊಂದಿದ್ದಾನೆ."

"ಸ್ತ್ರೀ-ಪುರುಷರಲ್ಲಿ ನೈಸರ್ಗಿಕವಾಗಿರುವ ಬಹುತೇಕ ಅ೦ತರಗಳ ವಿವರಣೆಗಳು ನಮಗೆ ಇದರಿಂದ ಲಭ್ಯವಾಗುತ್ತದೆ. ಭಾವನಾತ್ಮಕ ರಂಗದಲ್ಲಿ ಒಂದು ಮಗುವಿನಂತೆ ಓಲಾಡುವ ಪುರುಷನು, ಕರ್ತವ್ಯ ನಿರ್ವಹಣೆಯ ವೇಳೆ ತನ್ನ ದೈಹಿಕ-ವೈಚಾರಿಕ ಸಾಮರ್ಥ್ಯಗಳನ್ನು ಸಾವಧಾನವಾಗಿ -ಬಳಸುವ ರಹಸ್ಯವು ಇದೇ ಆಗಿದೆ. ಅದೇ ಸಂದರ್ಭದಲ್ಲಿ ಸ್ತ್ರೀಗೆ ಪುರುಷ ನೊಂದಿಗಿರುವ ಭಾವನಾತ್ಮಕ ಸಂಬಂಧಗಳಲ್ಲಿ ಹೆಚ್ಚಿನ ಸ್ಥಿರತೆ ಪಾಲಿಸಲು ಸಾಧ್ಯ ವಾಗುತ್ತದೆ. ಭಾವನಾತ್ಮಕ ಸಂಬಂಧಗಳನ್ನು ಸ್ಥಾಪಿಸಲು ಮತ್ತು ನಿಯಂತ್ರಿಸಲು ಸ್ತ್ರೀಯು ವಿಶೇಷ ಸಾಮರ್ಥ್ಯವನ್ನು ಹೊಂದಿದ್ದಾಳೆ. ಅದಕ್ಕೆ ಬೇಕಾದ ಕಾರ್ಯಕ್ರಮಗಳನ್ನು ಸಂಯೋಜಿಸಿ ಹಿನ್ನೆಲೆಗಳನ್ನು ಸಿದ್ಧಪಡಿಸಿ, ಅದರಿಂದ ಆನಂದ ಪಡೆಯುವುದೇ ಆಕೆಯ ವರ್ತನೆ! ಹಾಗಲ್ಲದೇ ಆಕೆಯ ಸ್ವಭಾವವನ್ನು ಆ೦ಶಿಕವಾಗಿಯಾದರೂ ಮೆಚ್ಚಿಸದ ಕೆಲಸದಿಂದ ಆಕೆಗೆ ನೆಮ್ಮದಿ ಪಡೆಯಲು ಸಾಧ್ಯವಿಲ್ಲ. ರೋಗಿಗಳ ಶುಶ್ರೂಷೆ, ಆರೈಕೆ ಮತ್ತು ಶಿಶುಪಾಲನೆ ಯಂತೆ- ವ್ಯಾಪಾರೀ ಸಂಸ್ಥೆಯಲ್ಲಿ "ಕೆಲಸ ಮಾಡುವಾಗಲೂ ಆಕೆಯ ಭಾವನಾತ್ಮಕ ಸ್ವಭಾವವನ್ನು ಆಂಶಿಕವಾಗಿ ಸಂತೃಪ್ರಗೊಳಿಸುವ ಒಂದು ವಿಷಯವಿದೆ, ಓರ್ವ ಜತೆಗಾರನ ಅನ್ವೇಷಣೆ. ಆದರೆ ಕೆಲಸಗಳಾವುವೂ ಆಕೆಯ ಮೂಲಭೂತ ಕರ್ತವ್ಯಕ್ಕೆ ಪರ್ಯಾಯ ವಾಗುವುದಿಲ್ಲ. ಅರ್ಥಾತ್‌ ಓರ್ವ ಯಜಮಾನ, ಮನೆ, ಕುಟುಂಬ ಮತ್ತು ಸ೦ತಾನಗಳನ್ನು

ಮಹಿಳೆ: ಇಸ್ಲಾಮಿನಲ್ಲಿ : 1

ಹೊಂದಿರುವ ಸ್ಥಿತಿಯನ್ನು ಸಾಧಿಸುವ ಮೂಲ ಧ್ಯೇಯಕ್ಕೆ ಅವು-ಪರ್ಯಾಯವಾಗುವುದಿಲ್ಲ. ಅವಳ ಮೂಲ ಕರ್ತವ್ಯಕ್ಕೆ ಸಂದರ್ಭವೊದಗಿದಾಗ ಆಕೆ ಇತರೆಲ್ಲಾ ಕೆಲಸಗಳನ್ನು ತೊರೆಯಲು ಸಿದ್ಧಳಾಗಬಹುದು. ಕೇವಲ ಆರ್ಥಿಕ ಚು ಯು ತೀವ್ರ ಸುಟ್ಟು ಆಕೆಯನ್ನು ಅದರಿಂದ. "ತಡೆಯಬಹುದು."

"ಅಂದರೆ ಎರಡೂ ವರ್ಗಗಳಿಗೆ ಪರಸ್ಪರ ಯಾವುದೇ ಸು ವೆಂದರ್ಥವಲ್ಲ. ಹಾಗೆಯೇ ಇವರಲ್ಲಿ ಒಂದು ` i: ಇನ್ನೊ೦ದು ವರ್ಗದ ಕೆಲಸಕ್ಕೆ ಸದಾ ಯೋಗ್ಯವಲ್ಲ ವೆಂದೂ ಇದರರ್ಥವಲ್ಲ...

"ಆದ್ದರಿ೦ದ ಉಭಯ ವರ್ಗಗಳೂ ವಿಭಿನ್ನ ಗಳಲ್ಲಿ ಸಮಾನವಾಗಿದೆ. ಆಡಳಿತ, ನ್ಯಾಯ ತೀರ್ಮಾನ, ಹೊರೆ ಹೊರುವುದು, ಯುದ್ಧ » ಹೋರಾಟ ಇತ್ಯಾದಿಗಳ ಯೋಗ್ಯತೆ . . ಯಿರುವ ಹೆಣ್ಣಿರಬಹುದು. ಹಾಗೆಯೇ ಅಡಿಗೆ ಕೆಲಸ, ಕುಟುಂಬ ನಿರ್ವಹಣೆ; ಸ್ತ್ರೀ ಸಹಜ

ಮಾತೃ- ವಾತ್ಸಲ್ಯದಿ೦ದ ಮಕ್ಕಳ ಪಾಲನೆ ಪೋಷಣೆ ಅಥವಾ ಪ್ರತಿಕ್ಷಣವೂ ಚ೦ಚಲವಾಗುವ ` ವಿರುದ್ಧ ಭಾವನೆಗಳಿಗನುಗುಣವಾಗಿ ಡೋಲಾಯಮಾನವಾಗುವ ಕೋಮಲ ಹೃದಯ ಹೊಂದಿರುವ ಪುರುಷರಿರಬಹುದು.... ಅದರಲ್ಲಿ ಏನೂ ಅಸಹಜತೆಯಿಲ್ಲ. ಅದು ಉಭಯ ವರ್ಗಗಳೂ ಒಂದೇ ಅಸ್ತಿತ್ವದ ಎರಡು ಅ೦ಶಗಳೆನ್ನುವುದರ ಪರಿಣಾಮ ಮಾತ್ರವಾಗಿದೆ. ಆದರೆ ಇದು. ಕುಲಗೆಟ್ಟ ಪಾಶ್ಚಾತ ಲೋಕದ ಹಾಗೂ ವಿಚ್ಛಿದ್ರವಾಗಿರುವ ಪೌರ್ವಾತ್ಮ ಲೋಕದ ದಿಗಂತದಲ್ಲಿ ಮೊಳಗುತ್ತಿರುವ ಪೊಳ್ಳುವಾದದ ಕೋಲಾಹಲಗಳಿಗೆ ಸಮರ್ಥನೆ . ಯಾಗುವುದಿಲ್ಲ. ಪ್ರಸ್ತುತ ಸಮಸ್ಯೆಯನ್ನು ನೈಜ ರೂಪದಲ್ಲಿ ಹೀಗೆ ಪ್ರಸ್ತುತಪಡಿಸಬೇಕು: ಮೂಲಭೂತ ಕರ್ತವ್ಯಗಳಿಗೆ ಮೂರಿ, ' ಸ್ತ್ರೀಯು ಮಾಡುವ ಇಂತಹ ಕೆಲಸಗಳು ಆಕೆಯ ಮೂಲಭೂತ ಕರ್ತವ್ಯಕ್ಕೆ ಪರ್ಯಾಯವಾದೀತೇ? ಅದರಿಂದ ಆಕೆಗೆ. ಮನೆ, ಕುಟುಂಬ, ಸ೦ತಾನಗಳ ನೈಸರ್ಗಿಕ ಹಂಬಲದಿಂದ `ವಿಮೋಚನೆ ನೀಡೀತೇ? . ಲೈಂಗಿಕಾಸಕ್ತಿ . ಮತ್ತು ದೇಹೇಚ್ಛೆಯ ಮಾತಂತಿರಲಿ, ತನ್ನ ಕುಟು೦ಬಕ್ಕೋರ್ವ `ಯಜಮಾನನಿಗಾಗಿ ಓರ್ವ ಜೀವನ ಸಂಗಾತಿಗಾಗಿರುವ ಆಕೆಯ ಪಯಣವು ಎ೦ದಾದರೂ ಕೊನೆಗೊಂಡೀತೇ?" ನೈಸರ್ಗಿಕವಾಗಿ ಸ್ತ್ರೀ-ಪುರುಷರಲ್ಲಿರುವ ಭಿನ್ನತೆಯ ವಾಸ್ತವಿಕತೆಯನ್ನು ನಾವು ಮನಗಂಡೆವು. ಇನ್ನು ಇಸ್ಲಾಮ್‌ ಅವರ ಮಧ್ಯೆ ಇರಿಸಿರುವ ವೃತ್ಕಾಸವೇನೆಂದು ನೋಡೋಣ. ಇಸ್ಲಾಮ್‌ ಒಂದು ವ್ಯಾವಹಾರಿಕ ಪದ್ಧತಿಯೆಂಬುದೇ ಅದರ ಮಹಾ "ವೈಶಿಷ್ಟ ವಾಗಿದೆ. ಅದು ಸದಾ ಮಾನವ ಗುಣದೊಂದಿಗೆ ಸಾಮರಸ್ಕದಿ೦ದ ಸಾಗಲು ಪ್ರಯತ್ನಿಸುತ್ತದೆ. ಅದು ನಿಸರ್ಗದೊಂದಿಗೆ ಸಂಘರ್ಷಿಸುವುದಿಲ್ಲ ಅಥವಾ: ಅದರ. ಹಾದಿಯಿ೦ದ. ವಿಮುಖ 'ವಾಗುವುದಿಲ್ಲ. ಅದು ಮಾನವರಿಂದ ಮಾನವೀಯ ಗುಣದ ಸಂಸ್ಕರಣೆ ಮತ್ತು ಉನ್ನತಿಯನ್ನು | ಅಪೇಕ್ಷಿಸುತ್ತದೆ. ಅದು ಪ್ರಸ್ತುತ ರಂಗದಲ್ಲಿ ಕಾಲ್ಪನಿಕ ಮತ್ತು' ಅಸಂಭವವೆಂಬಷ್ಟರ ಮಟ್ಟಿಗೆ ಅತ್ಯದ್ಭುತ ಮಾದರಿಯನ್ನು ಕೊಡುಗೆಯಿತ್ತಿದೆ. ಆದರೂ ಸಂಸ್ಕರಣೆಗಾಗಿ ನೈಸರ್ಗಿಕತೆಯನ್ನೇ ಬದಲಾಯಿಸಬೇಕೆಂದು ಅದು ಒತ್ತಾಯಿಸುವುದಿಲ್ಲ. ಅಥವಾ ಒಂದು

18 ಮಹಿಳೆ ಇಸ್ಲಾಮಿನಲ್ಲಿ

ವೇಳೆ ಬದಲಾಯಿಸಲು ಸಾಧ್ಯವಾದರೂ ಅದರಿಂದ ಮಾನವ ಜೇವನಕ್ಕೆ ಪ್ರಯೋಜನ ವಾದೀತೆ೦ದು ಅದು ನಂಬುವುದಿಲ್ಲ. ನೈಸರ್ಗಿಕ ಸಾಮರಸ್ಕದಂದ ಅದನ್ನು ಸಂಸ್ಕರಿಸಿ ಲೌಕಿಕ ಹಿತಾಸಕ್ತಿಗಳಿಗತೀತವಾಗಿ, ನಿಷ್ಕಾಮ ಕರ್ಮಗಳ ಉದಾತ್ತ, ಸುಂದರವಾದ ದಿಗರಿತ ಕೈೇರುವುದೇ ಮಾನವನು ಸಾಧಿಸಬಹುದಾದ ಉನ್ನತಿಯೆ೦ದು ಅದು ಭಾವಿಸುತ್ತದೆ.

ಅದು ಸ್ತ್ರೀ-ಪುರುಷ ಸಮಸ್ಯೆಯಲ್ಲಿ ಮಾನವನಿಗೆ ನೈಸರ್ಗಿಕವಾಗಿ ಯೋಗ್ಯವಾದ ವ್ಯಾವಹಾರಿಕ ಮಾರ್ಗವನ್ನೇ ಅವಲಂಬಿಸಿದೆ. ನೈಜ ಗುಣದ ಆಗ್ರಹವೆಂಬ ನೆಲೆಯಲ್ಲಿ ಅದು ಉಭಯತ್ರರಲ್ಲಿ ಸಮಾನತೆಯನ್ನು ಸ್ಥಾಪಿಸುತ್ತದೆ. ನೈಸರ್ಗಿಕ ಆಗ್ರಹವೆಂಬ ನೆಲೆಯಲ್ಲಿಯೇ ಅವರೀರ್ವರಲ್ಲಿ ಭಿನ್ನತೆಯನ್ನು ಕಲ್ಪಿಸುತ್ತದೆ. ವಿಭಿನ್ನತೆಗೆ ಸಂಬಂಧಿಸಿದ ಮುಖ್ಯ ವಿಚಾರಗಳಲ್ಲಿ ವಾರೀಸು ಸೊತ್ತಿನ ಹಂಚಿಕೆ ಮತ್ತು ಕುಟುಂಬ ನಾಯಕತ್ವಗಳು ಉದಾಹರಣೆಯಾಗಿವೆ. -

ವಾರೀಸು ಸೊತ್ತಿನ ಕುರಿತು ಇಸ್ಲಾಮ್‌ ಹೇಳುತ್ತದೆ: "ಪುರುಷನಿಗೆ ಈರ್ವರು ಸ್ತ್ರೀಯರಿಗೆ ಸಮಾನವಾದ ಪಾಲಿದೆ." ಅದು ನಿಜ ಆದರೆ ಅದರೊಂದಿಗೆ ಸ್ತ್ರೀಯ ಸಂರಕ್ಷಣೆಯ ಹೊಣೆಯೂ ಪುರುಪನಿಗಿದೆಯೆಂದು ಇಸ್ಲಾಮ್‌ ಹೇಳುತ್ತದೆ. ಸ್ತ್ರೀಗೆ ತನ್ನ ಸಂಪತ್ತಿನಿಂದ 'ಖಾಸಗೀ ಕಾರ್ಯಗಳಿಗೆ ಹೊರತು ಖರ್ಚು ಮಾಡಬೇಕಾಗುವುದಿಲ್ಲ.(ಆಕೆ ಕುಟುಂಬ ನಾಯಕಿಯಾಗುವ ಸನ್ನಿವೇಶಗಳು ಮಾತ್ರ ಇದಕ್ಕೆ ಅಪವಾದವಾಗಿದೆ. ಆದರೆ . ಇಸ್ಲಾಮೊ ಪದ್ಧತಿಯಲ್ಲಿ ಅಂತಹ ಸ್ಥಿತಿ ತೀರಾ ಅಪರೂಪವಾಗಿರುವುದು. ಏಕೆಂದರೆ ಅಂತಹ ಸಂದರ್ಭಗಳಲ್ಲಿ ಸಂರಕ್ಷಣೆಯ ಹೊಣೆಯು ಆಕೆಯ ಹತ್ತಿರದ ಸಂಬಂಧಿಕರ ಮೇಲಿರುವುದು) ಹಾಗಿದ್ದರೆ ಸಂಪೂರ್ಣ ಸಮಾನತೆಯ ತುತ್ತೂರಿಗಾರರು ಹೇಳುವ ಹಕ್ಕು ಉಲ್ಲಂಘನೆ ಎಲ್ಲಿದೆ? ಆದರೆ ಇಲ್ಲಿ ವಿಚಾರಾರ್ಹವಾದ ಇನ್ನೊಂದು ಪ್ರಶ್ನೆಯಿದೆ. ಸ್ತ್ರೀಯು ಸಾಮಾನ್ಯವಾಗಿ ವಾರೀಸು ಸೊತ್ತಿನ 1 ಅಂಶವನ್ನು ತನ್ನ ಸ್ವಂತ ಅವಶ್ಯಕತೆಗಳಿಗಾಗಿ ಪಡೆಯುತ್ತಾಳೆ. ಪುರುಷನು ಪ್ರಥಮವಾಗಿ ಪತ್ನಿಗೆ ಅರ್ಥಾತ್‌" ಸ್ತ್ರೀಗೆ-ಎರಡನೇಯದಾಗಿ ಕುಟುಂಬ ಮತ್ತು ಸಂತಾನಗಳಿಗೆ ವ್ಯಯಿಸಲಿಕ್ಕಾಗಿ ಅದರ 3/, ಪಾಲನ್ನು ಪಡೆಯುತ್ತಾನೆ. ಹಾಗಾದರೆ ಲಾಭ ಯಾರಿಗೆ? ಹೆಚ್ಚು ಗಮನ ಮತ್ತು ಗಳಿಕೆ ಯಾರಿಗೆ?

ವಿವಾಹವಾಗದೆ, ಕುಟುಂಬ ಪೋಷಣೆ ಮಾಡದೆ, ಸ್ವಂತಕ್ಕಾಗಿ ಎಲ್ಲವನ್ನೂ ಖರ್ಚು ಮಾಡುವ ಪುರುಷರು ಅಪರೂಪಕ್ಕೊಬ್ಬರಿರಬಹುದು. ಸಾಮಾನ್ಯವಾಗಿ ಪುರುಷನು ಪತ್ನಿಯ ನ್ನೊಳೆಗೊಂಡ ಸಂಪೂರ್ಣ ಕುಟುಂಬದ ಸಂರಕ್ಷಣೆಗಾಗಿ ವ್ಯಯಿಸುತ್ತಾನೆ. ವ್ಯಯವನ್ನು . ಆತನು ತನ್ನ ಸ್ಟೇಚ್ಛೆಯಂತೆ ಮಾಡುವುದಲ್ಲ, ಅದು ತನ್ನ ಕರ್ತವ್ಯವೆಂಬ. ನೆಲೆಯಲ್ಲಿ ಮಾಡುತ್ತಾನೆ. ಆಕೆಗೆ ಎಷ್ಟೇ ಸಂಪತ್ತಿದ್ದರೂ ಆಕೆಯ ಸ೦ಪೂರ್ಣ ಸಮ್ಮತಿಯಿಲ್ಲದೇ ಆದರಲ್ಲಿ ಹಸ್ತೆಕ್ಟೇಪಿಸುವ ಹಕ್ಕು ' ಆತನಿಗಿಲ್ಲ. ಆಕೆಯಲ್ಲಿ ಸ್ವಂತವಾಗಿ ಏನೂ. ಸ೦ಪತ್ತಿಲ್ಲ ವೆಂಬಂತೆ ಆಕೆಗಾಗಿ ಖರ್ಚು ಮಾಡುವುದು ಆತನಿಗೆ' ನಿರ್ಬ೦ಧವಾಗಿದೆ. ಆತನು ಅದಕ್ಕೆ ಅಸಮೃತಿಸಿದರೆ ಆತನ ವಿರುದ್ಧ ಬಗ್ಗೆ ದೂರು ನೀಡಲೂ ಆಕೆಗೆ ಹಕ್ಕಿದೆ. ಇನ್ನು,

ಮಹಿಳೆ ಇಸ್ಲಾಮಿನಲ್ಲಿ '` 19,

ಆತ ತನ್ನ ಸಾಮಥ್ಯ ಕ್ಕ ೦ತ ಕಡಿಮೆ ಖರ್ಚು ಮಾಡಿದರೂ ಆಕೆ ದೂರು ಸಲ್ಲಿ; ಸಬಹುದು. ಕಾನೂನಿನ ನ್ಯಾಯವು ಆಕೆಯ ಪರವಾಗಿರುವುದು. ಕೆಲವೊಮ್ಮೆ ಸಂಬಂಧವನ್ನು ವಿಚ್ಛೇದಿಸ. ಬೇಕೆಂಬ ತೀರ್ಪು ದೊರೆಯಬಹುದು. ಒಟ್ಟಿನಲ್ಲಿ, ಸ್ತ್ರೀಗೆ ಸೊತ್ತಿನಲ್ಲಿ ದೊರೆಯುವ ಪಾಲಿನ | ಕುರಿತು ಇನ್ನಾವ ಸಂದೇಹ ಬಾಕಿಯಿದೆ? : :ಪ್ರೀಗಿಲ್ಲದ ಕರ್ತವ್ಯಗಳನ್ನು “ಪುರುಷನ ಮೇಲೆ: ಹೊರಿಸಿ ' ಆಕೆಯ ಇಮ್ಮಡಿ, ಪಾಲು ಆತನಿಗೆ ನೀಡಬೇಕೆಂಬ ನೀತಿಯಲ್ಲಿ. ವಾಸ್ತವಿಕವಾಗಿ ಆರ್ಥಿಕ - ದೃಷ್ಟಿಕೋನದಲ್ಲಿ ಏನಾದರೂ ಪಕ್ಷಪಾತವಿದೆಯೇ?' | ಸ್ತ್ರೀ-ಪುರುಷರ ಪರಸ್ಪರ ನಿಷ್ಟತ್ತಿಯು ಪರಿಶ್ರಮವಿಲ್ಲದೇ ಲಭ್ಯ ವಾಗುವ ವಾರೀಸು ` ಸೊತ್ತಿನಲ್ಲಿ ಮಾತ್ರವಾಗಿದೆ. . ಅದನ್ನು” ಇತಿಹಾಸದ ಅತಂತ ನ್ಯಾಯೋಚಿತ ಕಾನೂನಿನಂತೆ ವಿತರಣೆ: ಮಾಡಲಾಗುತ್ತದೆ.. ಅರ್ಥಾತ್‌ - ಪ್ರತಿಯೊಬ್ಬರಿಗೂ ತಂತಮ್ಮ ಅವಶ್ಯಕತೆಗಳಿಗೆ ತಕ್ಕಂತೆ ಇರುವುದು. ಆವಶ್ಶಕತೆಯ ಮಾಪಕವು ಅವರ ಮೇಲೆ `ಹೊರಿಸಲ್ಪಟ್ಟಿ ಜವಾಬ್ದಾರಿಕೆ ಗಳಾಗಿವೆ. -ಸ್ವಸ೦ಪಾದನೆಯ ಮಟ್ಟಿಗೆ ಸ್ತ್ರೀ-ಪುರುಷರ ಮಧ್ಯೆ ಯಾವ ಪಕ್ಸಪಾತವೂ ಇಲ್ಲ. ಅದು: ಕೆಲಸದ ಸಂಬಳವಾಗಿರಲಿ, ವ್ಯಾಪಾರವಾಗಿರಲಿ ಅಥವಾ ಭೂ-ಆದಾಯಗಳಾಗಿರಲಿ... ಏಕೆಂದರೆ ಅದರ ಮಾಪಕವೇ ಬೇರೆ. 'ಸಮಾನ ಕೆಲಸಕ್ಕೆ ಸಮಾನ ವೇತನ" ವೆಂಬ, ನೀತಿ. ಹಾಗಿದ್ದರೆ ಅನ್ಯಾಯವೂ "ಇಲ್ಲ, ಅನ್ಯಾಯದ ಭೀತಿಯೂ ಇಲ್ಲ. ಮುಸ್ಲಿಮ್‌ ಪಾಮರರು ಭಾವಿಸಿರುವಂತೆ ಅಥವಾ ಇಸ್ಲಾಮಿನ ವೈರಿಗಳು ಡಂಗುರ ಸಾರುತ್ತಿರುವಂತೆ ಸ್ತ್ರೀಗೆ ಪುರುಷನ. ಅರ್ಧ: ಸ್ಥಾನವೇ ಇರುವುದೆ೦ಬುದು ಸಮಸ್ಯೆಯ. ನಿಜಸ್ಜಿತಿಯಲ್ಲ. ಅದು ಸರಿಯಲ್ಲ! ವೆಂದು ನಮಗೆ ತಿಳಿಯಿತು. ಸು ಈರ್ವರು ಸ್ತ್ರೀಯರ ಸಾಕ್ಸ್ಯವು ಓರ್ವ ಪುರುಷನ ಸಾಕ್ಸ್ಟ ಕ್ಕೆ ಸಮಾನವೆಂಬ : ನೀತಿಯೂ ಸ್ಟ್ರಗೆ ಪುರುಷನ ಅರ್ಧಾಂಶ ಸ್ಥಾನವೆಂಬುದಕ್ಕೆ ಸಮರ್ಥನೆಯಾಗುವುದಿಲ್ಲ. ಸಾಕ್ಸೃದಲ್ಲಿ- ಅದು ಆರೋಪಿಗೆ ಅನುಕೂಲವಾಗಿರಲಿ-ಪ್ರತಿಕೂಲವಾಗಿರಲಿ-ಅತ್ಕ೦ತ ನಿಷ್ಕರ್ಷೆ. ಪಾಲಿಸುವ ವಿವೇಕಪೂರ್ಣ ಹೆಜ್ಜೆ ಯಾಗಿದೆ.. ಸ್ತ್ರೀಯು ಸುಲಭದಲ್ಲಿ: ಭಾವಾವೇಶಕ್ಕೊ ಿಳಗಾಗುವುದೇ ಅದಕ್ಕೆ ಕಾರಣ. ಮೊಕದ್ದ: ಮೆಗೆ ಆಧಾರವಾಗಿರುವ ಯಾವುದಾದರೊಂದು ವಿಷಯದಲ್ಲಿ ಚಂಚಲ ಭಾವನೆಯಿಂದ ಪ್ರಭಾವಿತಳಾಗಿ ಸತ್ಯದಿಂದ ಹಿಮ್ಮೆಟ್ಟಬಹುದು. ಆದ್ದರಿಂದ ಆಕೆಯೊಂದಿಗೆ ಇನ್ನೋರ್ವಳೂ ಅಗತ್ಯವೆಂದು ಇಸ್ಲಾಮ್‌ ನಿರ್ಣಯಿಸಿದೆ. "ಒಬ್ಬಳು ತಪ್ಪಿದರೆ ಇನ್ನೊಬ್ಬಳು ಆಕೆಗೆ ಜ್ಞಾಪಿಸಿ ಕೊಡರಿಕ್ಕಾಗಿ.' ಪ್ರಾ ಪ್ರಾಯಶಃ ಆರೋಪಿಗಳ ಸೌಂದರ್ಯವು ಸಾಕ್ಷಿ! ದಾರಳಲ್ಲಿ ಅಸೂಯೆ 'ಹುಟ್ಟಿಸುವಂಥದ್ದಾ ಗಿರಬಹುದು ಅಥವಾ ಆಕೆಯ ಕೋಮಲ ಭಾವನೆಗಳನ್ನು ಉದ್ರೇಕಿಸುವ೦ತಹ ಯುವಕನಾಗಿರಬಹುದು. ಆಕೆಯ ಮಾತೃ ವಾತ್ಸಲ್ಯವನ್ನು ' ಜಾಗೃತಗೊಳಿಸುವ ಸನ್ನಿವೇಶವಾಗಿರಬಹುದು. ಉದ್ದೇಶಪೂರ್ವಕವಾಗಿ ಅಥವಾ ಅನುದ್ದೇಶಿತ .. ವಾಗಿ 'ಪ್ರಭಾವ ಬೀರುವ ಬೇರೇನಾದರೂ - ಹಿನ್ನೇ ಲೆಯಿರಬಹುದು. , ಆದರೆ. ಈರ್ವರು . ಸ್ತ್ರೀಯರು: ಒಟ್ಟು ಸೇರುವಲ್ಲಿ ಒಂದು ಸುಳ್ಳಾರೋಪದ ಬಗ್ಗೆ ಅವರೀರ್ವರೂ ಸಹಮತ ಹೊಂದುವುದು ಕಷ್ಟ ಸಾಧ್ಯ. ಸಾಮಾನ್ಯವಾಗಿ ಒಬ್ಬಾಕೆಯು ನ್ನೊಬ್ಬಳ ಗುಟ್ಟನ್ನು ರಟ್ಟು

pa P4

20 ಮಹಿಳೆ” ಇಸ್ಲಾಮಿನಲ್ಲಿ pa ಮಾಡಿ ಸತ್ಯವನ್ನು ಹೊರಗೆಡಹುವ ಸಾಧ್ಯತೆಯೇ ಅಧಿಕವಾಗಿರುವುದು: 'ಹಾಗೆಯೇ ಸ್ತ್ರೀಯ ಮಾಹಿತಿಯು ನಿಖರವೆಂದು ಮನಗಂಡ ಸಂದರ್ಭದಲ್ಲಿ, ಸ್ತ್ರೀಯರಿಗೆ ಸಂಬಂಧಿಸಿದ ವಿವಾದಗಳಲ್ಲಿ ಒಬ್ಬಳೇ ಸ್ತ್ರೀಯ ಸಾಕ್ಷ್ಯವನ್ನೂ ಪರಿಗಣಿಸಲಾಗುವುದು. ಇನ್ನು ಕುಟುಂಬ ನಾಯಕತ್ವದ ಸಮಸ್ಯೆಯನ್ನು ನೋಡೋಣ. ಸ್ವೀ-ಪುರುಷರ ಸಮ್ಮಿಲನದ ಜಂಟ ಸಂಸ್ಥೆಯ ಮತ್ತು ಅದರಲ್ಲಿ ಬೆಳೆಯುವ ಸ೦ತಾನಗಳ ಹಾಗೂ ಅವುಗಳಿಗೆ ಸಂಬಂಧಿಸಿದ ಹೊಣೆಗಾರಿಕೆಗಳ ನಿರ್ವಹಣೆಗೆ ಓರ್ವ ಮೇಲ್ವಿಚಾರಕನ ಅಗತ್ಯವಿದೆ. ನಮ್ಮ ಪ್ರತಿಯೊಂದು ಸಾಮಾಜಿಕ ಸಂಸ್ಥೆಯ ನಿರ್ವಹಣೆಗೆ ಓರ್ವ ಕರ್ತವ್ಯಬದ್ಧನಾದ ನಿರ್ವಾಹಕನಿರಬೇಕೆಂಬುದನ್ನು ಮಾನವನು ಹಿ೦ದಿನ ಕಾಲದಿ೦ದಲೇ ಅರಿತುಕೊಂಡಿದ್ದಾನೆ. ಹಾಗಲ್ಲದಿದ್ದರೆ ಅರಾಜಕತೆ ಮತ್ತು ಸಾರ್ವತ್ರಿಕ ವಿನಾಶವುಂಟಾಗಬಹುದು. ನಾವು ಕುಟುಂಬ ನಾಯಕತ್ವದ ಮೂರು ರೂಪಗಳನ್ನು ನೋಡೋಣ. ಪುರುಷನು ಕುಟುಂಬದ ನಾಯಕತ್ವ ವಹಿಸುವುದು. ಅಥವಾ ಸಿ ಸ್ತ್ರೀ ನಾಯಕತ್ವವನ್ನು ಇಹಿಸುನದು: ಅದಲ್ಲದಿದ್ದರೆ ಸ್ತ್ರೀ-ಪುರುಷರಿಬ್ಬರೂ ಜಂಟಿಯಾಗಿ ವಹಿಸಿಕೊಳ್ಳುವುದು. ಕೊನೆಗೆ ಹೇಳಿದ ಕಲ್ಪನೆಯ ಬಗ್ಗೆ ಮೊದಲು ಆಲೋಚಿಸೋಣ. ಯಾವುದೇ ಕೆಲಸಕ್ಕೆ ನಾಯಕನಿಲ್ಲದೆ ಅರಾಜಕಗೊಳಿಸುವುದಕ್ಕಿ೦ತ, ಅದಕ್ಕೆ ಈರ್ವರು ನಾಯಕರನ್ನು Si ಗಂಡಾಂತರಕಾರಿಯೆಂದು ಅನುಭವದಿಂದ ವ್ಯಕ್ತವಾಗಿದೆ. ಭೂಮಿ-ಆಕಾಶಗಳ ಕುರಿತು ಕುರ್‌ಆನ್‌ ಹೇಳುತ್ತದೆ: "ಭೂಮಿ-ಆಕಾಶಗಳಲ್ಲಿ - ಅಲ್ಲಾಹನ ಹೊರತು ಇನ್ನೂ ಕೆಲವು ದೇವರಿರುತ್ತಿದ್ದರೆ ಅವರೆಡೂ ನಾಶವಾಗುತ್ತಿದ್ದುವು." "ಪ್ರತಿಯೊಬ್ಬ ದೇವನೂ ತಾನು ಸೃಷ್ಟಿಸಿದವುಗಳೊಂದಿಗೆ ಬೇರೆಯಾಗಿ ಪರಸ್ಪರ ಅಕ್ರಮವೆಸಗುತ್ತಿದ್ದರು.' ಕಾಲ್ಪನಿಕ ದೇವಂದಿರ ಸ್ಥಿತಿಯೇ ಹೀಗಿದ್ದರೆ, ಸಾಮಾನ್ನ ಮಾನವನ ಅವಸ್ಥೆಯನ್ನು ಹೇಳುವುದೇನು? ನಾಯಕತ್ವಕ್ಕಾಗಿ ಪರಸ್ಪರ ಕಚ್ಚಾಡುವ ಮಾತಾಪಿತರ ಆಶ್ರಯದಲ್ಲಿ `` ಬೆಳೆಯುವ ಮಕ್ಕಳು ಭಾವನಾತ್ಮಕ ಅಸಮತೋಲನ ಮತ್ತು ಮಾನಸಿಕ ಸಂಘರ್ಷಕ್ಕೆ ಗುರಿಯಾಗುವರೆರಿದು ಆಧುನಿಕ ಮನಃಶಾಸ್ತ್ರವು ಅಭಿಪ್ರಾಯ ಪಡುತ್ತದೆ." ಇನ್ನು ಮೊದಲಿನ ಎರಡು ಕಲ್ಪನೆಗಳು ಬಾಕಿಯಿವೆ. ಬಗ್ಗೆ -ಚರ್ಚಿಸುವುದಕ್ಕೆ೦ತ ` ಮುಂಚಿತವಾಗಿ ಒಂದು" ಪ್ರಶ್ನೆ. ಅವರೀರ್ವರಲ್ಲಿ ಹಿರಿತನಕ್ಕೆ ಹೆಚ್ಚು ಯೋಗ್ಯರು ಯಾರು? _ ಕರ್ತವ್ಯ ನಿರ್ವಹಣೆಗೆ ಅಗತ್ಯವಾಗಿರುವುದು ವಿಚಾರವೋ ಅಥವಾ ಭಾವನೆಯೋ? ವಿಚಾರ ವೆಂಬುದೇ ಸ್ಪಷ್ಟ ಉತ್ತರ. ಏಕೆ೦ದರೆ ಸರಿಯಾದ ಹಾದಿಯಿಂದ ಚಿ೦ತನೆಯನ್ನು ಹೊಡೆದೋ ಡಿಸುವ ತೀಕ್ಷ್ಮ ಭಾವನಾತ್ಮಕತೆಯಿ೦ದ ದೂರವಿದ್ದು ವ್ಯವಹಾರಗಳನ್ನು ನಿಯಂತ್ರಿಸಲು ವಿಚಾರವು ಶಕ್ತವಾಗಿದೆ. ಹಾಗಿದ್ದರೆ ಬಗ್ಗೆ ವಿಶೇಷವಾಗಿ ಚರ್ಚಿಸಬೆಳಕಾಗಿಲ್ಲ. ಕುಟುಂಬ ನಾಯಕತ್ವಕ್ಕೆ ವೈಚಾರಿಕ ಪ್ರಧಾನ `ಗುಣ ಮತ್ತು ಜೀವನ ಹೋರಾಟ ನಡೆಸುವ ಹಾಗೂ ಅದರ ಹೊರೆ ಮತ್ತು ಅಡ್ಡಿ ಆತಂಕಗಳನ್ನು" ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿರುವ

ಮಹಿಳೆ ಇಸ್ಲಾಮಿನಲ್ಲಿ 21

ಪುರುಷನೇ ಸ್ಟ್ರೀಗಿಂತ ಹೆಚ್ಚು ಅರ್ಹನೆಂಬುದು ವ್ಯಕ್ತ. ವಾಸ್ತವದಲ್ಲಿ ದುರ್ಬಲ ಹಾಗೂ ತನ್ನ ಅಭಿಲಾಷೆಗಳಿಗೆ ಮಣಿಯುವ ಪುರುಷನನ್ನು ಸ್ತ್ರೀಯು ತಾತ್ಸಾರದಿಂದ ನೋಡುತ್ತಾಳೆ. ಆತನಿಗೆ ಆಕೆ ಯಾವ ಬೆಲೆಯನ್ನೂ ನೀಡುವುದಿಲ್ಲ. ಇದು ಸುಪ್ಪಪ್ರಜ್ಞೆಯಲ್ಲಿ ಕೀಳರಿಮೆಯನ್ನು ಬೆಳೆಸುವ ಹಳೆಯ ಶಿಕ್ಷಣ ಸಂಪ್ರದಾಯದ ಪ್ರಭಾವವೆಂದು ಕೆಲವರು ಆರೋಪಿಸಬಹುದು. ಸ್ತ್ರೀಯ ಮನಸ್ಸು ಆಕೆಯ ಸಾಮರ್ಥ್ಯದ ಬಗ್ಗೆ ಅಜ್ಞವಾಗಿ ಬೆಳೆಯುತ್ತದೆಂದು ವಾದಿಸಲಾಗುತ್ತದೆ. ಆದರೆ ಸಂಪೂರ್ಣ ಸಮಾನತೆಯನ್ನು ಪಡೆದಿರುವ, ಸ್ವತಂತ್ರ ವ್ಯಕ್ತಿತ್ವವನ್ನು ಸಾಧಿಸಿರುವ ಅಮೇರಿಕನ್‌ ಮಹಿಳೆಯು ಕೊನೆಗೆ, ತನ್ನನ್ನೇ ಪುರುಷನಿಗೆ ಅರ್ಪಿಸಿಕೊಂಡಿದ್ದಾಳೆ. ಆತನ ಪ್ರೀತಿ ಸಂಪಾದನೆಗಾಗಿ ಪ್ರೇಮಭಿಕ್ಲೆ ಮತ್ತು ಒನಪು ವಯ್ಮಾರಗಳಿ೦ದ ಆಕೆಯೇ ನಡೆಯುತ್ತಾಳೆ. ಆತನ ವಿಶಾಲವಾದ ಎದೆ, ಬಲಿಷ್ಠ ಮಾಂಸ ಪೇಶಿಗಳ ಸ್ಪರ್ಶದಿ೦ದ ಆಕೆ ಮೈಮರೆಯುತ್ತಾಳೆ. ತನ್ನ ಅಸಾಮರ್ಥ್ಯವನ್ನು ಮನಗಂಡ ಆಕೆಯು ಆತನ ಶಕ್ತಿಯ ಮುಂದೆ ಸರ್ವಸ್ವವನ್ನೂ ಅರ್ಪಿಸುತ್ತಾಳೆ. ಆತನಲ್ಲಿ ಸಂತೃಪ್ತಿಯನ್ನು ಅರಸುತ್ತಾಳೆ.

ವೈವಾಹಿಕ ಜೀವನದ ಆರಂಭ ಕಾಲಗಳಲ್ಲಿ ಸ೦ತಾನ ಪಾಲನೆ ಮತ್ತು ಕುಟುಂಬ ಸಂರಕ್ಷಣೆಯ ಘನ ಕರ್ತವ್ಯಗಳ ಗೋಜಿಲ್ಲದ ವೇಳೆ ಸ್ತ್ರೀಗೆ ಪ್ರಾಯಶಃ ನಾಯಕತ್ವ ವಹಿಸಲು ಸಾಧ್ಯವಾಗಬಹುದು. ಆದರೆ ಕರ್ತವ್ಯಗಳು ಹೆಚ್ಚಿದಂತೆ ಸ್ಥಾನವನ್ನು ಆಕೆ ಅನಿವಾರ್ಯವಾಗಿ ತೊರೆಯಬೇಕಾಗುವುದು. ಸ್ವಾಭಾವಿಕವಾಗಿ ಹೆಚ್ಚೆಚ್ಚು ಹೊಣೆಗಾರಿಕೆಗಳು ಬಂದೆರಗುತ್ತವೆ. ಆಗ ಹೆಚ್ಚುತ್ತಿರುವ ಭಾರವನ್ನು ನಿಭಾಯಿಸುವ ವೈಚಾರಿಕ ಹಾಗೂ ಮಾನಸಿಕ ಸ್ಥಿರತೆ ಆಕೆಯಲ್ಲಿರಲಾರದು.

ಹೀಗೆ ಪ್ರಸ್ತಾಪಿಸಿದ ಮಾತ್ರಕ್ಕೆ ಗೃಹಾಡಳಿತದಲ್ಲಿಯೂ ಪುರುಷನು ಸ್ತ್ರೀಯ ಮೇಲೆ ಓರ್ವ ಸರ್ವಾಧಿಕಾರಿಯೆಂದು . ಅರ್ಥೈಸಬಾರದು. ನಾಯಕತ್ವವೆಂದರೆ ಸಮಾಲೋಚನೆ ಅಥವಾ ಪರಸ್ಪರ ಸಹಕಾರದ ನಿರಾಕರಣೆಯಲ್ಲ.` ವಸ್ತುತಃ ಪರಸ್ಪರ ಹೊಂದಾಣಿಕೆ ಮತ್ತು ಶಾಶ್ವತ ಪ್ರೇಮ.ಸ೦ಬ೦ಧದ ಬುನಾದಿಯಲ್ಲಿ ಇರುವ ನಾಯಕತ್ವವೇ ಯಶಸ್ವಿಯಾಗುತ್ತದೆ. ಇಸ್ಲಾಮಿನ ನಿಯಮ ನಿರ್ದೇಶನಗಳೆಲ್ಲವೂ ಕುಟುಂಬದ ಆಂತರಿಕ ರಂಗದಲ್ಲಿ ಪ್ರಸ್ತುತ ಸ್ಫೂರ್ತಿಯನ್ನು ಪ್ರಸಾರಗೊಳಿಸುವಂಥದ್ದಾಗಿದೆ. ಅದು ವಿರಸ ಮತ್ತು ಪೈಪೋಟಿಯ ಬದಲಾಗಿ ಪ್ರೇಮ ಮತ್ತು ಪರಸ್ಪರ Ra ಬೆಳೆಸ ಬಯಸುತ್ತದೆ. ಕುರ್‌ಆನ್‌ ಹೀಗೆ ಬೋಧಿಸಿದ:

,ಅವರೊರಿದಿಗ ಉತ್ತಮ ರೀತಿಯಿಂದ ಜೀವನ ನಡೆಸಿರಿ."

` (ಪವಿತ್ರ ಕುರ್‌ಆನ್‌, 4:19)

ಪ್ರವಾದಿ(ಸ) ಹೀಗೆಂದಿದ್ದಾರೆ:

"ಮನೆಯವರೊಂದಿಗೆ ಉತ್ತಮ ರೀತಿಯಲ್ಲಿ ವರ್ಶಿಸುವವನೇ ನಿಮ್ಮಲ್ಲಿ ಅತ್ಯುತ್ತಮನು." (ತಿರ್ಮಿದಿ) ಅದು ಪಶ್ನಿಯೊಂದಿಗಿನ ವರ್ತನೆಯನ್ನು ಶ್ರೇಷ್ಠತೆಯ ಮಾಪಕವಾಗಿ ಅಂಗೀಕರಿಸಿದೆ. ಅದುವೇ ವಸ್ತುನಿಷ್ಠ ಮಾಪಕ. ಒಳಿತಿನ ಮೂಲವನ್ನು ಕೆಡಿಸಿ, ಅದರ ಶುಭ್ರ ಪ್ರವಾಹವನ್ನು (

22: ಮಹಿಳೆ

ತಡೆಯುವ ಹಾಗೂ ಮಾನಸಿಕ ದೌರ್ಬಲ್ಯಗಳಿರುವ ೈಕ್ತಿಗೆ ಮಾತ್ರ ತನ್ನ ದನ ಸಂಗಾತಿ ಯೊಂದಿಗೆ ಕೆಟ್ಟ ರೀತಿಯಲ್ಲಿ ವರ್ತಿಸಲು ಸಾಧ್ಯ. pi ಆದರೆ ಕುಟುಂಬ ರಂಗದ 'ಅಧಿಕೃತ' ಸಂಬಂಧಗಳ ಕುರಿತು ಹಲವಾರು ತಪ್ಪು ತಿಳುವಳಿಕೆಗಳಿವೆ. ಕುರಿತು ಸ್ವಲ್ಪ ವಿವರಿಸಬೇಕಾಗಿದೆ. ಈ, ತಪ್ಪು ತಿಳುವಳಿಕೆಗಳಲ್ಲಿ ಒ೦ದಂಶವು ಸ್ತ್ರೀಯರಿಗೆ ಪುರುಷರೊಂದಿಗಿರುವ ಕರ್ತವ್ಯಗಳ ಕುರಿತಾಗಿದೆ. ಇನ್ನೊ೦ದಂಶವು ವಿವಾಹ ವಿಚ್ಛೇದನ ಮತ್ತು ಬಹುಪತ್ನಿತ್ವಕ್ಕೆ ಸಂಬಂಧಿಸಿದೆ. ` ವಿವಾಹವೆಂಬುದು" ಬಹುವ೦ಶ ವೈಯಕ್ತಿಕ ವಿಷಯವೆ೦ದೇ ನಾನು ನಂಬುತ್ತೇನೆ. ಅದು ಈರ್ವರು ವ್ಯಕ್ತಿಗಳ ಇತರೆಲ್ಲಾ ಪರಸ್ಪರ ವ್ಯವಹಾರಗಳಂತೆಯೇ ಇದೆ. ವಿವಾಹದಲ್ಲಿ ' ಎಲ್ಲಕ್ಕಿ೦ತ ಹೆಚ್ಚಾಗಿ ಉಭಯ ಪಕ್ಷಗಳ ವೈಯಕ್ತಿಕ ಭಿನ್ನತೆ ಮತ್ತು ಮಾನಸಿಕ, ಶಾರೀರಿಕ ಮತ್ತು ವೈಚಾರಿಕ ವೈಶಿಷ್ಟ್ಯಗಳನ್ನು ಪರಿಗಣಿಸಬೇಕಾಗಿದೆ. ಅದನ್ನು ಯಾವುದಾದರೊಂದು ಕಾನೂನಿನ ಮಿತಿಯೊಳಗಿರಿಸುವುದು ಕಷ್ಟ ಸಾಧ್ಯ. ದಂಪತಿಗಳಲ್ಲಿ ಸಾಮರಸ್ಕ ಮತ್ತು ಬಕ್ಕ ಲಾಸ್ಕವಾಡುತ್ತಿದ್ದರೆ, ಅದಕ್ಕೆ ದಾಂಪತ್ಯ ನೀತಿಯನ್ನು ಅವರು ಅನ್ಕೋನ್ಕತೆಯಿ೦ದ ಪಾಲಿಸುತ್ತಿ - ರುವುದೇ ಕಾರಣವಾಗಿರಬೇಕೆ೦ದಿಲ್ಲ. ಕೆಲವೊಮ್ಮೆ ಸ್ಥಿತಿಯು ಕೈ ಮತ್ತು ನಾಲಗೆಯಿ೦ದ ವ್ಯವಹರಿಸಿ ತೀವ್ರ ಕಚ್ಚಾಟ ನಡೆದ ಬಳಿಕವೇ ಉಂಟಾಗುತ್ತದೆ. ವಿರಸ ಮತ್ತು ಕಲಹಕ್ಕೂ ದಂಪತಿಗಳಲ್ಲಿ ಯಾರಾದರೊಬ್ಬರ ಲೋಪದೋಷವೇ ಕಾರಣವಾಗಿರಬೇಕಿಲ್ಲ. ಹೆಚ್ಚಿನ ಸ೦ದರ್ಭಗಳಲ್ಲಿ ಸತಿ-ಪತಿಯವರೀರ್ವರೂ ಉತ್ತಮ ಮಾನವೀಯ ಮಾದರಿಯಾಗಿರುತ್ತಾರೆ. ಆದರೆ ಅವರ ನೈಸರ್ಗಿಕತೆಯು ಪರಸ್ಪರ ಸರಿ ಹೊಂದುವುದಿಲ್ಲ. ಹಲವೊಮ್ಮೆ ಅವರೀರ್ವರೂ ತಮ್ಮಲ್ಲಿ ಹೊಂದಾಣಿಕೆ 'ಸಾಧ್ಯವಾಗದ ಬಗ್ಗೆ ಕುಳಿತು ಅಳುತ್ತಿರಬಹುದು. ಹಾಗಿದ್ದರೂ ಅವರಿಗೆ ಪರಸ್ಪರ ಹೊಂದಿಕೊಳ್ಳಲಾಗುವುದಿಲ್ಲ. ಅದೇನಿದ್ದರೂ ವೈವಾಹಿಕ ಸಮಸ್ಯೆಗಳನ್ನು ವ್ಯವಹರಿಸುವಂತಹ ಸಾಮಾನ್ಮ ಕಾನೂನು ಅನಿವಾರ್ಯ, ಮಾನವ ಜೀವನವನ್ನು ತೀವ್ರವಾಗಿ ಕಾಡುವ ಸ: ಸಮಸ್ಯೆಯನ್ನು ವ್ಯವಹರಿಸುವ ಕಾನೂನಿಲ್ಲದ೦ತಹ ಯಾವ ಪದ್ಧತಿಯೂ ಪರಿಪೂರ್ಣವೆನಿಸದು. ಸರ್ವಥಾ ಅನುಲ್ಲಂಘನೀಯ ವಾದ ಕೆಲವು ಸಾಮಾನ್ಯ ಮಿತಿಮೇರೆಗಳನ್ನಾದರೂ ನಿರ್ಧರಿಸಲು ಕಾನೂನಿನಿಂದ ಸಾಧ್ಯ ವಾಗಬೇಕು. ತರುವಾಯ ವೈಯಕ್ತಿಕ ವರ್ತನೆಗಳಿಗನುಸಾರವಾಗಿ ಆಯಾ ಸಮಸ್ಕೆಯನ್ನು ಪ್ರಸ್ತುತ ಮಿತಿಯೊಳಗಿದ್ದು ತೀರ್ಮಾನಿಸಬಹುದಾಗಿದೆ. ಪರಸ್ಪರ ತಿಳುವಳಿಕೆ ಮತ್ತು ಪ್ರೀತಿಯಿ೦ದ ವರ್ತಿಸುತ್ತಿ ಶ್ರಿರುವಾಗ ಸ್ವಾಭಾವಿಕವಾಗಿ ನಾವು ಕಾನೂನಿನ ಮೊರೆ ಹೋಗುವುದಿಲ್ಲ. p ಸಂತೃಪ್ತ ವೈವಾಹಿಕ ಜೀವನದಲ್ಲಿ ಕಾನೂನಿನ ಆದೇಶ ಅಥವಾ ತೀರ್ಮಾನವನ್ನು ' ಹುಡುಕುವುದಿಲ್ಲ. ಕಾನೂನು ಹಾಗೆ ಆದೇಶಿಸಿದೆ, ಆದ್ದರಿ೧ದ ನಾನು ಹಾಗೆ”ಮಾಡುತ್ತೆ ತ್ರೇನೆ- ಇಲ್ಲದಿದ್ದರೆ ನಾನು ತದ್ವಿರುದ್ಧವಾಗಿ ವರ್ತಿಸುತ್ತಿದ್ದೆ' ಎಂದು ಆಗ ಪತಿ- ಪತ್ನಿಯರು _ ಹೇಳುವುದಿಲ್ಲ. ದಾಂಪತ್ಕ ಸಂತ್ಯಪ್ತಿಯು- ಭಾನ ಹಿಂದೆ ಹೇಳಿದಂತೆ ಬಹುವಂಶ

ಮಹಿಳೆ ಇಸ್ಲಾಮಿನಲ್ಲಿ ` 23

- ದಂಪತಿಗಳ ಭಾಷೈಕ್ಕದಿಂದ ಉಂಟಾಗುತ್ತದೆ. ಒಂದೇ ಆತ್ಮದ ಎರಡು ಅಂಶಗಳ ಅನ್ಯೋನ್ಯತೆ ಮತ್ತು ಪರಸ್ಪರ ಪ್ರೇಮಗಳಿಂದ ಸಾಧಿತವಾಗುತ್ತದೆ. ಎರಡು ಹೃದಯಗಳನ್ನು ಅಜ್ಞಾತ ರೀತಿಯಲ್ಲಿ `` ಬೆಸೆಯುವ ಪ್ರೇಮವೇ ಅದಕ್ಕೆ ಆಧಾರ. ಅದು ಪ್ರಾಯಶಃ ಅವುಗಳಲ್ಲೊ೦ದರ ಅಥವಾ ಅವರೀರ್ವರ ಮಟ್ಟಿಗೆ ನ್ಯಾಯನಿಷ್ಠವಾಗಿರಲಾರದು. ಬದಲಾಗಿ ಅವುಗಳ ನೈಜ ನಿಲುಮೆಗೆ ಎರುದ್ಧವಾಗಿರಬಹುದು. ಆದರೂ ಅಲ್ಲಿ ನಿರ್ದಿಷ್ಟ ಧ್ಯೇಯವು ಕರಗತವಾಗಿದೆ. ಅಲ್ಲಿ ಶಾ೦ತಿ ನೆಮ್ಮದಿಗಳು ಲಾಸ್ಕವಾಡುವುವು.

ಆದರೆ ಪರಸ್ಪರ ಹೊಂದಿಕೊಳ್ಳಲಾಗದ ಸಂದರ್ಭಗಳಲ್ಲಿ ದಂಪತಿಗಳು ಕಾನೂನಿಗೆ ` ಶರಣಾಗಬೇಕಾಗುವುದು. ವಿರಸವು ಕೊನೆಗೊ೦ಡೀತೆಂಬ ನಿರೀಕ್ಷೆಯಿಂದ ಅದರ ತೀರ್ಪನ್ನು ಬಯಸುತ್ತಾರೆ.

ನಿಷ್ಪಕ್ಷ ನ್ಯಾಯವನ್ನು ಕಾನೂನಿನಿಂದ ನಿರೀಕ್ಷಿಸಲಾಗುತ್ತದೆ. ಎಲ್ಲ ಪರಿಸ್ಥಿತಿಗಳಲ್ಲಿಯೂ ಕಾಡುವ ಮತ್ತು ಎಲ್ಲ ಪರಿಸ್ಥಿತಿಗಳಲ್ಲಿಯೂ ಉದ್ಭವಿಸುವ ಸಮಸ್ಯೆಗಳಿಗೆ ಪರಿಹಾರ ನೀಡು ವಂತಹ ಸ್ಥಿತಿಯನ್ನು ನಾವು ಅದರಿಂದ ಬಯಸುತ್ತೇವೆ. ಆದರೆ ಯಾವುದೇ ಕಾನೂನಿಗೂ ಸಮಗ್ರತೆ ಮತ್ತು ವಿಶಾಲತೆ ಅಸಾಧ್ಯವೆಂದು ನಾನು ಒತ್ತಿ ಹೇಳುತ್ತೇನೆ. ಕನಿಷ್ಠ ಪಕ್ಷ, ಅದರ ಪ್ರಯೋಗವು ಅಕ್ಷರಶಃ ನ್ಯಾಯಪೂರ್ಣ ಅಥವಾ ಹಿತಕರವಾಗಿರುವುದೆಂದೂ ಹೇಳಲಾಗುವುದಿಲ್ಲ.

ನಾವು ಇಸ್ಲಾಮೂ ಕಾನೂನುಗಳನ್ನು ನೋಡೋಣ. ಪಶ್ನಿಯ ಕರ್ತವ್ಯಗಳೆ ಹಿನ್ನೆಲೆಯಲ್ಲಿ ಅದನ್ನು ವಿಶ್ಲೇಷಿಸೋಣ. ಅವಳಿಗಾಗಿಯೇ ಕೋಲಾಹಲಗಳೆಲ್ಲಾ ನಡೆಯುತ್ತಿ ಶ್ರಿವೆಯಷ್ಟೆ. ಬಗ್ಗೆ ಮೂರು ವಾಸ್ತವಿಕ ಅಂಶಗಳು ಗಮನಾರ್ಹವಾಗಿವೆ.

1 ಕರ್ತವ್ಯಗಳು ಸ್ವಯಂ ಕಠೋರವಾಗಿವೆಯೇ?

2) ಕರ್ತವ್ಯಗಳು ಪರ್ಯಾಯ ಹಕ್ಕುಗಳಿಲ್ಲದೆ ಕೇವಲ ಏಕಪಕ್ಷೀಯವೇ?

3) ಅವು ಸ್ತ್ರೀಗೆ ವಿಮೋಚನೆ ಪಡೆಯುವ ಅವಕಾಶವಿಲ್ಲದ ಶಾಶ್ವತ ಕರ್ತವ್ಯ ಗಳಾಗಿವೆಯೇ? |

ಸ್ತ್ರೀಯ ಮೂರು ಪ್ರಧಾನ ಕರ್ತವ್ಯಗಳಿವೆ. ಪತಿಯು ತನ್ನನ್ನು ಹಾಸಿಗೆಗೆ ಆಮಂತ್ರಿಸಿದಾಗ ಆತನನ್ನು ಅನುಸರಿಸುವುದು, ಪತಿಯು ಮೆಚ್ಚದ ಯಾರಿಂದಲೂ ಆತನ ಹಾಸಿಗೆಯನ್ನು ಮೆಟ್ಟಿಸದಿರುವುದು, ಆತನ ಗೈರುಹಾಜರಿಯಲ್ಲಿ ಪ್ರಾಮಾಣಿಕತೆ ಪಾಲಿಸುವುದು.

- ಪ್ರಥಮ ವಿಷಯವನ್ನು ಸ್ವಲ್ಪ ವಿಸ್ತರಿಸಿ ಹೇಳಬೇಕಾಗಿದೆ. ಅದರಲ್ಲಿ ಅಡಕವಾಗಿರುವ ನೀತಿ ಸ್ಪಷ್ಟ. ಲೈಂಗಿಕಾಸಕ್ತಿಯ ಪೂರೈಕೆಯು ಪುರುಷ ದೇಹದ ನೈಸರ್ಗಿಕ ಬೇಡಿಕೆಯಾಗಿದೆ. ದೈಹಿಕ ಒತ್ತಡಗಳಿಂದ ನೆಮ್ಮದಿ ಪಡೆದು ಜೀವನದ ಕರ್ತವ್ಯಗಳನ್ನು ಪ್ರಶಾಂತ ಮನಸ್ಸಿನಿಂದ ನಿರಾಯಾಸ ಮತ್ತು ಕಾರ್ಯದಕ್ಷತೆಯಿ೦ದ ನಿರ್ವಹಿಸಲು ತನ್ಮೂಲಕ ಆತನಿಗೆ ಸಾಧ್ಯ ವಾಗುವುದು. ಲೈಂಗಿಕಾಸಕ್ತಿಯನ್ನು ಶಮನಿಸಬೇಕೆ೦ಬ ಬಯಕೆಯು ಸ್ತ್ರೀಯರಿಗಿ೦ತ ಪುರುಷರ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಮುಖ್ಯವಾಗಿ ಯೌವನ ಕಾಲದಲ್ಲಿ. ಪುರುಷನೊಂದಿಗೆ

24 ಮಹಿಳೆ /ಗೆಸ್ಲಾಮಿನಲ್ಲಿ 572 _ನಮಓುಡಿಳೈೆಇಸ್ಹಾಮಿನಲ್ಲಿ

ಹೋಲಿಸಿದಾಗ ಸ್ತ್ರೀಯ ಲೈಂಗಿಕ ಭಾವನೆಯು 'ತೀವ್ರತಮವೇ ಆಗಿದೆ/ದೈಹಿಕವಾಗಿಯೂ ' ಶಾರೀರಿಕವಾಗಿಯೂ ಆಕೆಗೆ ಅದರತ್ತ ಹೆಚ್ಚು' ಒಲವಿದೆ. ಹಾಗಿದ್ದರೂ ಆಕೆಯ ಲೈಂಗಿಕ ತೃಪ್ತಿಯು ಕೇವಲ ಶಾರೀರಿಕವಾಗಿಯೇ ಆಗಿರಬೇಕಾಗಿಲ್ಲ. ವಿವಾಹದೆಲ್ಲಿ ಮಾನವ ಜೀವನದ ಆಧ್ಯಾತ್ಮಿಕ, ಮಾನಸಿಕ, ಸಾಮಾಜಿಕ ಮತ್ತು ಆರ್ಥಿಕ ರಂಗಗಳೊಂದಿಗೆ ಲೈಂಗಿಕ ಅಂಶವೂ ಪರಿಗಣಿಸಲ್ಪಟ್ಟಿದೆ. ಇಲ್ಲಿ ಒಂದು ಪ್ರಶ್ನೆ ಉದ್ಭವಿಸುತ್ತದೆ.” ಕಾಮೋದ್ರೇಕಿತನಾದ ಪತಿಯ ಕರೆಯನ್ನು ಪತ್ನಿಯು ನಿರಾಕರಿಸಿದರೆ ಆತನು ಏನು ಮಾಡಬೇಕು? ಅನ್ಯ ಸ್ತ್ರೀಯರೊಡನೆ ಅನೈತಿಕ ಸಂಬಂಧ ಬೆಳೆಸಬೇಕೇ? ಆದರೆ ಅಂತಹ ಸ೦ಬ೦ಧವನ್ನು ಯಾವ ಸಮಾಜವೂ ಸಹಿಸಲಾರದು. ಹಾಗೆಯೇ ಆಕೆಗೂ ತನ್ನ ಪತಿಯು ಅನ್ಕ ಸ್ತ್ರೀಯರಿಂದ ದೈಹಿಕವಾಗಿ ಅಥವಾ ಮಾನಸಿಕವಾಗಿ ಆಕರ್ಷಿಸಲ್ಪಡುವುದನ್ನು ಊಹಿಸಲೂ ಕಷ್ಟವಾಗುವುದು.

ಲೈಂಗಿಕ ಸಂಪರ್ಕಕ್ಕೆ ಪತಿಯ ಕರೆಯನ್ನು ಪತ್ನಿಯು ತಿರಸ್ಕರಿಸುವುದಕ್ಕೆ ಕೆಳಗಿನ ಕಾರಣಗಳಿರಬಹುದು: `

1. ಆಕೆ ಪತಿಯನ್ನು ದ್ವೇಷಿಸುತ್ತಾಳೆ. ಆದ್ದರಿಂದ ಆತನ ಲೈಂಗಿಕ ಸಂಬಂಧದಿಂದ ದೂರವಿರಲು ಆಕೆ ಇಚ್ಛಿಸುತ್ತಾಳೆ.

2. ಆಕೆಗೆ ಪತಿಯೊಂದಿಗೆ ಪ್ರೇಮವಿದ್ದರೂ ಲೈಂಗಿಕ ಸಂಬಂಧವನ್ನು ಅವಳು ಸಮಗ್ರವಾಗಿ ಬ್ಯೇಷಿಸುತ್ತಾಳೆ. ಆದ್ದರಿಂದ ಅಕೆ ದೂರ ನಿಲ್ಲುತ್ತಾಳೆ. ಇದು ಸಮತೂಕ ತಪ್ಪಿದ ಮಾನಸಿಕ ನೀತಿ. ಆದರೂ ಜೀವನದಲ್ಲಿ ಅದೊಂದು ವಾಸ್ತವಿಕತೆಯಾಗಿದೆ. .

3, ಪತಿಯೊಂದಿಗೆ ಆಕೆಗೆ ಯಾವ ದ್ವೇಷವೂ ಇಲ್ಲ. ಬದಲಾಗಿ ಪ್ರೇಮವೇ ಇದೆ. ಆದರೂ ಕೆಲವು ವಿಶಿಷ್ಟ ಸಂದರ್ಭಗಳಲ್ಲಿ ಲೈಂಗಿಕ ಸಂಬಂಧವನ್ನು ಆಕೆ ದ್ವೇಹಿಸುತ್ತಾಳೆ.

ಒ೦ದನೇಯ ಕಾರಣವು ನಿರ೦ತರವಾದುದಾಗಿದೆ. ಅದಕ್ಕೆ ನಿರ್ದಿಷ್ಟ ಕಾಲಮಿತಿಯಿಲ್ಲ. ಯಾವುದೇ ವಿಶಿಷ್ಟ ಕೆಲಸದೊಂದಿಗೆ ಅದಕ್ಕೆ. ಸಂಬಂಧವಿಲ್ಲ. ಅದು ವೈವಾಹಿಕ ಸಂಬಂಧ ವನ್ನು ಮುಂದುವರಿಸಲಿಚ್ಛಿಸದಂತಹ ಸ್ಥಿತಿಯಾಗಿದೆ. ಅಲ್ಲಿ ಸ್ವಾಭಾವಿಕವಾದ ವಿಚ್ಛೇದನವೇ ಉತ್ತಮ. ಬಗ್ಗೆ ಸ್ತ್ರೀಗೆ ಹಲವು ಹಕ್ಕುಗಳಿವೆ. ಕುರಿತು ಮುಂದೆ ನೋಡೋಣ.

ದ್ವಿತೀಯ ಕಾರಣವೂ ಸ್ಥಿರವಾಗಿರುವುದು. ಅದಕ್ಕೆ ಪತಿಯ ನಿರ್ಬಂಧ ಅಥವಾ ಹಠವು ಪ್ರೇರಕವಲ್ಲ. ಅದಕ್ಕೆ ಉಭಯತ್ರರಿಗೂ ಆರಂಭದಿಂದಲೇ ಸ್ಪಷ್ಟ ಹಾಗೂ ಸಂಪೂರ್ಣವಾಗಿ ಸಹಮತವಿರುವ ಪರಿಹಾರದ ಅಗತ್ಯವಿದೆ. ಒಂದೋ ಪತಿಯು ಅದೆಷ್ಟೇ ಕಷ್ಟವಾದರೂ ತನ್ನ ಅಭಿಲಾಷೆಗಳಿಗೆ ಕಡಿವಾಣ ಹಾಕಬೇಕು. ಅದಲ್ಲದಿದ್ದರೆ ಪತ್ನಿಯು, ಪತಿಯ ಪ್ರೇಮ ಮತ್ತು ಆತನಿ೦ದ ಬೇರ್ಪಟ್ಟು ಜೀವಿಸುವುದರ ತೊಂದರೆಗಳನ್ನು ಜ್ಞಾಪಿಸಿ, ಸಂಕಷ್ಟಗಳನ್ನು ಸಹಿಸಲು ಸಿದ್ಧಳಾಗಬೇಕು. ಇನ್ನು ಯಾವ ರೀತಿಯಿಂದಲೂ ಹೊಂದಿಕೊಳ್ಳಲಾಗದಿದ್ದರೆ ಸಭ್ಯ ರೀತಿಯಿಂದ ಬೇರ್ಪಡಬೇಕು. ಪತಿಯು ನಿರ್ಬ೦ಧಿಸಿದರೆ ಆತನನ್ನು ಅನುಸರಿಸಬೇಕೆಂದು ಕಾನೂನು ಆದೇಶಿಸುತ್ತದೆ. ಇದು ಏಕಪಕ್ಷೀಯ ತೀವ್ರತೆಯಲ್ಲ. ಲೈಂಗಿಕ ಸಂಬಂಧವು ವಿವಾಹದಲ್ಲಿ ಸ್ವಾಭಾವಿಕವಾಗಿ ಒಳಗೊಂಡಿರುವುದೇ ಅದಕ್ಕೆ ಕಾರಣವಾಗಿದೆ. ಮಾತ್ರವಲ್ಲದೇ

ಮಹಿಳೆ ಇಸ್ಲಾಮಿನಲ್ಲಿ 25

ಪತ್ನಿಯ ಅಸಮ್ಮತಿಯಿಂದಾಗಿ ಪತಿಯು ಅನೈತಿಕ ಮಾರ್ಗ ಹಿಡಿಯುವ ಸಾಧ್ಯತೆಯೂ ಅದರಲ್ಲಿದೆ. ಹಾಗಲ್ಲದಿದ್ದರೆ ಅದು ಇನ್ನೊ೦ದು ವಿವಾಹಕ್ಕೆ ದಾರಿ ಮಾಡಿಕೊಡುವುದು. ಅದು ಪತ್ನಿಯು ಮೆಚ್ಚದಂತಹ ವಿಷಯವಾಗಿದೆ. ಆದರೆ ತನಗೆ ಅಸಾಧ್ಯವೆಂದು ತೋರಿ ದಾಗಲೂ ಹಾಗೆಯೇ ಮುಂದುವರಿಯಬೇಕೆಂದು ಅದು ಆಕೆಯನ್ನು ನಿರ್ಬಂಧಿಸುವುದಿಲ್ಲ. ಅದರಿಂದ ಆಕೆಯ ಪಶಿಪ್ರೇಮವೇ ಅಸ್ತಮಿಸಬಹುದು. ಆಗ ಸಭ್ಯ ರೀತಿಯಲ್ಲಿ `ಬೇರ್ಪಡುವುದೇ ಉತ್ತಮ. ಠ್‌ ಮೂರನೆಯ ಸ್ಥಿತಿಯು ಕೇವಲ ತಾತ್ಕಾಲಿಕವಾಗಿದೆ. ಇದನ್ನು ಸುಲಭದಲ್ಲಿ ಪರಿಹರಿಸ ಬಹುದು. ತಾತ್ಕಾಲಿಕ ವಿರಸದಿ೦ದ ಆಯಾಸ, ಬಳಲಿಕೆ, ಆಲಸ್ಕ, ತಾತ್ಕಾಲಿಕ ಅಸ್ವಸ್ಥತೆ ಗಳು೦ಟಾಗಬಹುದು. ಅದನ್ನು ಮಾನಸಿಕ ಹಾಗೂ ದೈಹಿಕ ಮುಂಜಾಗ್ರತೆಗಳಿಂದ ನಿವಾರಿಸ ಬಹುದಾಗಿದೆ. ಆದ್ದರಿ೦ದಲೇ ಲೈಂಗಿಕ ಸ೦ಬ೦ಧವನ್ನು ಸರಸ, ಪ್ರೇಮ, ಸಲ್ಲಾಪ ಮತ್ತು ಭಾವೋತ್ತೇಜಕ ಕ್ರಿಯೆಗಳಿಂದ ಆರಂಭಿಸಬೇಕೆಂದು ಪ್ರವಾದಿವರ್ಯರು(ಸ) ಪುರುಷರಿಗೆ ಉಪದೇಶಿಸಿದ್ದಾರೆ. ಪ್ರಥಮವಾಗಿ ಸಂಬಂಧವನ್ನು ಮೃಗೀಯ ಮಟ್ಟದಿಂದ ಉನ್ನತಗೊಳಿಸಿ ಭಾವೈಕ್ಕ ಮತ್ತು ಆತ್ಮಸಮನ್ವಯವನ್ನು ಸಾಧಿಸುವ ಅಗತ್ಯವಿದೆ. ತನ್ಮೂಲಕ ವಿರಸದ ಉಪಾಧಿಗಳನ್ನು ತೊಡೆದು ಹಾಕಲು ಸಾಧ್ಯವಾಗಬಹುದು. ಇನ್ನು, ಪತ್ನಿಯು ಲೈಂಗಿಕ ಸಂಬಂಧವನ್ನು ಬಯಸುತ್ತಾಳೆ. ಕಾರಣವಶಾತ್‌ ಪತಿಯು ಅದನ್ನು ನಿರಾಕರಿಸುವಂತಹ ಸಂದರ್ಭದಲ್ಲಿ - ಪುರುಷನ ಯೌವನ ಕಾಲದಲ್ಲಿ ಅಂತಹ ಸಾಧ್ಯತೆ ಕಡಿಮೆ - ಆಕೆ ದಾರಿಗಾಣದೆ ಬೇಸರಗೊಳ್ಳಬೇಕಾಗಿಲ್ಲ. ಪತಿಯನ್ನು ಅನುಸರಿಸಬೇಕೆಂದು ಸ್ತ್ರೀಗೆ ಆದೇಶ ನೀಡುವ ಕಾನೂನಿನಲ್ಲಿಯೇ ಅವಳ ಹಿತಾಸಕ್ತಿಗಳನ್ನು ಗಮನಿಸಿ ಅರ್ಹವಾದ ಸ್ಥಾನಮಾನಗಳನ್ನು ಆಕೆಗೂ ನೀಡಲಾಗಿದೆ. ಪತ್ನಿಯು ಲಪೇಕ್ಷೆ ಪಟ್ಟರೆ, ಪುರುಷನು ತನ್ನ 'ಪತಿ ಧರ್ಮ'ವನ್ನು ಪೂರೈಸಬೇಕೆ೦ದು ಅದು ಆದೇಶಿಸುತ್ತದೆ. ಪತಿಯು ಅದಕ್ಕೆ ಅಶಕ್ತನಾದರೆ `` ಆತನಿಂದ ಸಂಬಂಧವನ್ನು ಕಡಿದುಕೊಳ್ಳಬಹುದು. ಹೀಗೆ ಕರ್ತವ್ಯಗಳು ಉಭಯತ್ರರಲ್ಲಿಯೂ ಅರ್ಪಿಸಲ್ಪಟ್ಟಿರುವುದನ್ನು ನಾವು ಕಾಣಬಹುದಾಗಿದೆ. ಅದರಲ್ಲಿ ಪತ್ನಿಗೆ ಅನ್ಮಾಯವಾಗಲೀ, ಆಕೆಯ ವ್ಯಕ್ತಿತ್ವದ ದಮನವಾಗಲೀ ಇಲ್ಲ. ಆಕೆಯ ದ್ವಿತೀಯ ಕರ್ತವ್ಯವು ಪತಿಯ ಶಯ್ಕಾ ಸ್ಥಳಕ್ಕೆ ಆತನಿಗಿಷ್ಟವಿಲ್ಲದವರನ್ನು ಪ್ರವೇಶಗೊಳಿಸದಿರುವುದು. ಅ೦ದರೆ ಪತಿಗೆ ಮೆಚ್ಚುಗೆಯಿಲ್ಲ ದವರನ್ನು ಮನೆಯೊಳಗೆ ಪ್ರವೇಶಗೊಳಿಸಬಾರದು. (ಇದು ವ್ಯಭಿಚಾರಕ್ಕೆ ಸ೦ಬ೦ಧಿಸಿದುದಲ್ಲ. ಅದು ಪತಿ ಅನುಮತಿಸಿದರೂ ನಿಷಿದ್ಧವಷ್ಟೆ.) ದಂಪತಿಗಳಲ್ಲಿ ಕಲಹ ನಿರ್ಮಿಸುವ ಉದ್ದೇಶ ದಿಂದ ಚಾಡಿ ಹೇಳಿ ಕುಪ್ರಚಾರ ನಡೆಸುವವರ ಹಸ್ತಕ್ಟೇಪವೇ ಹೆಚ್ಚಾಗಿ ಎಲ್ಲ ಕುಟುಂಬ ಕಲಹಗಳ ಮೂಲ ಕಾರಣವಾಗಿರುವುದೇ ಪ್ರಸ್ತುತ ಕರ್ತವ್ಯದಲ್ಲಿ ಅಡಕವಾಗಿರುವ ಯುಕ್ತಿ. ` ಪತಿಯು ಅದನ್ನು ಮನಗಂಡು ನಿರ್ದಿಷ್ಟ ವ್ಯಕ್ತಿಯನ್ನು ಮನೆಗೆ ಸೇರಿಸಬೇಡವೆಂದು ಹೇಳಿದರೆ, ಪತ್ನಿಯು ಅದಕ್ಕೆ ತದ್ವಿರುದ್ಧವಾಗಿ ವರ್ತಿಸಿದರೆ ಪರಿಣಾಮವೇನಾದೀತು? ಖಂಡಿತ ವಾಗಿಯೂ ಅಲ್ಲಿ ವಿನಾಶದ ಬೀಜವು ಮೊಳಕೆಯೊಡೆಯುವುದು. ಸಾಮರಸ್ಯದ ಬಾಗಿಲುಗಳು

4 pe p4

26 ಮಹಿಳೆ ಇಸ್ಲಾಮಿನಲ್ಲಿ

ಮುಚ್ಚಿಕೊಳ್ಳುವುವು. ಆದ್ದರಿಂದ ಪತಿ-ಪತ್ನಿಯರ ಸಂಬಂಧಔಂದ ರೂಪುಗೊಳ್ಳುವ ಕುಟು೦ಬವೆ೦ಬ ಜಂಟಿ ಸಂಸ್ಥೆಯ ಒಳಿತಿಗೆ ಪ್ರಸ್ತುತ ಕಾನೂನು ಅನಿವಾರ್ಯವಾಗಿದೆ. ಅಲ್ಲಿ ಹುಟ್ಟಿ ಬೆಳೆಯುವ ಮಕ್ಕಳಿಗೆ ಪ್ರೀತಿ, ವಾತ್ಸಲ್ಕ ಮತ್ತು ಶುಭ್ರ ವಾತಾವರಣ ಅಗತ್ಯವಿದೆ. ತಂಟೆ ತಕರಾರುಗಳಿಂದ ಅದನ್ನು ಕೆಡಿಸಿದರೆ ಮಕ್ಕಳ ಮಾನಸಿಕ ಮತ್ತು ಭಾವನಾತ್ಮಕ ಬೆಳವಣಿಗೆಯು ವಿಕೃತವಾಗುವುದು.

ಇಲ್ಲಿ ಹೀಗೆ ಪ್ರಶ್ನಿಸಬಹುದು. ಪತ್ನಿಗೆ ಇಷ್ಟವಿಲ್ಲದ ವ್ಯಕ್ತಿಯನ್ನು ಮನೆಯೊಳಗೆ ' ಬಿಡಬಾರದೆಂದು ಪತಿಗೆ ಕಾನೂನು ಆಜ್ಞೆ ನೀಡಿಲ್ಲವೇಕೆ? ಪ್ರೀತಿ-ಸಾಮರಸ್ಕದ ವಾತಾವರಣ ದಲ್ಲಿ ಗುಣ-ನಡತೆಗಳಲ್ಲಿ ಈರ್ವರೂ ಉತ್ತಮ ಮತ್ತು ಸುಸಂಸ್ಕೃತರಾಗಿದ್ದರೆ ಸಮಸ್ಯೆ ಉದ್ಭವಿಸುವುದಿಲ್ಲ. ವಿರಸ ಹೆಚ್ಚಿ ಐಕ್ಕತೆ ಅಸಾಧ್ಯವಾದರೆ ನಾವು ಕಾನೂನು ಮತ್ತು ನ್ಯಾಯಾಲಯದ ಅಭಯ ಪಡೆಯುತ್ತೇವೆ. ಇಲ್ಲಿ ಒಂದು ವಿಷಯವನ್ನು ಜ್ಞಾಪಿಸಬೇಕಾಗಿದೆ, ಕೆಲವೊಮ್ಮೆ ಸ್ತ್ರೀಯ ಭಾವನೆಗಳಲ್ಲಿ ನ್ಯಾಯದ ಪ್ರಚೋದನೆಯಿರಲಾರದು. ಕೇವಲ ವೈಯಕ್ತಿಕ ದ್ವೇಷದಿಂದ ಅತ್ತೆ, ನಾದಿನಿ ಅಥವಾ ಇತರ ಸಂಬಂಧಿಕರನ್ನು ಆಕೆಯು ದ್ವೇಷಿಸುತ್ತಿರಬಹುದು. ದ್ವೇಷಕ್ಕೆ ಸಾಮೂಹಿಕ ಹಿತದೃಷ್ಟಿ ಪ್ರೇರಕವಾಗಿರುವುದಿಲ್ಲ. ಇ೦ತಹ ಸ೦ದರ್ಭಗಳಲ್ಲಿ ತನ್ನ ಪತ್ನಿಯು ದ್ವೇಷಿಸುವವರನ್ನು ದೂರವಿಡುವ ವಿಷಯದಲ್ಲಿ ಆಕೆಯನ್ನು ಅನುಸರಿಸಬೇಕೆಂದು ಪತಿಯನ್ನು ನಿರ್ಬಂಧಿಸುವುದರಿಂದ ಹಿತವಾಗದು. ಕೇವಲ ಭಾವೋದ್ರೇಕ ಅಥವಾ ಕ್ಷುಲ್ಲಕ ಕಾರಣಗಳಿಗಾಗಿ ಆಕೆ ಹಾಗೆ ಒತ್ತಾಯಿಸುತ್ತಿರಬಹುದು.

ಪತಿಯ ಚಟುವಟಿಕೆಗಳೆಲ್ಲವೂ ಸದಾ ಸರಿಯಾಗಿರುವುವೆ೦ದು ಇದರ ಅರ್ಥವಲ್ಲ. ಹಲವೊಮ್ಮೆ ಆತನು ಮಗುವಿನಂತೆ ವರ್ತಿಸುತ್ತಾನೆ. ಹಾಗೆಯೇ ಸ್ತ್ರೀಯ ನಿರ್ಧಾರ ಮತ್ತು ಅ೦ದಾಜುಗಳೆಲ್ಲವೂ ಸದಾ ತಪ್ಪಾಗಿರುವುದೆ೦ದೂ ಇದರರ್ಥವಲ್ಲ. ಕೆಲವೊ೦ದು ನಿರ್ದಿಷ್ಟ ವ್ಯಕ್ತಿಯನ್ನು ಆಕೆ ದ್ವೇಷಿಸುವುದಿದ್ದರೆ, ಆಕೆಯ ನಿಲುಮೆಯೇ ನ್ಕಾಯವಾಗಿರಬಹುದು. ವ್ಯಕ್ತಿಯು ಕುಟುಂಬ ಸಂಬಂಧವನ್ನು ಕೆಡಿಸಲು ಪ್ರಯತ್ನಿಸುವವನಾಗಿರಬಹುದು. ಆದರೆ ಓರ್ವ ಸಾಮಾನ್ಯ ಮಾನವನ ಜೀವನಕ್ಕೆ ಯೋಗ್ಯವಾಗಿ ರೂಪಿಸಲ್ಪಟ್ಟ ಕಾನೂನು ಕ್ರಮವೆಂಬ ನೆಲೆಯಲ್ಲಿ ಹಾಗೂ ಸಾಮಾನ್ಯವಾಗಿ ಸ್ತ್ರೀಗಿ೦ತ ವಿವೇಕಪೂರ್ಣವಾಗಿ ವರ್ತಿಸಲು ಪುರುಷನಿಗೆ ಸಾಧ್ಯವಾಗು ವುದರಿ೦ದಲೂ, ಇಸ್ಲಾಮ್‌ ಸ್ತ್ರೀಗಿ೦ತ ಪುರುಷನಿಗೆ ಪ್ರಾಮುಖ್ಯತೆ ನೀಡುತ್ತದೆ. ಆದರೂ ತನಗೆ ಹೊರಲಾಗದ ಹೊರೆಯನ್ನು ವಹಿಸಬೇಕಾಗಿ ಬ೦ದರೆ ಹಾಗೂ ಅದೇ ಸ್ಥಿತಿಯಲ್ಲಿ ಮುಂದುವರಿಯಲು ಅಸಾಧ್ಯವಾದರೆ ಪತಿ ಸಂಬಂಧವನ್ನು ವಿಚ್ಛೇದಿಸಲು ಆಕೆಗೆ ಹಕ್ಕಿದೆ.

ಮೂರನೆಯ , ಕರ್ತವ್ಯವು, ಪತಿಯ ಗೈರು ಹಾಜರಿಯಲ್ಲಿ ಸ್ತ್ರೀಯು ಆತನ ಧನ- ಮಾನಗಳನ್ನು ಸಂರಕ್ಷಿಸುವುದಾಗಿದೆ. ಇದು ಸ್ವಾಭಾವಿಕ ಮತ್ತು ವಿವೇಕಪೂರ್ಣವಾಗಿದೆ. ಬಗ್ಗೆ ಯಾರಿಗೂ ತರ್ಕವಿರಲಾರದು. ಅದು ಸ್ತ್ರೀ-ಪುರುಷರು ಸಮಾನ ಹೊಣೆಗಾರರಾಗಿರುವ ಕರ್ತವ್ಯವಾಗಿದೆ.

KKK

ಮಹಿಳೆ ಇಸ್ಲಾಮಿನಲ್ಲಿ . 27

ಇನ್ನು, ಪತ್ನಿ ಅಥವಾ ಪತಿಯಿಂದಾಗುವ ಕರ್ತವ್ಯಚ್ಛುತಿಯ ಬಗ್ಗೆ ಪರಿಶೀಲಿಸೋಣ. ಕುಟುಂಬ ನಾಯಕತ್ವದ ಹೊಣೆ ವಹಿಸಿರುವ ಪುರುಷನಿಗೆ ಅವಿಧೇಯಳಾಗಿರುವ ತನ್ನ ಪತ್ನಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಹಕ್ಕಿದೆ. ಕುರ್‌ಆನ್‌ ಹೀಗೆ ಹೇಳುತ್ತದೆ:

"ನಿಮ್ಮ ಸ್ತ್ರೀಯರಿಂದ ಆಜ್ಞೋಲ್ಲ೦ಘನೆಯ ಆಶಂಕೆ ನಿಮಗಿದ್ದರೆ ಅವರಿಗೆ ನೀವು ಉಪದೇಶ ನೀಡಿರಿ. ಮಲಗುವಲ್ಲಿ೦ದ ಅವರಿಂದ ದೂರವಿರಿ ಮತ್ತು ಅವರಿಗೆ ಹೊಡೆಯಿರಿ. ಅನಂತರ ಅವರು ನಿಮಗೆ ವಿಧೇಯರಾಗಿ ನಡೆದರೆ, ಅವರ ಮೇಲೆ ಕೈಯೆತ್ತಲು ಬೇಕು ಬೇಕೆಂದೇ ನೆಪ ಹುಡುಕಬೇಡಿರಿ.'' (ಪವಿತ್ರ ಕುರ್‌ಆನ್‌, 4:34)

ಶಿಸ್ತುಕ್ರಮವನ್ನು ಸ್ಪಷ್ಟಗೊಳಿಸುವ ಪ್ರಸ್ತುತ ವಾಕ್ಕವು ಅಂತಿಮವಾಗಿ, ಗಾಯವಾಗದ ದಂಡನೆಯನ್ನು ಆದೇಶಿಸಿರುವುದು ಗಮನಾರ್ಹ. ಹಕ್ಕನ್ನು ದುರುಪಯೋಗಗೊಳಿಸುವ ಸಂದರ್ಭಗಳ ಕುರಿತು ನಾವಿಲ್ಲಿ ಚರ್ಚಿಸುತ್ತಿಲ್ಲ. ಲೋಕದ ಎಲ್ಲ ಹಕ್ಕುಗಳನ್ನೂ ದುರುಪಯೋಗ ಪಡಿಸಲಾಗುತ್ತಿದೆ. ಚಾರಿತ ಸಂಸ್ಕರಣೆ ಮತ್ತು ನೈತಿಕ ಉನ್ನತಿಯೇ ಅದಕ್ಕಿರುವ ಪರಿಹಾರ. ಅದನ್ನು ಇಸ್ಲಾಮ್‌ ಸ್ವಲ್ಪವೂ ನಿರ್ಲಕ್ಸಿಸಿಲ್ಲ. ಅದಕ್ಕೆ ಬೇಕಾದ ಕ್ರಮ ಕೈಗೊಳ್ಳುವುದ ರಲ್ಲಿ ಅದು ಔದಾಸೀನ್ಮ ತೋರಿಲ್ಲ.* ಆದರೆ ಹಕ್ಕನ್ನು ಕಾನೂನುಗೊಳಿಸುವ ಮತ್ತು ಕುಟುಂಬ ವ್ಯವಸ್ಥೆಯನ್ನು ಸಂರಕ್ಷಿಸಿ, ಅದನ್ನು ವಿನಾಶ ಮತ್ತು ವಿಚ್ಛಿದ್ರತೆಯಿ೦ದ ತಡೆಯುವ ಕಾನೂನಿನ ಅನಿವಾರ್ಯತೆಯ ಬಗ್ಗೆ ನಾವಿಲ್ಲಿ ಚರ್ಚಿಸುತ್ತಿದ್ದೇವೆ. ಲೋಕದ ಎಲ್ಲ ಕಾನೂನುಗಳು ಅವುಗಳನ್ನು ಉಲ್ಲಂಘಿಸುವವರ ವಿರುದ್ಧ ದಂಡನೆ ವಿಧಿಸುವ ಅಧಿಕಾರವನ್ನು ಕೈವಶವಿರಿಸಿ ಕೊಂಡಿವೆ. ಹಾಗಿಲ್ಲದಿರುತ್ತಿದ್ದರೆ ಪ್ರಸ್ತುತ ಕಾನೂನುಗಳಿಗೆ ಅದನ್ನು ಬರೆದ ಶಾಯಿಯ ಬೆಲೆಯೂ ಇರುತ್ತಿರಲಿಲ್ಲ. ಅಂತಹ ಕಾನೂನುಗಳಿಂದ ಯಾವ ಪ್ರಯೋಜನವೂ ಆಗದು.

ವೈವಾಹಿಕ ಸಂಬಂಧವು ಪತಿ-ಪಶ್ನಿಯರಿಗೆಂಬಂತೆಯೇ ಸಮಾಜಹಿತದ ಪದ್ಧತಿಯೂ ಹೌದು. ಅದರಿಂದ ಎಲ್ಲರಿಗೂ ಹೆಚ್ಚಿನ ಪ್ರಯೋಜನವನ್ನು ನಿರೀಕ್ಷಿಸಲಾಗಿದೆ. ಸಾಮರಸ್ಕ ಮತ್ತು ಒಮ್ಮತವಿರುವ ತನಕ ಕಾನೂನಿನ ಹಸ್ತಕ್ಟೇಪವಿಲ್ಲದೆಯೇ ಅದು ಎಲ್ಲರಿಗೂ ಹಿತಕಾರಿ ಯಾಗಿರುವುದು. ಆದರೆ ವಿರಸದಿಂದ ಉದ್ಭವಿಸುವ ವಿಪತ್ತು ಕೇವಲ ಪತಿ-ಪತ್ನಿಯರಾಗಿರುವ ವ್ಯಕ್ತಿಗಳಿಗೆ ಸೀಮಿತವಾಗಿರಲಾರದು. ಭಾವೀ ಜನಾ೦ಗದ ಬೀಜವಾಗಿರುವ ಅವರ ಮಕ್ಕಳ ಮೇಲೆಯೂ ಪರಿಣಾಮ ಬೀರುವುದು. ಸುಧಾರಣೆ ಮತ್ತು ಶಿಕ್ಷಣದ ಉತ್ತಮ ವಿಧಾನದಿಂದ ಅವರನ್ನು ಪೋಷಿಸಬೇಕಾದುದು ಸಮಾಜದ ಸಾಮೂಹಿಕ ಕರ್ತವ್ಯವಾಗಿದೆ.

ವಿನಾಶಕ್ಕೆ ಪತ್ನಿಯು ಕಾರಣೀಭೂತಳಾಗಿದ್ದರೆ, ಅವಳನ್ನು ಸತ್ತ್ಯದತ್ತ ಮುನ್ನಡೆಸು ವವರಾರು? ನ್ಯಾಯಾಲಯವೇ? ಪತಿ-ಪತ್ನಿಯ ಸಂಬಂಧದ ಖಾಸಗೀ ರಂಗಗಳಲ್ಲಿ ನ್ಯಾಯಾಲಯವು ಹಸ್ತಕ್ಷೇಪ ನಡೆಸಿದರೆ, ಅದರಿಂದ ಕ್ಷುಲ್ಲಕ ಹಾಗೂ ತಾತ್ಕಾಲಿಕ ವಿರಸದ 4. ಇಸ್ಲಾಮಿನ ಮೂಲಭೂತ ತತ್ವಗಳನ್ನು ನಾವಿಲ್ಲಿ ವಿವರಿಸುತ್ತಿದ್ದೇವೆ. ಆದರೆ ಇಂದು ಇಸ್ಲಾಮಿನ ಹೆಸರಿನಲ್ಲಿ ಅಸ್ತಿತ್ವದಲ್ಲಿರುವ ಕಟು ವಾಸ್ತವಿಕತೆಗಳ ಕುರಿತು ಅಧ್ಯಾಯದ ಇನ್ನೊಂದೆಡೆ ಪ್ರತಿಪಾದಿಸುತ್ತೇವೆ.

'28 ಮಹಿಳೆ ಇಸ್ಲಾಮಿನಲ್ಲಿ

ಬಿರುಕು ದೊಡ್ಡದಾಗುವ ಸಾಧ್ಯತೆಯೇ ಹೆಚ್ಚು. ಅದರಿಂದ ಸಂಬಂಧವು ಇನ್ನಷ್ಟು ` ಕೆಡಬಹುದಷ್ಟೆ. ಏಕೆಂದರೆ ಸಾಮಾನ್ಯವಾಗಿ ಅಲ್ಲಿ ಯಾವುದಾದರೊಂದು ಕಕ್ಸಿಯ ಗೌರವಕ್ಕೆ ಬಹಿರಂಗವಾಗಿ ಭಂಗ ಉಂಟಾಗುತ್ತದೆ. ಅದು ದುರಭಿಮಾನ ಮತ್ತು ಹಠಮಾರಿತನಕ್ಕೆ ಕಾರಣವಾಗುವುದು. ಆದ್ದರಿ೦ದ ಸಾಮರಸ್ಕದ ಸರ್ವಪ್ರಯತ್ನಗಳೂ ವಿಫಲಗೊಂಡ ಸಂಕೀರ್ಣ ಪ್ರಸಂಗಗಳಲ್ಲಿ ಮಾತ್ರ ನ್ಯಾಯಾಲಯವು ಹಸ್ತಕ್ಷೇಪ ನಡೆಸಬೇಕು.

ಹಾಗಿದ್ದರೆ ನಿತ್ಯ ಜೀವನದ ಕ್ಷುಲ್ಲಕ ವಿಷಯಗಳಿಗಾಗಿ ನ್ಯಾಯಾಲಯವನ್ನು ಸಮೂಪಿಸು ವುದು ವಿವೇಕಪೂರ್ಣ ಕ್ರಮವಲ್ಲ. ಯಾವ ವಿವೇಕಶಾಲಿಯೂ ಅಂತಹ ಮೂರ್ಪತನಕ್ಕೆ ಕೈಹಾಕಲಾರನು. 'ಅ೦ತಾದರೆ ಪ್ರತಿಯೊಂದು ಮನೆಯಲ್ಲಿಯೂ ದಿನ-ರಾತ್ರೆ ಕಾರ್ಯ ನಿರ್ವಹಿಸುವ ನ್ಯಾಯಾಲಯವಿರಬೇಕಾದೀತು.

ಹಾಗಾದರೆ ಶಿಸ್ತುಕ್ರಮದ ಹೊಣೆ ವಹಿಸುವ ಅಧಿಕಾರಶಕ್ತಿಯು ಮನೆಯಲ್ಲಿಯೇ ಇರಬೇಕು. ಅದು ಕುಟುಂಬ ವ್ಯವಹಾರಗಳ ಮತ್ತು ಅದರ ಕರ್ತವ್ಯಗಳ ಹೊಣೆ ವಹಿಸಿರುವ ಪುರುಷನೇ ಆಗಿರಬೇಕು. ಆತನು ಪ್ರೇಮಾನುಕ೦ಪದ ಹಿತನುಡಿಯಿ೦ದ ಆರಂಭಿಸಬೇಕು. ಆಕೆಯ ಭಾವನೆಗಳನ್ನು ಯಾವ ರೀತಿಯಿಂದಲೂ ನೋಯಿಸಬಾರದು. ಯತ್ನ ಸಫಲವಾದರೆ ಅದುವೇ ಉತ್ತಮ. ಇಲ್ಲದಿದ್ದರೆ ಒಂದು ಹೆಜ್ಜೆ ಮುಂದಿಡ " ಬೇಕು. -ಸ್ವಲ್ಪ ಬಿಗು ಪ್ರಯತ್ನ. ಅಂದರೆ ಶಯ್ಕಾಗಾರದಿ೦ದ ದೂರವಿರಿಸುವುದು. ರೂಪ ಲಾವಣ್ಯ ಮತ್ತು ಮಾದಕತೆಯ ಬಗ್ಗೆ ಸ್ವಯಂ ಹೆಮ್ಮೆಪಡುವ ಸ್ತ್ರೀಯ ನೈಸರ್ಗಿಕ ಭಾವನೆಗೆ ಇಸ್ಲಾಮ್‌ ಮೂಲಕ ಮಾನಸಿಕ ಚಿಕಿತ್ಸೆ ನೀಡುತ್ತದೆ. ಹಲವೊಮ್ಮೆ ತನ್ನ ಸೌಂದರ್ಯದ ಬಗೆಗಿನ ದುರಭಿಮಾನವೇ ಕಲಹಕ್ಕೆ' ನಾ೦ದಿಯಾಗಿರುವುದು. ಶಯ್ಕಾಗಾರದಿ೦ದ ದೂರವಿರಿಸು ವುದರಿಂದ ಅಹಂಕಾರವನ್ನು ತುಚ್ಛೀಕರಿಸಿದ೦ತಾಗುವುದು. ಅದು ಪತ್ನಿಯ ಹಠಮಾರಿತನ ಮತ್ತು ಅಹ೦ಭಾವವನ್ನು ತಗ್ಗಿಸಲು ಹಾಗೂ ಸತ್ಯದೆಡೆಗೆ ಆಕೆಯನ್ನು ತಿರುಗಿಸಲು ಸಹಾಯಕ ವಾಗಬಹುದು. ಇನ್ನು ತಂತ್ರಗಳೆಲ್ಲವೂ ವಿಫಲವಾದರೆ ಮೇಲೆ ಅಲ್ಲಿ ಒಂದು ರೀತಿಯ ಕಟು ಧಿಕ್ಕಾರವೇ ಬಾಕಿ ಉಳಿದಿರುತ್ತದೆ. ಅದಕ್ಕೆ ಪ್ರಹಾರವೇ ಸೂಕ್ತ ಉತ್ತರ. ಆದರೆ ಅದರ ಉದ್ದೇಶವು ಹಿ೦ಸೆ ಅಥವಾ ಸೇಡು ತೀರಿಸುವುದಾಗಿರಬಾರಡು. ಕೇವಲ ಶಿಸ್ತುಕ್ರಮವಾಗಿರಬೇಕು. ಆದ್ದರಿ೦ದಲೇ ಗಾಯವಾಗದ ಪ್ರಹಾರವೆ೦ದು ಧರ್ಮಶಾಸ್ತ್ರವು ಸ್ಪಷ್ಟವಾಗಿ ಹೇಳಿದೆ. - '

ಇದನ್ನು ಸ್ತ್ರೀಯೊ೦ದಿಗಿನ ಕ್ರೌರ್ಯ ಮತ್ತು ಆಕೆಯ ಅಭಿಮಾನಕ್ಕೆ ಧಕ್ಕೆಯೊದಗಿಸು ವುದೆಂದು ಆರೋಪಿಸಲಾಗುತ್ತಿದೆ. ಖಂಡಿತ ಅಲ್ಲ. ಇಲ್ಲಿ ಒಂದು ವಿಷಯ ಸ್ಮರಣೀಯ ವಾಗಿದೆ. ಶಾಂತಿಯುತ ತಂತ್ರಗಳು .ವಿಫಲಗೊ೦ಡ ಬಳಿಕವೇ ಒಂದು ಮುಂಜಾಗ್ರತಾ ಕ್ರಮವೆಂಬ ನೆಲೆಯಲ್ಲಿ ಪ್ರಸ್ತುತ ಅಸ್ತ್ರವನ್ನು ಬಳಸಲಾಗುವುದು. ಅದಲ್ಲದೇ ವಿಧಾನದ ಹೊರತು ಸರಿದಾರಿಗೆ ಬರಿಸಲಾಗದ ಕೆಲವು ಮಾನಸಿಕ ದೌರ್ಬಲ್ಯಗಳಿರುತ್ತವೆ. ಪೂರ್ವೋಕ್ತ ತಂತ್ರಗಳೆಲ್ಲವೂ ಓರ್ವ ವ್ಯಕ್ತಿಯಲ್ಲಿ ಪರಿಣಾಮ ಬೀರದಿರುವುದಕ್ಕೆ ಬಹುವಂಶ 'ಆ

ಮಹಿಳೆ ಇಸ್ಲಾಮಿನಲ್ಲಿ 29

ವ್ಯಕ್ತಿಯು 'ಮೆಸೋಕಿಸ್ಕ್‌' (Masochism) ಎ೦ಬ ಲೈಂಗಿಕತೆಗೆ ಸಂಬಂಧಿಸಿದ ಮಾನಸಿಕ ರೋಗಕ್ಕೆ ತುತ್ತಾಗಿರುವುದೇ ಕಾರಣವಾಗಿರುತ್ತದೆ೦ದು ಆಧುನಿಕ ಮನಃಶಾಸ್ತ್ರವು ಹೇಳುತ್ತದೆ. ಅಂಥವರನ್ನು ಕೇವಲ ದೈಹಿಕ ಮತ್ತು ಮಾನಸಿಕವಾದ ಕಠಿಣ ದ೦ಡನೆಗಳಿ೦ದ ಸಮಸ್ಥಿತಿಗೆ ತರಲು ಸಾಧ್ಯ. ಇಂತಹ ಮಾನಸಿಕ ರೋಗವು ಪುರುಷರಿಗಿಂತ ಸ್ತ್ರೀಯರಲ್ಲಿ ಹೆಚ್ಚು ಕಂಡು ಬರುತ್ತದೆ. (ಅಂತೆಯೇ ಪುರುಷನಲ್ಲಿ ಸಾಮಾನ್ಯವಾಗಿ 'ಸೇಡಿಸ್ಮ್‌' ಎ೦ಬ ರೋಗವು ಕಂಡು ಬರುತ್ತದೆ. ಕ್ರೌರೃದಿಂದ ಆನಂದ ಪಡುವುದೇ ಅದರ ಲಕ್ಷಣ) ಪತ್ನಿಯು ಪ್ರಸ್ತುತ ವರ್ಗಕ್ಕೆ ಸೇರಿದವಳಾಗಿದ್ದರೆ ಏಟು ಉತ್ತಮ ಚಿಕಿತ್ಸೆಯಾಗಬಹುದು. ಅದು ಆಕೆಯ ತೃಷೆಯನ್ನು ಶಮನಿಸಬಹುದು. ರೋಗ ವಾಸಿಯಾಗಿ ಸಾಮಾನ್ಯ ಸ್ಥಿತಿ ಸಾಧಿಸಲು ಅದು ಸಹಾಯಕ ವಾಗಬಹುದು.

'ಸೇಡಿಸ್ಟ'ನಾದ ಓರ್ವ ಪುರುಷನು 'ಮಸೋಕಿಸ್ಮ್‌' ಪೀಡಿತ ಸ್ತ್ರೀಯನ್ನು ವಿವಾಹ ವಾದರೆ ಸಂಪೂರ್ಣ ಐಕ್ಕ, ಸಾಮರಸ್ಕ ಮತ್ತು ಸಂತೋಷದಿಂದ ಬಾಳುವುದು ಅಚ್ಚರಿ ದಾಯಕವಾಗಿದ್ದರೂ ಅದು ವಾಸ್ತವಿಕತೆಯೊ೦ದರ ಅಪೂರ್ವ ಸಮ್ಮಿಲನವಾಗಿದೆ. ಆದರೆ ಅದಕ್ಕಿಂತ ವಿಸ್ಮಯಕಾರೀ ವಿಷಯವು ಅತ್ಯಪೂರ್ವವಾಗಿ ಸ೦ಭವಿಸುವುದಿದ್ದರೂ, ಮೆಸೋಕಿಸ್ಮ್‌ ಪೀಡಿತ ಪತಿಯು ಸೇಡಿಸ್ಟ್‌ ಪೀಡಿತ ಪತ್ನಿಯ ಕೈಗೆ ಸಿಲುಕಿದರೆ ಆಕೆಯು ಆತನನ್ನು ಹೊಡೆದು ಸರಿಪಡಿಸುತ್ತಾ ಈರ್ವರೂ ಉತ್ತಮ ಜೀವನ ಸಾಗಿಸುವುದಾಗಿದೆ.

ಆದರೆ ಸಾಮಾನ್ಯ ಪರಿಸ್ಥಿತಿಗಳಲ್ಲಿ ಅದು ರೋಗಮಟ್ಟವನ್ನು ತಲಪಿರಲಾರದು.' ಆಗ ಪ್ರಹಾರವು ಅನಿವಾರ್ಯ ತಂತ್ರವಲ್ಲ. ಕೇವಲ ಮುಂಜಾಗ್ರತಾ ಕ್ರಮವಾಗಿರುವುದು. ಅದನ್ನು ಪ್ರಯೋಗಿಸಲು ಅವಸರಪಡಬಾರದು. ಹ೦ತಹ೦ತವಾಗಿ ಮಾರ್ಗದರ್ಶನ ನೀಡುವ ಕುರ್‌ಆನ್‌ ಅದನ್ನೇ ಬೆಟ್ಟು ಮಾಡುತ್ತದೆ. ಅತ್ಯಂತ ಅನಿವಾರ್ಯ ಪರಿಸ್ಥಿತಿಯ ಹೊರತು ಅಸ್ತ್ರವನ್ನು ಕೈಗೆತ್ತಿಕೊಳ್ಳಬಾರದೆ೦ದು ಪುರುಷರಿಗೆ ಎಚ್ಚರಿಕೆ ನೀಡಿದೆ. ಅವರನ್ನು ಆಕ್ಸೇಪಿಸುತ್ತಾ ಪ್ರವಾದಿ(ಸ). ಹೀಗೆಂದರು: "ನೀವು ಒಂಟೆಗೆ ಹೊಡೆಯುವಂತೆ. ನಿಮ್ಮ ಪತ್ನಿಯರಿಗೆ ಹೊಡೆಯಬೇಡಿರಿ. ಹಾಗೆ ಹೊಡೆದರೆ ಬಳಿಕ ರಾತ್ರೆ ಆತನು ಆಕೆಯೊಂದಿಗೆ ಮಲಗುವುದು ಹೇಗೆ?" (ಬುಖಾರಿ)

ಒಡಕಿಗೆ ಪತಿಯೇ ಕಾರಣನಾಗಿದ್ದರೆ ಆಗ ಬೇರೆಯೇ ಕಾನೂನಿದೆ-

"ಓರ್ವ ಸ್ತ್ರೀಗೆ ತನ್ನ ಪತಿಯಿಂದ ದುರ್ವರ್ತನೆ ಅಥವಾ ನಿರ್ಲಕ್ಷ್ಯದ ಭಯವಿದ್ದರೆ, ಪತಿ ಮತ್ತು ಪತ್ನಿ (ಕೆಲವು ಹಕ್ಕು ಬಾಧ್ಯತೆಗಳ ತಾರತಮೃಗಳೊಂದಿಗೆ) ಪರಸ್ಪರ ಸಂಧಾನ ಮಾಡಿಕೊಳ್ಳುವುದರಲ್ಲಿ ದೋಷವಿಲ್ಲ. ಹೇಗಿದ್ದರೂ ಸಂಧಾನವೇ ಅತ್ಯುತ್ತಮ....''

(ಪವಿತ್ರ ಕುರ್‌ಆನ್‌, 4:128) 5. ರತಿ ಕ್ರೀಡೆಗಳಲ್ಲಿ ಸಂಗಾತಿಯಿಂದ ಪೈಶಾಚಿಕ ಹಾಗೂ ಹೇಳಲಾಗದ ಅಶ್ಲೀಲ ಮತ್ತು ನೀಚ ಮರ್ದನ ಗಳಿಂದ ಕಾಮ ತೃಪ್ತಿ ಪಡೆಯುವ ಒಂದು ವಿಕೃತ ಲೈಂಗಿಕ ಭಾವನೆ. 6. ಸಂಗಾತಿಗೆ ಮಿಲನದ ವೇಳೆ ಕ್ರೂರವಾದ ಶಾರೀರಿಕ ಮರ್ದನ ಮತ್ತು ಹಿಂಸೆ ನೀಡಿದರೆ ಮಾತ್ರವೇ ಸಂತೃಪ್ತಿಯಾಗುವ ವಿಕೃತ ಲೈಂಗಿಕ ಭಾವನೆ.

30 y ಮಹಿಳೆ ಇಸ್ಲಾಮಿನಲ್ಲಿ EE

. ಕೆಲವರು ಸ್ತ್ರೀ-ಪುರುಷರ ಸಂಪೂರ್ಣ ಸಮಾನತೆಯ ಬೇಡಿಕೆಯನ್ನು ಮುಂದೊಡ್ಡಿ ಬೊಬ್ಬಿರಿಯುತ್ತಾರೆ. ಆದರೆ ಇಲ್ಲಿರುವ ಸಮಸ್ಥೆಯು ಮಾನವೀಯ ನೈಸರ್ಗಿಕತೆ ಮತ್ತು ವ್ಯಾವಹಾರಿಕತೆಗೆ ಸ೦ಬ೦ಧಿಸಿದ೦ತೆಯೇ ವಿನಾ ನಿರಾಧಾರವಾದ ಕಾಲ್ಪನಿಕ ತತ್ವದ ಸಮಸ್ಯೆಯಲ್ಲ. ತನ್ನ ಪತಿಯನ್ನು ಹೊಡೆಯುವ ಪತ್ನಿಯ ಹೃದಯದಲ್ಲಿ ಆತನ ಬಗ್ಗೆ ಸ್ವಲ್ಪವಾದರೂ ಗೌರವವಿದ್ದೀತೆ? ತರುವಾಯ ಆತನೊಂದಿಗೆ ಜೀವಿಸಲು ಆಕೆಗೆ ಸಾಧ್ಯವಾದೀತೇ? ನಾಗರಿಕ ಪಾಶ್ಚಾತ್ಯ ಲೋಕದಲ್ಲಾಗಲೀ ಅನಾಗರಿಕ ಪೌರ್ವಾತ್ಮ ಲೋಕದಲ್ಲಾಗಲೀ, ಸ್ತ್ರೀಯರು ಪತಿಯಂದಿರನ್ನು ಹೊಡೆಯುವ ಹಕ್ಕಿರಬೇಕೆಂದು ವಾದಿಸಿದ್ದಾರೆಯೇ?

ಪತಿಯ ಕೋಪಾಟೋಪಗಳೆಲ್ಲವನ್ನೂ ಮೌನವಾಗಿ ಸ್ತ್ರೀಯು ಸಹಿಸುತ್ತಿರಬೇಕೆಂದು ಇಸ್ಲಾಮ್‌ ಆಜ್ಞಾಪಿಸಿಲ್ಲವೆಂಬ ಸತ್ಯವು ಗಮನಾರ್ಹವಾಗಿದೆ. ಪತಿಯೊಂದಿಗೆ ಕೂಡಿ ಬಾಳುವುದು ಅಸಹ್ಯವೆನಿಸಿದಾಗ ಆಕೆಯು ಸಂಬಂಧವನ್ನು ವಿಚ್ಛೇದಿಸಬಹುದು.

ಮೇಲಿನ ವಿವರಣೆಗಳಿ೦ದ ನಾವು ಮನಗಂಡ ಅಂಶಗಳನ್ನು ಹೀಗೆ ಸಂಕ್ಷೇಪಿಸಬಹುದು:

1. ಸ್ತ್ರೀಯರಿಗೆ ಪುರುಷರೊಂದಿಗಿರುವ ಕರ್ತವ್ಯಗಳು ಅಂಧವಾಗಿ ಹೇರಲ್ಪಟ್ಟಿವುಗಳಲ್ಲ, ಅವು ಸ್ತ್ರೀಯೂ ಸೇರಿರುವ ಕುಟು೦ಬದ ಸಾಮಾನ್ಯ ಹಿತವನ್ನು ಗಮನದಲ್ಲಿರಿಸಿದವುಗಳಾಗಿವೆ.

2. ಸ್ತ್ರೀಯ ಹೆಚ್ಚಿನ ಕರ್ತವ್ಯಗಳ ಸ್ಥಾನದಲ್ಲಿ ಪತಿಗೂ ಕೆಲವು ಕರ್ತವ್ಯಗಳಿವೆ. ವಿಶಿಷ್ಟ ಸಂದರ್ಭಗಳಲ್ಲಿ ಸ್ತ್ರೀಯರಿಗಿಲ್ಲದ ಕೆಲವು ಅಧಿಕಾರಗಳನ್ನು ಪುರುಷನಿಗೆ ನೀಡಿರುವುದು ಕೆಂಡು ಬರುತ್ತದೆ. ಅವುಗಳಲ್ಲಿ ಸ್ತ್ರೀ ಮತ್ತು ಪುರುಷನ ನೈಸರ್ಗಿಕ ಹಿತಾಸಕ್ತಿ ಕ್ರಿಗಳನ್ನು ಪರಿಗಣಿಸಲಾಗಿದೆಯೇ ವಿನಾ ಅವು ಸ್ತಿ ಸ್ತ್ರೀಯನ್ನು ನಿ೦ದಿಸುವ ಅಥವಾ ಅಪಮಾನಿಸುವ ಉದ್ದೇಶವನ್ನು ಹೊಂದಿಲ್ಲ.

3. ಪುರುಷನ ಅಧಿಕಾರಗಳು ಅಂಗೀಕಾರಾರ್ಹವಲ್ಲ ಅಥವಾ ಅನ್ಶಾಯದ್ದಾಗಿವೆ ಯೆಂದು ಮನಗಂಡರೆ ಆಕೆಗೆ ಅವುಗಳನ್ನು ನಿರಾಕರಿಸುವ ಹಕ್ಕಿದೆ.

ಸ್ತ್ರೀಗೆ ತನ್ನ ಕರ್ತವ್ಯಗಳು ಅಸಹನೀಯವೆಂದು ಕಂಡು ಬಂದರೆ, ಹಿಂದೆ ನಾವು ' ಹಲವು ಬಾರಿ ಪ್ರಸ್ತಾಪಿಸಿರುವಂತೆ ಆಕೆಯು ಆತನಿಂದ ವಿಚ್ಛೇದನ ಪಡೆಯಬಹುದು. ಅದಕ್ಕೆ ಮೂರು ವಿಧಾನಗಳಿವೆ.

1. ವಿವಾಹ ವಿಚ್ಛೇದನದ ಹಕ್ಕನ್ನು ಸ್ತ್ರೀಯು ಸ್ವಯಂ ಇರಿಸಿಕೊಳ್ಳುವುದು. ಇದನ್ನು ಫಿಕ್ಸ್‌ನ ಭಾಷೆಯಲ್ಲಿ 'ತಪ್ಪೀಳ್‌' ಎಂದು ಕರೆಯಲಾಗುತ್ತದೆ. ಹಕ್ಕನ್ನು ಕೆಲವರು ಬಹಳ ಅಪರೂಪವಾಗಿ ಬಳಸುತ್ತಾರೆ. ಆದರೆ ಇದು ಶರೀಅತ್‌ ಸ್ಪಷ್ಟವಾಗಿ ಹೇಳಿರುವಂತಹ ಹಕ್ಕು, ಅಗತ್ಯ ಕ೦ಡರೆ ಅದನ್ನು ಚಲಾಯಿಸಬಹುದು.

ಪತಿಯೊಂದಿಗೆ ವಿರಸವಾಗಿದ್ದು, ಸಹಬಾಳ್ವೆ ಅಸಾಧ್ಯವೆಂದೂ ಸ್ಪಷ್ಟಪಡಿಸಿ ವಿವಾಹ ವಿಚ್ಛೇದನ ಕೋರುವುದು. ಕೆಲವು ನ್ಯಾಯಾಲಯಗಳು ಹಕ್ಕನ್ನು ಅಂಗೀಕರಿಸುವುದಿಲ್ಲವೆಂದು ನಾನು ಕೇಳಿದ್ದೇನೆ. ಆದರೆ ಅದು ಪ್ರವಾದಿವರ್ಯರು(ಸ) ಅಂಗೀಕರಿಸಿ ಜಾರಿಗೊಳಿಸಿದ: '

ಸುಸ್ಪಷ್ಟ ನೀತಿಯಾಗಿದೆ. ಅದು ಶರೀಅತ್‌ನ “ಒಂದು ಭಾಗವಾಗಿದೆ. ವಿವಾಹದಿಂದ ಪತ್ನಿಗೆ

ಮಹಿಳೆ ಇಸ್ಲಾಮಿನಲ್ಲಿ 31

ದೊರೆತ ಸೊತ್ತನ್ನು ಮರಳಿಸಬೇಕೆಂಬ ಶರ್ತವಿದೆ. ಅದು ನ್ಯಾಯೋಚಿತವೂ ಹೌದು. _ ಏಕೆಂದರೆ ಪತಿಯು ಪತ್ನಿಯನ್ನು ತೊರೆಯುವುದರೊಂದಿಗೆ ಸಂಬಂಧದಿಂದ ದೊರೆತು ದೆಲ್ಲವೂ ಆಕೆಗೆ ನಷ್ಟವಾಗುವುದು. ಅಂದರೆ ವಿವಾಹೆ ವಿಚ್ಛೇದನಕ್ಕೆ ಕಾರಣರಾದವರೇ- ಅದು ಸ್ತ್ರೀಯಾಗಿರಲಿ ಪುರುಷನಾಗಿರಲಿ- ಅದರಿ೦ದಾಗುವ ಲೌಕಿಕ ನಷ್ಟವನ್ನು ಸಹಿಸಲು ಸಿದ್ಧರಿರಬೇಕು.

3. ಮೂರನೆಯ ವಿಧಾನವು ದುಷ್ಟ ವರ್ತನೆ, ಕಿರುಕುಳಗಳನ್ನು ಸ್ಪಷ್ಟೀಕರಿಸಿ ವಿವಾಹ ವಿಚ್ಛೇದನಕ್ಕಾಗಿ ಒತ್ತಾಯಿಸುವುದು. ಅದನ್ನು ಸಾಬೀತು ಪಡಿಸಿದರೆ `ವಿವಾಹ ಧನ ಮತ್ತು ಜೀವನ ವೆಚ್ಚ ಪಡೆದು ಆಕೆ ಬೇರೆಯಾಗಬಹುದು. ಹಲವೊಮ್ಮೆ ಇ೦ತಹ ಪ್ರಸಂಗಗಳಲ್ಲಿ ಮೋಸ ಮತ್ತು ಭ್ರಷ್ಟಾಚಾರ ನಡೆಯುವುದರಿಂದ ನ್ಯಾಯಾಲಯಗಳು ಇಂಥ ಸಮಸ್ಯೆ ಗಳನ್ನು: ಬಹಳ ಎಚ್ಚರಿಕೆಯಿಂದ ವ್ಯವಹರಿಸುತ್ತವೆ. ಆದರೆ ವಿಷಯವು ಸಾಬೀತಾದರೆ ಅದು ವಿವಾಹ `ವಿಚ್ಛೇದನಕ್ಕಾಗಿ ವಾದಿಸುವುದು. `

ಅವು ಪುರುಷನ ಅಧಿಕಾರಗಳ ಬದಲಿಗೆ ಸ್ತ್ರೀಗೆ ದೊರೆತಿರುವ ಅಸ್ತ್ರಗಳಾಗಿವೆ. ಅಂತಿಮ ವಿಶ್ಲೇಷಣೆಯಲ್ಲಿ ಅವೆರಡೂ ಸಂತುಲಿತವಾಗಿವೆ. ಚರ್ಚೆಯು ನಮ್ಮನ್ನು ವಿವಾಹ ವಿಚ್ಛೇದನಕ್ಕೆ ತಲುಪಿಸುತ್ತದೆ.

'ತಲಾಕ್‌'ನಿಂದಾಗುವ ದುರಂತ ಕಥೆಗಳನ್ನು ನಾವು ದಿನನಿತ್ಯ ಕೇಳುತ್ತಿದ್ದೇವೆ. ಬೀದಿಪಾಲಾದ ಮಾತೆಯರ ಮತ್ತು ಮಕ್ಕಳ ಹೃದಯ ವಿದ್ರಾವಕ ಕಥೆಗಳು, ನ್ಯಾಯಾಲಯ ಗಳಿಗೆ ಕೊನೆಯಿಲ್ಲದ ಅಲೆದಾಟಗಳು, ದಾವೆಗಳ ಮೇಲೆ ದಾವೆಗಳು- ಹೀಗೆ ಹತ್ತು ಹಲವು ಕಥೆಗಳು.

ಪತ್ನಿಯು ಮನೆಯಲ್ಲಿ ನೆಮ್ಮದಿಯಿ೦ದ ಬಾಳುತ್ತಿರಬಹುದು. ಅದೇ ವೇಳೆ ಕಠಿಣವಾಗಿ ದುಡಿಯುತ್ತಿರಬಹುದು. ಒಂದು ಮಗುವಿಗೆ ಮೊಲೆಯುಣ್ಣಿಸುತ್ತಲೂ, ಇತರ ಮಕ್ಕಳ ಪಾಲನೆ ಪೋಷಣೆ ಮಾಡುತ್ತಿರಬಹುದು. ಹಾಗೆಯೇ ಪತಿಗೆ ಸುಖ ಸೌಲಭ್ಯಗಳನ್ನು ಒದಗಿಸು ವುದರಲ್ಲಿ ನಿರತಳಾಗಿರಬಹುದು. ಹೀಗಿರಲು ಯಾವ ಮುನ್ಸೂಚನೆಯೂ ಇಲ್ಲದೆ ಅದೋ ಓರ್ವ ಅಂಚಿಗಾರನು ವಿವಾಹ ವಿಚ್ಛೇದನ ಪತ್ರದೊಂದಿಗೆ ಆಕೆಯ ಮುಂದೆ ಹಾಜರಾಗುತ್ತಾನೆ! ಕಾರಣವೇನು? ಪತಿಯ ಮನದಲ್ಲಿ ಉದ್ಭವಿಸಿದ ತಾತ್ಕಾಲಿಕ ಉನ್ಮಾದ! ಆತ ಹಾದಿಯಲ್ಲಿ ಹೆಚ್ಚು ಸುಂದರಿಯಾದ ಓರ್ವ ತರುಣಿಯನ್ನು ಸಂಧಿಸಿದ ಅಥವಾ ಲೈಂಗಿಕ ಸಂಬಂಧದಲ್ಲಿ ಪುನರಾವರ್ತನೆಯಾಗುತ್ತಿರುವ ವಿರಸದಿ೦ದ ಆತನಿಗೆ ಜಿಗುಪ್ಸೆಯಾಯಿತು. ಒಂದು 'ಬದಲಾವಣೆ'ಗಾಗಿ ಆಸೆಪಟ್ಟ. ಅದಲ್ಲದಿದ್ದರೆ ತಾನು ಬಯಸಿದ ಸ೦ದರ್ಭದಲ್ಲಿ, ಆಯಾಸ ಮತ್ತು ಬಳಲಿಕೆಯಿ೦ದಾಗಿ ಪತ್ನಿಯು. ಆದಕ್ಕೆ ಒಪ್ಪಲಿಲ್ಲ....!

ಸಹನಾಶೀಲೆ ಮತ್ತು ಪತಿವ್ರತೆಯಾದ ಪತ್ನಿಯನ್ನೂ, ಗಿಳಿಪಂಜರದಂತೆ ಪ್ರಶಾಂತವಾದ ಮನೆಯಲ್ಲಿ ಭವ್ಯ ಭವಿಷ್ಯವನ್ನು ನಿರೀಕ್ಷಿಸುತ್ತಿರುವ ಮಕ್ಕಳನ್ನೂ ಕ್ಷಣಿಕ ಆವೇಶದಿಂದ ಚೆ೦ಡಾಡುವ ಪುರುಷನ ಕೈಯಿಂದ ಅಸ್ತ್ರವನ್ನು ನಾಶಪಡಿಸಲು ಯಾವ ಮಾರ್ಗವೂ ಇಲ್ಲವೇ? `

32 ಮಹಿಳೆ ಇಸ್ಲಾಮಿನಲ್ಲಿ 2೨2 ಮಡಿಳೆಸ್ವಾಮಿನಲ್ಲಿ

ನಿಜ, ಜನರು ವರ್ಣಿಸುವಂತಹ ಅನೇಕಾರು ದುರಂತಗಳು ನಡೆಯುತ್ತವೆ. ಆದರೆ ಏನು ಮಾಡಬೇಕು? ;

ತಲಾಕನ್ನು ನಿಷೇಧಿಸಬೇಕೇ? ಹಾಗಿದ್ದರೆ ತಲಾಕ್‌ನ ನಿಷೇಧದಿಂದ ಉಂಟಾಗುವ ಮಹಾ ದುರಂತಗಳಿಗೆ ನಮ್ಮಲ್ಲಿ ಯಾವ ಪರಿಹಾರವಿದೆ? ವಿವಾಹ ವಿಚ್ಛೇದನ ಹಕ್ಕನ್ನು ನಿಷೇಧಿಸಿರುವ ಕೆಥೋಲಿಕ್‌ ಜನತೆಗೆ ಅದರ ದುರಂತ ಕಥೆಗಳು ಚೆನ್ನಾಗಿ ತಿಳಿದಿದೆ. ಕುಟುಂಬದ ನಾಯಕನೂ ನಾಯಕಿಯೂ ಪರಸ್ಪರ ದ್ವೇಷಿಸುತ್ತಾರೆ. ಸಹಬಾಳ್ವೆ ಅಸಾಧ್ಯ ವೆ೦ದು ಅವರು ಅಂತಿಮವಾಗಿ ತೀರ್ಮಾನಿಸುತ್ತಾರೆ. ಆದರೆ ಅಲ್ಲಿ ಸಂಬಂಧ ಶಾಶ್ಚತ ಮತ್ತು ವಿಚ್ಛೇದನ ಅಸಾಧ್ಯವಾಗಿದೆ!? ಇಂತಹ ಕುಟು೦ಬಗಳಿರಬೇಕೆ? ಅದರಿಂದ ಅನೈತಿಕ ವ್ಯವಹಾರಗಳಿಗೆ ಪ್ರೇರಣೆ ನೀಡಿದಂತಾಗುವುದಿಲ್ಲವೇ? ತನ್ನ ಲೈಂಗಿಕ ದಾಹ ಶಮನಕ್ಕಾಗಿ ಪತಿಯು 'ಗರ್ಲ್‌ಫ್ರೆಂಡನ್ನು ಹುಡುಕುತ್ತಾನೆ. ಪತ್ನಿಯೂ ಅದೇ ಮಾರ್ಗವನ್ನು ಅವಲಂಚಿಸು ತ್ತಾಳೆ. ಕರಾಳ ಕಾರ್ಮೋಡ ತುಂಬಿದ ಪ್ರಸ್ತುತ ಕೌಟುಂಬಿಕ ವಾತಾವರಣದಲ್ಲಿ ಬೆಳೆಯುವ ಮಕ್ಕಳ ಅವಸ್ಥೆಯೇನಾದೀತು? ಮಾತಾಪಿತರ ಆಶ್ರಯದಲ್ಲಿ ಬೆಳೆಯುವುದಷ್ಟೇ ಪ್ರಾಮುಖ್ಯವಲ್ಲ. ಮಕ್ಕಳು ಬೆಳೆಯುವ ವಾತಾವರಣವೂ ಪ್ರಾಮುಖ್ಯವಾಗಿದೆ. ದಿನನಿತ್ಯ ಜಗಳಾಡುವ ತಂದೆ- ತಾಯಿಗಳ ಆಸರೆಯಲ್ಲಿ ಬೆಳೆಯುವ ಮಕ್ಕಳಲ್ಲಿ ಕಂಡು ಬರುವ: ಮನೋ ದೌರ್ಬಲ್ಯಗಳ ಹೆಚ್ಚಳಕ್ಕೆ ಅದೇ ಕಾರಣವಾಗಿದೆ.

ಪುರುಷನಿಗಿರುವ ತಲಾಕ್‌ ಹಕ್ಕಿನ ಮೇಲೆ ನಿಯಂತ್ರಣ ಹೇರಬೇಕೆ೦ದು ಕೆಲವರು ವಾದಿಸುತ್ತಾರೆ. ಹಾಗೆ೦ದರೇನು? ಹೌದು, ಪುರುಷನು ವಿವಾಹ ವಿಚ್ಛೇದನದ ನುಡಿಗಳನ್ನು ಉಚ್ಚರಿಸಿದ ಮಾತ್ರಕ್ಕೆ ಸಂಬಂಧ ಮುರಿಯಬಾರದು. ಕೇವಲ ನ್ಯಾಯಾಲಯದ ಮೂಲಕವೇ ವಿವಾಹ ವಿಚ್ಛೇದನ ಪಡೆಯಬೇಕು. ಪತಿ-ಪತ್ನಿಯರ ಸಂಬಂಧಿಕರ ಪೈಕಿ ಈರ್ವರು ನ್ಯಾಯ ನಿಷ್ಠ ವ್ಯಕ್ತಿಗಳನ್ನು ನ್ಯಾಯಾಲಯವು ಆಮಂತ್ರಿಸಬೇಕು. ಅವರು ಸಮಸ್ಯೆ ಯನ್ನು ಪರಿಶೀಲಿಸಿದ ಬಳಿಕ ಪತಿಯೊಡನೆ ಪುನರ್ವಿಮರ್ಶೆ ನಡೆಸುವಂತೆ ವಿನಂತಿಸಬೇಕು, ಆತನಿಗೆ ಬುದ್ಧಿವಾದ ಹೇಳಿ ಸಾಮರಸ್ಕಕ್ಕೆ ಪ್ರೇರೇಪಿಸಬೇಕು. ತನ್ಮೂಲಕ ಪುರುಷನ ಧಿಕ್ಕಾರ ನೀತಿಯನ್ನು ಬದಲಿಸಿ ವೈವಾಹಿಕ ಸ೦ಬ೦ಧವನ್ನು ಪುನಃ ಉತ್ತಮ ಪಡಿಸಲು ಸಾಧ್ಯವಾಗಬಹುದು. ಪ್ರಸ್ತುತ ಪ್ರಯತ್ನಗಳೆಲ್ಲವೂ ವಿಫಲವಾದ ಬಳಿಕವೇ ವಿವಾಹ ವಿಚ್ಛೇದನ ನಡೆಸಬೇಕಾದ ಸಮಸ್ಯೆ ಯೆಂದು ನಾವು ಅದನ್ನು ಪರಿಗಣಿಸಬೇಕು. ಅದನ್ನೂ ಪತಿಯ ಬದಲಾಗಿ ನ್ಯಾಯಾಲಯದ ಮೂಲಕವೇ ನೀಡಬೇಕು.

ಸಂಬಂಧಿಕರೊಡನೆ ಸಮಾಲೋಚನೆ ನಡೆಸಿ ಸಾಮರಸ್ತ ಕ್ಕಾಗಿ " ವಿನಂತಿಸುವ ರೂಪವು ಇಸ್ಲಾಮ್‌ ಆದೇಶಿಸಿರುವುದೇ ಆಗಿದೆ. ಅದಕ್ಕೆ ಯಾವ ಅಡ್ಡಿಯೂ ನನಗೆ ಕಾಣಿಸು 'ಪುದಿಲ್ಲ. ಮಾತ್ರವಲ್ಲದೇ ಅದಕ್ಕೊ ಒ೦ದು ನ್ಯಾಯಾಲಯದ ಅಗತ್ಮವಿದೆಯೆಂದೂ ತೋರು . ವುದಿಲ್ಲ. ವಾಸ್ತವದಲ್ಲಿ ಸುಧಾರಕರು ಹೇಳುವ ಎಲ್ಲ ಕ್ರಮಗಳೂ ನ್ಯಾಯಾಲಯದ ಹಸ್ತಕ್ಟೇಪವಿಲ್ಲದೆಯೇ ಇಸ್ಲಾಮಿನಲ್ಲಿದೆ. ಆತ ವಿವಾಹ ವಿಚ್ಛೇದನ ನೀಡಿದ. ಅದು

ಮಹಿಳೆ ಇಸ್ಲಾಮಿನಲ್ಲಿ 33

ಸಿ೦ಧುವಾಯಿತೆ೦ದೂ ನಾವು ಭಾವಿಸೋಣ. ಹಾಗಿದ್ದರೂ ಉಭಯತ್ರರ ಸಂಬಂಧಿಕರು ಸೇರಿ ಅವರಲ್ಲಿ ರಾಜಿ ಮಾಡಿಸಿ ಪೂರ್ವಸ್ಥಿತಿಗೆ ತರುವ ಅವಕಾಶ ಇಸ್ಲಾಮಿನಲ್ಲಿ ಇಲ್ಲವೇ? ಇನ್ನು ಎರಡನೇ ಬಾರಿ ವಿಚ್ಛೇದನ ನಡೆದರೂ ಅವರಿಗೆ ಪರಸ್ಪರ ಆಸಕ್ತಿ ಮತ್ತು ಪ್ರಯೋಜನವಿದೆ ಯೆಂದು ಮನಗ೦ಡರೆ ಅವರನ್ನು ಒಂದುಗೂಡಿಸುವುದಕ್ಕೆ ಅಡ್ಡಿಯೇನಿದೆ? ಹೊಸ ಕ್ರಮ ಮತ್ತು ಹೊಸ ಮಹ್ರ್‌ನ ಮೂಲಕ ಪತಿಗೆ ಬುದ್ಧಿ ಕಲಿಸುವ ಅವಕಾಶವೂ ಅದರಲ್ಲಿದೆ. ಪರಸ್ಪರ ಒಂದು ಗೂಡಿಸುವ ಕಾಳಜಿಯು ನ್ಯಾಯಾಲಯವನ್ನು ಅವಲಂಬಿಸಿಲ್ಲ. ಸಂಬಂಧಿಕರು ಮತ್ತು ಸ್ನೇಹಿತರಿಗಿ೦ತ ಹೆಚ್ಚಿನ ಕಾಳಜಿ ನ್ಯಾಯಾಧೀಶರಿಗೆ ಯಾಕಿರಬೇಕು? ಕೆಲವು ನಾಗರಿಕ ರಾಷ್ಟ್ರಗಳನ್ನು ನೋಡಿರಿ. ಅಲ್ಲಿ ನ್ಯಾಯಾಲಯದಲ್ಲಿ ನಡೆಯುವ ವಿವಾಹ ವಿಚ್ಛೇದನಗಳು ಮಾತ್ರ ಸಿಂಧುವಾಗುವುದು. ಆದರೂ ಅಲ್ಲಿನ ವಿವಾಹ ವಿಚ್ಛೇದನ ಪ್ರಮಾಣವು ಎಲ್ಲಿಗೆ ತಲುಪಿದೆ? ಅಮೇರಿಕದಲ್ಲಿ 40 ಶೇಕಡಾ ದಾಟಿಯಾಯಿತು. ಇದು ಜಾಗತಿಕ ವಿವಾಹ ವಿಚ್ಛೇದನ ದಾಖಲೆಯಾಗಿದೆ. ವಿವಾಹ ಮತ್ತು ವಿವಾಹ ವಿಚ್ಛೇದನ ಪ್ರವೀಣರೆ೦ದು ವರ್ಣಿಸಲಾಗುತ್ತಿರುವ ಈಜಿಪ್ಟ್‌ನಲ್ಲಿ ಇದು ತುಂಬಾ ಕಡಿಮೆಯಿದೆ! ಪತ್ನಿಯು ತಪ್ಪುಗಾರಳೆಂದು ಸ್ಪಷ್ಟ ರುಜುವಾತಾಗಿ ಆಕೆಯೊಂದಿಗೆ ಸಹಬಾಳ್ವೆ ಅಸಾಧ್ಯವೆಂದು ನ್ಯಾಯಾಧೀಶನಿಗೆ ಮನವರಿಕೆಯಾದರೆ ಮಾತ್ರವೇ ಪುರುಷನಿಗೆ ವಿವಾಹ ವಿಚ್ಛೇದನದ ಅನುಮತಿ ನೀಡಬೇಕೆಂಬ ಬೇಡಿಕೆಯಿಂದ ತೀವ್ರವಾದಿಗಳು ಸ್ತ್ರೀಗೆ ಸಾಧಿಸಿ ಕೊಡಬಯಸುವ ಮರ್ಯಾದೆಯೇನು? ತನ್ನನ್ನು ಮೆಚ್ಚದ ಓರ್ವನೊಂದಿಗೆ ಆತನ ಮನೆಯಲ್ಲಿಯೇ ಬಿದ್ದುಕೊ೦ಡಿರುವುದರಿ೦ದ ಆಕೆಗೆ ಯಾವ ಮರ್ಯಾದೆಯಿದೆ? ತಾನು ಆಕೆಯನ್ನು ಮೆಚ್ಚುವುದಿಲ್ಲ ಹಾಗೂ ಆಕೆಗೆ ತನ್ನ ಹೃದಯದಲ್ಲಿ ಸ್ಥಾನವಿಲ್ಲವೆ೦ದು ಸದಾ ವಟಗುಟ್ಟುತ್ತಾ, ಪರಸ್ತ್ರೀಯರ ಬಳಿ ಹೋಗುವ ಒಬ್ಬಾತನನ್ನು ಸಹಿಸುವುದರಲ್ಲಿ ಯಾವ ಅಭಿಮಾನವಿದೆ? ಆತನ ಸೇಡು ತೀರಿಸಲಿಕ್ಕಾಗಿ ಆಕೆ ಅಲ್ಲಿಯೇ ಉಳಿಯಬೇಕೇ? ಅದು ಕರ್ಮಶಾಸ್ತ್ರವು ಒಂದು ಧ್ಯೇಯವಾಗಿ ಅಂಗೀಕರಿಸಬೇಕಾದ ನೀತಿಯೇ? ಮೆಚ್ಚದ ಓರ್ವನೊಂದಿಗೆ ಮರ್ಯಾದೆ ಬಿಟ್ಟು ಬಿದ್ದುಕೊ೦ಡಿರುವುದು ಪ್ರತೀಕಾರದ ಮಾರ್ಗವೇ? ಇನ್ನು, ಮಕ್ಕಳನ್ನು ಸಾಕಿ ಸಲಹಲಿಕ್ಕಾಗಿ ಆಕೆ ಅಲ್ಲಿರಬೇಕೇ? ಮಕ್ಕಳ ಲಭಿಮಾನ ಮತ್ತು ಬೆಳವಣಿಗೆಗೆ ಶಾಪಗ್ರಸ್ತ ಕರಾಳ ವಾತಾವರಣದಲ್ಲಿ ಜೀವಿಸುವುದಕ್ಕಿ೦ತ ಅವರು ಮಾತೆಯೊಂದಿಗೆ ಪ್ರತೇಕವಾಗಿ ವಾಸವಾಗಿರುವುದೇ ಎಷ್ಟೋ ಉತ್ತಮ. ಹಾಗಿದ್ದರೆ, ಅದಾವುದೂ ಪರಿಹಾರವಲ್ಲ. ಶಿಕ್ಷಣವೇ ಏಕೈಕ ಪರಿಹಾರ ಮಾರ್ಗ. ಎಲ್ಲ ಜನರ ನೈತಿಕ ಮತ್ತು ಮಾನಸಿಕ ಹಾಗೂ ಸಾಂಸ್ಕೃತಿಕ ಗುಣಮಟ್ಟವನ್ನು ಉತ್ತಮ ಗೊಳಿಸುವುದು. ಪ್ರೀತಿಯೇ ಜೀವನದ ಬುನಾದಿಯಾಗುವಂತೆ, ಒಳಿತು ಎಲ್ಲವನ್ನು ವ್ಯಾಪಿಸುವಂತೆ ಮಾನಸಿಕ ಭಾವನೆಗಳನ್ನು ಸುಧಾರಿಸಬೇಕು. ವೈವಾಹಿಕ ಜೀವನವು ಒಂದು ಪವಿತ್ರ ಸ೦ಬ೦ಧವಾಗಿದ್ದು ಅದನ್ನು ಕ್ಷಣಿಕ ಆವೇಶದಿಂದ ತುಂಡರಿಸಬಾರದೆಂಬ ಪ್ರಜ್ಞೆಯನ್ನು ಪುರುಷನಲ್ಲಿ ಬೆಳೆಸಬೇಕು. ಕೇವಲ ಇದೊ೦ದರಿ೦ದಲೇ ಸಮಸ್ಯೆಯ ಪರಿಹಾರ ಸಾಧ್ಯ.

34 ; ಮಹಿಳೆ ಇಸ್ಲಾಮಿನಲ್ಲಿ

ನೈತಿಕ ಶಿಕ್ಷಣವು ಸುದೀರ್ಥ ಮತ್ತು ಸಾವಧಾನವಾಗಿ ಸಾಗಬೇಕಾದ ಹಾದಿಯಾಗಿದೆ. ಅದಕ್ಕೆ ಇಸ್ಲಾಮಿನಂತೆ ಜೀವಿಸಿ, ದೈವಿಕ ಕಾನೂನು ಶಾಸ್ತ್ರದ೦ತೆ ನ್ಯಾಯ ಪಾಲಿಸುವಂತಹ ಮುಸ್ಲಿಮ್‌ ಸಮುದಾಯ ಅತ್ಯಗತ್ಯವಾಗಿದೆ. ಕಠಿಣ ಹಾಗೂ ನಿರಂತರ ತ್ಕಾಗ ಪ್ರಯತ್ನಗಳ ವಿನಾ ಅದನ್ನು ಸಾಧಿಸಲಾರದು. ಮನೆಯಲ್ಲಿಯೂ ಶಾಲೆಯಲ್ಲಿಯೂ, ಸಿನೆಮಾ ಮಂದಿರ ದಲ್ಲಿಯೂ ಪ್ರಸಾರ 'ಕೇಂದ್ರದಲ್ಲಿಯೂ ಮಸೀದಿಯಲ್ಲಿಯೂ ಬೀದಿಯಲ್ಲಿಯೂ ಹೀಗೆ - ಎಲ್ಲೆಡೆ ಅದು ಸಾಗಬೇಕು... ಎಷ್ಟೇ ತ್ರಾಸದಾಯಕವಾಗಿದ್ದರೂ ಪ್ರಾಮಾಣಿಕವಾದ ಮಾರ್ಗ ಅದೊಂದೇ:

ಶರೀಅತ್‌ನ ಮಟ್ಟಿಗೆ ಉಭಯ ವಿಭಾಗಕ್ಕೂ ಸಮಾನ ಹಕ್ಕು ನೀಡುವುದೇ ನ್ಯಾಯ ಪೂರ್ಣವಾಗಿದೆ. ಶರೀಅತ್‌ ಹಾಗೆಯೇ ಮಾಡಿದೆ. ನಿರ್ದಿಷ್ಟ "ರೂಪದ ಸಾಮರಸ್ಕ ಮತ್ತು ಹೊಂದಾಣಿಕೆ ಸಾಧ್ಯವೇ ಇಲ್ಲವೆಂದು ತೋರಿದರೆ ಮಾತ್ರ ಅದು ಸ್ತ್ರೀ-ಪುರುಷರಿಗೆ ವಿವಾಹ ವಿಚ್ಛೇದನದ ಹಕ್ಕನ್ನು ನೀಡುತ್ತದೆ.

ಆದರೂ ಅನುಮತಿ ನೀಡಿರುವ ವಿಷಯಗಳ ಪೈಕಿ ಅಲ್ಲಾಹನು ತಲಾಕನ್ನು ಅತ್ಯಂತ ದ್ವೇಷಿಸುತ್ತಾನೆ.

೫%

ಇನ್ನು, ಬಹುಪತ್ನಿತ್ವದ ಸಮಸ್ಯೆಯನ್ನು ನೋಡೋಣ. ಬಹುಪತ್ನಿತ್ವವು ಕೆಲವು ವಿಶಿಷ್ಟ ಪರಿಸ್ಥಿತಿಗಳನ್ನು ಪರಿಗಣಿಸಿರುವ೦ತಹ ಕಾನೂನಾಗಿದೆ.

ಅದು ಇಸ್ಲಾಮಿನ ಮೂಲಭೂತ ನಿಯಮವೇನಲ್ಲ. '"...ಸ್ತ್ರೀಯರಲ್ಲಿ ನಿಮಗೆ ಮೆಚ್ಚಿದ ಇಬ್ಬರನ್ನೋ ಮೂವರನ್ನೋ ನಾಲ್ವರನ್ನೋ ವಿವಾಹ ಮಾಡಿಕೊಳ್ಳಿರಿ. ಆದರೆ ಅವರೊಂದಿಗೆ ನ್ಯಾಯ ಪಾಲಿಸಲಾರಿರೆಂಬ ಆಶಂಕೆ ನಿಮಗಿದ್ದರೆ ಒಬ್ಬ ಸ್ತ್ರೀಯನ್ನು ಮಾತ್ರ (ವಿವಾಹವಾಗಿರಿ).'' (ಪವಿತ್ರ ಕುರ್‌ಆನ್‌; 4:3)

ಇಲ್ಲಿ ನ್ಯಾಯವೇ ಬುನಾದಿಯಾಗಿದೆ. ಅದು ಅಷ್ಟೊಂದು ಸುಲಭದಲ್ಲಿ ಸಾಧ್ಯವಲ್ಲ. ಆದ್ದರಿಂದ ಇಸ್ಲಾಮ್‌ ಮೂಲಭೂತವಾಗಿ ಏಕಪತ್ನಿತ್ವವನ್ನೇ ಅಂಗೀಕರಿಸಿದೆ. ಆದರೆ ಏಕಪತ್ನಿತ್ವವು ಕೆಲವೊಮ್ಮೆ ಅಕ್ರಮ ಮತ್ತು ಅನ್ಕಾಯವಾಗುವ ಸನ್ನಿವೇಶಗಳಿವೆ. ಅಂತಹ ಸಂದರ್ಭಗಳಲ್ಲಿ ಅದು ಅನಿವಾರ್ಯವಾಗಿ ಒ೦ದು ವಿಶಿಷ್ಟ ನಿಯಮವನ್ನು ಅವಲಂಬಿಸುತ್ತದೆ. ಅಲ್ಲಿ ಯೂ ಸಂಪೂರ್ಣ ನ್ಯಾಯ ದೊರೆಯುವ ಅವಕಾಶವಿಲ್ಲವೆಂದು ತಿಳಿದಿದೆ. ಒಂದು ದೊಡ್ಡ ಅಪಾಯವನ್ನು ತಪ್ಪಿಸಲಿಕ್ಕಾಗಿ ಒಂದು ಸಣ್ಣ ಅಪಾಯವನ್ನು. ಅದು ಅಂಗೀಕರಿಸಿದೆ.

ತರುಣರು ಬಹುಸಂಖ್ಯೆಯಲ್ಲಿ ಸಾಮೂಹಿಕವಾಗಿ ಮೃತ್ಯುಗೀಡಾಗುವ ಯುದ್ಧ ಮುಂತಾದ ಸಂದರ್ಭಗಳಲ್ಲಿ ಸಮಾಜದಲ್ಲಿ ಇ೦ತಹ ಕಾನೂನು ನಿರ್ಮಾಣ ಅನಿವಾರ್ಯ ವಾಗುತ್ತದೆ. ಅಲ್ಲಿ ಸಂತುಲಿತ ಸ್ಥಿತಿಯು ಅಸ್ತವ್ಯಸ್ತವಾಗಿ ಸ್ತ್ರೀಯರು ಪುರುಷರಿಗಿಂತ ಹೆಚ್ಚಾಗುತ್ತಾರೆ. 'ಅಂತಹ ಪರಿಸ್ಥಿತಿಯಲ್ಲಿ ಸಾಮಾಜಿಕ ಅರಾಜಕತೆ ಮತ್ತು ನೈತಿಕ ಅಧಃ

ಮಹಿಳೆ ಇಸ್ಲಾಮಿನಲ್ಲಿ 35

ಪತನದಿಂದ ರಕ್ಷಣೆ -ಹೊಂದಲಿಕ್ಕಾಗಿ ಬಹುಪತ್ನಿತ್ವವನ್ನು ಅವಲಂಬಿಸಬೇಕಾಗುತ್ತದೆ. ಅನಾಥ ಸ್ತ್ರೀಯೋರ್ವಳು ತನ್ನ ಮತ್ತು ಕುಟುಂಬದೆ ಪೋಷಣೆಗಾಗಿ ಹೊರಗಿಳಿದು ಕೆಲಸ ಮಾಡಬಹುದು. ಅದು ನಿಜ. ಆದರೆ ಸಹಜವಾದ ಲೈಂಗಿಕ ತೃಷೆಯನ್ನು ನೀಗಿಸಲು ಆಕೆ ಏನು ಮಾಡಬೇಕು? ಪರಮ ಸಾಧ್ವಿ ಅಥವಾ ದೇವಚರಳಾಗಿರದ ಸ್ಥಿತಿಯಲ್ಲಿ, ಆಕೆಯು ತನ್ನ ಪಾವಿತ್ರ್ಯವನ್ನು ಅನ್ಯ ಪುರುಷನಿಗೆ ಸಮರ್ಪಿಸದೆ ಬೇಡಿಕೆಯನ್ನು ಈಡೇರಿಸುವುದು ಹೇಗೆ?... ಹಾಗೆಯೇ ಆಕೆಯ ಸಂತಾನ ಮೋಹ... ಅದನ್ನು ಆಕೆ ಹೇಗೆ ಸಾಧಿಸಬೇಕು? ಸ೦ತಾನೋತ್ಪಾದನೆಯು ಒಂದು ನೈಸರ್ಗಿಕ ಹ೦ಬಲವಾಗಿದೆ. ಅದರಿ೦ದ ಯಾರೊಬ್ಬರೂ ಮುಕ್ತರಲ್ಲ. ಹ೦ಬಲವು ಸ್ತ್ರೀಯರಲ್ಲಿ ಪುರುಷರಿಗಿ೦ತ ಪ್ರಬಲ ಮತ್ತು ತೀವ್ರವಾಗಿರುವುದು. ಅದು ಆಕೆಯ ಅಸ್ತಿತ್ವದ ಮೂಲಾಧಾರವಾಗಿದೆ. ಅದಿಲ್ಲದಿದ್ದರೆ ಜೀವನದ ಮಾಧುರೃವನ್ನು ಆಕೆ ಸವಿಯಲಾರಳು.

ಕೇವಲ ಸ್ತ್ರೀಯ ಹಿತದೃಷ್ಟಿಯಿ೦ದಲೇ ಆಲೋಜಿಸಿದರೂ ಇ೦ತಹ ಬೇಡಿಕೆಗಳ ಈಡೇರಿಕೆಗೆ ಓರ್ವನೇ ಪುರುಷನ ಆಶ್ರಯದಲ್ಲಿ ಒಂದಕ್ಕಿ೦ತ ಹೆಚ್ಚು ಸ್ತ್ರೀಯರು ಸೇರಿಕೊಳ್ಳುವುದರ ಹೊರತು ಬೇರೆ ಮಾರ್ಗವೇನಿದೆ? ಹೌದು, ಬಹಿರಂಗವಾಗಿಯೂ ಕಾನೂನುಬದ್ಧವಾಗಿಯೂ ಸಮಾನ ಹಕ್ಕುಗಳೊಂದಿಗೆ (ಗುಪ್ತ ಮನೋಭಾವಗಳ ಮಟ್ಟಿಗೆ ಅದು ಸಾಧ್ಯವಾಗಬೇಕೆಂದಿಲ್ಲ. ಏಕೆ೦ದರೆ ಕಾನೂನಿನಿಂದ ಅದರ ಮೇಲೆ ಯಾವ ಪ್ರಭಾವ ಬೀರಲೂ ಸಾಧ್ಯವಿಲ್ಲ.) ಓರ್ವ ಪುರುಷನ ಆಶ್ರಯದಲ್ಲಿ ಸೇರುವುದೇ ಉತ್ತಮ.

ಇದು ಪ್ರಸ್ತುತ ಕಾನೂನು ನಿರ್ಮಾಣದ ಮೂಲಕ ಇಸ್ಲಾಮ್‌ ಗುರಿಯಾಗಿಟ್ಟಿರುವ ಕೆಲವು ಧ್ಯೇಯಗಳಾಗಿವೆ. ಓರ್ವ ಪುರುಷನ ಆಶ್ರಯದಲ್ಲಿ ಮೂರ್ನಾಲ್ಕು ಸ್ತ್ರೀಯರು ಸೇರುವ ಮಾತಂತಿರಲಿ ಈರ್ವರು ಸ್ತ್ರೀಯರೇ ಹೊಂದಿಕೊಳ್ಳುವುದು ಸುಲಭಸಾಧ್ಯವೆಂದು ಯಾರೂ ಹೇಳಲಾರರು. ಅದರಿಂದ ಆಕೆಯ ಮನಸ್ಸಿಗೆ ಸಮಾಧಾನವಾಗಲೀ ಸ೦ತೋಷವಾಗಲೀ ದೊರೆಯದು. ಆದರೆ ಅದೊ೦ದು ಅನಿವಾರ್ಯ ಸ್ಕಿ ತಿ. 'ತಾನು ಏಕಾಂಗಿಯಾಗಿ ಉಳಿಯುವುದ ಕ್ಕಿಂತ ಇದರಲ್ಲಿ ಕಡಿಮೆ ಆಪತ್ತಿದೆಯೆಂದು ಮನಗಾಣದಿರುತ್ತಿದ್ದರೆ ದುರ್ಗಮ ಮಾರ್ಗವನ್ನು ಆಕೆ ಅವಲಂಬಿಸುತ್ತಿರಲಿಲ್ಲ.

ಸ್ತ್ರೀ-ಪುರುಷರ ಅನುಪಾತವನ್ನು ಯುದ್ಧದ೦ತೆಯೇ ಇತರ ಹಲವು ಕಾರಣಗಳೂ ಅಸ್ತವ್ಯಸ್ತಗೊಳಿಸಬಹುದು. ಬಾಹ್ಮ ಜಗತ್ತಿಗೆ ಸಂಬಂಧಿಸಿದ ಅವಘಡ ಮತ್ತು ಸಾಂಕ್ರಾಮಿಕ ರೋಗಗಳಿಗೆ ಹೆಚ್ಚಿನ ಸಲ ಪುರುಷರೇ ಬಲಿಯಾಗುತ್ತಾರೆ. ಪುರುಷರ ಸುರಕ್ಷಿತತೆಯು ಸ್ತ್ರೀಯರಿಗಿ೦ತ ಕಡಿಮೆ. ಇನ್ನು ಸ್ತ್ರೀ-ಪುರುಷರ ಸಂಖ್ಯಾ ನಿಷ್ಠತ್ತಿಯು ಸಮಾನವಾಗಿರುವಾಗ ಬಹುಪತ್ನಿತ್ಚವಿರಲಾರದು. ಇತರರು ಬಹುಪತ್ನಿತ್ವ ಸ್ವೀಕರಿಸಿದ್ದರಿಂದ ವಿವಾಹವಾಗಬಯಸುವ ಓರ್ವ ಯುವಕನಿಗೆ ಸ್ತ್ರೀಯರು ದೊರೆಯಲಿಲ್ಲವೆ೦ಬ ಸನ್ನಿವೇಶ ಎ೦ದೂ ಬಂದಿಲ್ಲ.

ಅದಲ್ಲದೇ ಕರ್ಮಶಾಸ್ತ್ರ ವಿದ್ವಾಂಸರು ಸಾಮಾನ್ಯವಾಗಿ ಅರಿತಿರುವ ಕೆಲವು ವೈಯಕ್ತಿಕ ಸಂದರ್ಭಗಳಿವೆ. ಅಂತಹ ಸಂದರ್ಭಗಳಲ್ಲಿಯೂ ಬಹುಪತ್ನಿತ್ವ ಅನಿವಾರ್ಯವಾಗುತ್ತದೆ.

36 ಮಹಿಳೆ ಇಸ್ಲಾಮಿನಲ್ಲಿ

ಅಪರೂಪಕ್ಕೊಮ್ಮೆ ಕೆಲವು ಪುರುಷರು ಲೈಂಗಿಕವಾಗಿ ಅತಿ ಪ್ರಬಲರಾಗಿರುತ್ತಾರೆ. ಒಬ್ಬಳೇ ಪತ್ನಿಗೆ ಆತನನ್ನು ಸ೦ತೃಪ್ತಿಗೊಳಿಸಲು ಸಾಧ್ಯವಾಗದಿರಬಹುದು. ಆಗ ಆತನು ಕಾನೂನು ಬದ್ಧವಾಗಿ ದ್ವಿತೀಯ ಪತ್ನಿಯನ್ನು ಹೊ೦ದಬೇಕಾಗುವುದು. ಅಥವಾ ಗುಪ್ತಕಾಮಿನಿಯರನ್ನು ಸ೦ಪರ್ಕಿಸಬೇಕಾಗುತ್ತದೆ. ಇದು ಸಭ್ಯ ಸಮಾಜವು ಎಂದೆಂದಿಗೂ ಒಪ್ಪದ ಒಂದು ನೀಚ ಕಾರ್ಯವಾಗಿದೆ.

ಪತ್ನಿಯ ಬಂಜೆತನವೂ ಕಾರಣಗಳಲ್ಲೊಂದಾಗಿದೆ. ಸಂತಾನ ಮೋಹವು ಮಾನವನಲ್ಲಿ ಅಗಾಧವಾಗಿ ಬೇರೂರಿರುತ್ತದೆ. ಅದು ಪವಿತ್ರ ಮತ್ತು ಉತ್ಪಷ್ಟ ಅಭಿಲಾಷೆಯಾಗಿದೆ. ಬಂಜೆತನಕ್ಕೆ ಪತ್ನಿಯು ಅಪರಾಧಿನಿಯಲ್ಲವೆ೦ಬುದು ನಿಜ. ಆದರೆ ಓರ್ವ ಪತಿಯ ಸಂತಾನ ಭಾಗೃದ ಹಕ್ಕನ್ನು ಆತನಿಗಿಷ್ಟವಿಲ್ಲದಿದ್ದರೂ ನಿಷೇಧಿಸಬೇಕೆಂದು ಯಾರೂ ಹೇಳಲಾರರು.

ಇನ್ನೋರ್ವಳನ್ನು ತನ್ನ ಪತಿಯೊಂದಿಗೆ ಸೇರಿಸಲು ಪ್ರಥಮ ಪತ್ನಿ ಒಪ್ಪಿದರೆ ಅದು -`

ಸಾಧ್ಯವಾಗುವುದು. ಒ೦ದು ವೇಳೆ ಆಕೆಗೆ ಅದು ಅಸಹ್ಮವೆ೦ದಾದರೆ ಆಗ ವಿಚ್ಛೇದನವೇ ಉಳಿಯುವ ಮಾರ್ಗ.

ಕೆಲವೊಮ್ಮೆ ಪತ್ನಿಯು ನಿತ್ಯರೋಗಿಯಾಗಿರಬಹುದು. ಆಕೆಯೊಂದಿಗೆ ಲೈಂಗಿಕ ಸಂಬಂಧ ಅಸಾಧ್ಯವಾಗಿರಬಹುದು. ಇಂತಹ ಸನ್ನಿವೇಶದಲ್ಲಿ ಲೈಂಗಿಕ ಕಾಮನೆಯು ಹೀನವೆಂದೂ ಅದಕ್ಕಾಗಿ ಸ್ತ್ರೀಯೋರ್ವಳ ಸೌಭಾಗ್ಯವು ನಾಶವಾಗಬಾರದೆಂದೂ ಯಾರೂ ಹೇಳಲಾರರು.” ಇಲ್ಲಿರುವ ಸಮಸ್ಯೆಯು ಕೀಳು ಮೇಲೆಂಬುದಲ್ಲ. ಇದೂ ಬೇರೆ ಉಪಾಯ ವಿಲ್ಲದ ಅನಿವಾರ್ಯ ಸ್ಥಿತಿಯಾಗಿದೆ. ಇನ್ನು, ಓರ್ವ ಪುರುಷನು ತನ್ನ ಪತ್ನಿಯ ಭಾವನೆಗಳನ್ನು ಮನ್ನಿಸಿ ಅದರಿಂದ ಮೇಲೇರಲು ಸಾಧ್ಯವಾದರೆ ಅದು ಹೆಚ್ಚು ಪ್ರಶಂಸಾರ್ಹ. ಮಾನವ ಸಾಮರ್ಥ್ಯಕ್ಕೆ ಮೊರಿದ ವಿಷಯವನ್ನು ಅಲ್ಲಾಹನು ಹೇರುವುದಿಲ್ಲ. ಹೊರಗೆ ಸಭ್ಯತೆ ನಟಿಸುವುದಕ್ಕಿ೦ತ ಬಹಿರಂಗವಾಗಿ ಸತ್ಯವನ್ನು ಒಪ್ಪಿಕೊಳ್ಳುವುದೇ ಉತ್ತಮ. ಬಹುಪತ್ನಿತ್ವವನ್ನು ನಿಷೇಧಿಸಿರುವ ರಾಷ್ಟ್ರಗಳಲ್ಲಿ ನಡೆಯುತ್ತಿರುವಂತೆ ಕತ್ತಲೆಯ ಮರೆಯಲ್ಲಿ ವಂಚನೆ * ಕ್ಕಿಂತ ಅದೆಷ್ಟೋ ಉತ್ತಮ.

ಹಾಗೆಯೇ ಪತಿಗೆ ಪತ್ನಿಯನ್ನು ಪ್ರೀತಿಸಲಾಗದ, ಅದೇ ವೇಳೆ ಆಕೆಯನ್ನು ತೊರೆಯಲೂ ಮನಸ್ಸಿಲ್ಲದ ಕೆಲವು ಸ೦ದರ್ಭಗಳನ್ನೂ ನಾವು ನೆನಪಿನಲ್ಲಿಡಬೇಕಾಗಿದೆ. ಅಂತಹ ಸಂದರ್ಭ ಗಳನ್ನು ತಪ್ಪಿಸಲು ಅಥವಾ ನಿಯಂತ್ರಿಸಲು ಮಾನವನಿಗೆ ಸಾಧ್ಯವಾಗದು.

ಎಲ್ಲಾ ಪರಿಸ್ಥಿತಿಗಳಲ್ಲಿ ಪುರುಷನು ತನ್ನ ಪ್ರಥಮ ಪತ್ನಿಯನ್ನು ತೊರೆಯಲೊಪ್ಪ ದಿರುವುದನ್ನು ನಾವು ಕಾಣುತ್ತೇವೆ. ಆಕೆಯೊ೦ದಿಗಿನ ಸುದೀರ್ಪ ಕಾಲದ ಸಹಬಾಳ್ವೆಯನ್ನು ಮರೆಯಲು ಅಥವಾ ಕಡೆಗಣಿಸಲು ಆತ ಸಿದ್ಧನಿಲ್ಲ. ಇದು ಪತ್ನಿಯ ಮಟ್ಟಿಗೆ ಅಷ್ಟೊಂದು

7. ಜೀವನೋದ್ದೇಶ ನಿರ್ವಹಣೆಗೆ ಅಗತ್ಯವಿರುವ ನೈಸರ್ಗಿಕ ಭಾವನೆಗಳೆಲ್ಲವೂ ಮೂಲಭೂತವಾಗಿ ಪವಿತ್ರ ಮತ್ತು ಗೌರವಾರ್ಹವಾಗಿದ್ದು ಅವುಗಳನ್ನು ಯೋಗ್ಯ ರೀತಿಯಲ್ಲಿ ಸಂತೃಪ್ತಿಗೊಳಿಸಬೇಕೆ೦ಂದೂ ಇಸ್ಲಾಮ್‌ ಹೇಳುತ್ತದೆ. ಅದು ಅಪರಾಧಕ್ಕೆಡೆ ಕೊಟ್ಟಾಗ ಮಾತ್ರ ಇಸ್ಲಾಮ್‌ ಅದನ್ನು ದ್ವೇಷಿಸುತ್ತದೆ.

ಮಹಿಳೆ ಇಸ್ಲಾಮಿನಲ್ಲಿ 37

ಹಿತಕರವಲ್ಲದಿದ್ದರೂ ಅತಿ ಶ್ರೇಷ್ಠವಾದ ವಿಚಾರಧಾರೆಯಾಗಿದೆ. ಪತ್ನಿಗೆ ಇನ್ನಷ್ಟು ಕಷ್ಟ ಅಥವಾ ಕಿರುಕುಳ ಕೊಡಲಿಕ್ಕಾಗಿ ಆಕೆಯನ್ನು ಸ೦ಗಡ ಇರಿಸಿಕೊ೦ಡಿದ್ದರೆ ಅದು ಅಲ್ಲಾಹನ ದೃಷ್ಟಿಯಲ್ಲಿ ಅತ್ಯಂತ ನಿಕೃಷ್ಟ ಕೆಲಸವಾಗಿದೆ. ಪತ್ನಿಯು ಅಪೇಕ್ಷಿಸಿದ ಕ್ಷಣದಲ್ಲಿಯೇ ವಿವಾಹ ವಿಚ್ಛೇದನ ಮಾಡಬೇಕು. KKK

ನಾವು ಆರೋಪಗಳೆ ಬಗ್ಗೆ ಇನ್ನೂ ಪರಿಶೀಲಿಸೋಣ. ಉದ್ಯೋಗ ಹಕ್ಕಿನ ಸಮಸ್ಯೆ ಯನ್ನು ತೆಗೆದುಕೊಳ್ಳೋಣ-

ಅದೊಂದು ಹಕ್ಕೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಇಸ್ಲಾಮಿನ ಆರಂಭ ಹಂತದಲ್ಲಿ ಸ್ತ್ರೀಯರು ತಮ್ಮ ಪರಿಸರಕ್ಕೆ ಯುಕ್ತವಾದ ಉದ್ಯೋಗವನ್ನು ಮಾಡುತ್ತಿದ್ದರು. ಇಲ್ಲಿರುವ ಸಮಸ್ಯೆಯು ಹಕ್ಕು ಸ್ಥಾಪನೆಯದ್ದಲ್ಲ. ವಾಸ್ತವದಲ್ಲಿ ಸಮಾಜಕ್ಕೂ ಸ್ವಯಂ ಸ್ತ್ರೀಗೂ ಅಗತ್ಯವಾದ ಕೆಲಸಗಳಲ್ಲಿ ನಿರತವಾಗುವುದನ್ನು ಇಸ್ಲಾಮ್‌ ವಿರೋಧಿಸುವುದಿಲ್ಲ. ಹುಡುಗಿಯರ ಶಿಕ್ಷಣ, ರೋಗಿಗಳ ಸೇವೆ, ಸ್ತ್ರೀಯರ ಚಿಕಿತ್ಸೆ ಮುಂತಾದ ಸ್ತ್ರೀಯರಿಗೆ ಸಂಬಂಧಿಸಿದ ಕೆಲಸಗಳನ್ನು ಇಸ್ಲಾಮ್‌ ಕೇವಲ ಅನುಮತಿಸಿರುವುದಷ್ಟೇ ಅಲ್ಲ, ಅದು ಸ್ತ್ರೀಯರ ಕಡ್ಡಾಯ ಕೆಲಸವೆಂದೂ ಭಾವಿಸುತ್ತದೆ. ಅದಕ್ಕಾಗಿ ಪುರುಷರನ್ನು ಯುದ್ಧಕ್ಕೆ ಸನ್ನದ್ಧಗೊಳಿಸುವಂತೆ ಅವರನ್ನು ತರಬೇತುಗೊಳಿಸಬೇಕು. ಕುಟು೦ಬ ಪೋಷಣೆಗೆ ಜನರಿಲ್ಲ ದಾಗ ಅಥವಾ ಪುರುಷನ ಆದಾಯವು ಸಾಕಾಗದಿರುವಾಗ, ಹೊರಗೆ ಹೋಗಿ ಕೆಲಸ ಮಾಡುವ ಹಕ್ಕನ್ನು ಇಸ್ಲಾಮ್‌ ಸ್ತ್ರೀಗೆ ನೀಡಿದೆ. ಜೀವನ ನಿರ್ವಹಣೆಗಾಗಿ ವಾಮಮಾರ್ಗಗಳನ್ನು ಅವಲಂಬಿಸುವುದಕ್ಕಿಂತ ಇದು ಎಷ್ಟೋ ಉತ್ತಮ.

ಇವೆಲ್ಲವೂ ಅನಿವಾರ್ಯ ಪರಿಸ್ಥಿತಿಗಳಾಗಿವೆ. ಆಧಾರದಲ್ಲಿಯೇ ಇಸ್ಲಾಮ್‌ ಅದಕ್ಕೆ ಅನುಮತಿ ನೀಡುತ್ತದೆ. ಆದರೆ ಪಾಶ್ಚಾತ್ಮ ಮತ್ತು ಕಮ್ಯೂನಿಸ್ಟ್‌ ರಾಷ್ಟ್ರಗಳಲ್ಲಿ ಕಂಡು ಬರುತ್ತಿರುವಂತೆ ಸ್ತ್ರೀಯರು ಹೊರಗೆ ಹೋಗಿ ಕೆಲಸ ಮಾಡುವುದನ್ನು ಸಮಾಜದ ಮೂಲ ಭೂತ ಸ್ವಭಾವವೆ೦ದು ಭಾವಿಸುವುದು ಮೂಢತನವಾಗಿದೆ. ಇಸ್ಲಾಮ್‌ ಅದನ್ನು ಅ೦ಗೀಕರಿಸು ವುದಿಲ್ಲ. ಏಕೆಂದರೆ ಅದು ಸ್ತ್ರೀಯನ್ನು ಆಕೆಯ ಪ್ರಾಥಮಿಕ ನೀತಿಯಿ೦ದ ಹೊರ ಹಾಕುವುದೇ ಆಗಿದೆ. ಅದರಿಂದ ಸಾಧಿತವಾಗುವ ಒಳಿತಿಗಿ೦ತ ಹೆಚ್ಚಾಗಿ ಮಾನಸಿಕ ಸಾಮಾಜಿಕ ಮತ್ತು ನೈತಿಕವಾದ ಅನೇಕಾರು ಕೆಡುಕುಗಳಿಗೆ ಅದು ಪ್ರೇರಕವಾಗುವುದು.

ಸ್ತ್ರೀಯ ದೈಹಿಕ, ವೈಚಾರಿಕ ಮತ್ತು ಮಾನಸಿಕ ರಚನೆಯು ಮಾತೃತ್ವವೆಂಬ ವಿಶಿಷ್ಟ ನೀತಿ ನಿರ್ವಹಣೆಗಾಗಿ ಸಜ್ಜುಗೊಳಿಸಲ್ಪಟ್ಟಿರುವುದನ್ನು ಯಾರೂ ನಿರಾಕರಿಸಲಾರರು. ನಿಸರ್ಗದತ್ತ ವಾದ ನೀತಿಯನ್ನು ಆಕೆ ನಿರ್ವಹಿಸದಿದ್ದರೆ, ನಿರ್ದಿಷ್ಟ ಧ್ಯೇಯಕ್ಕಾಗಿ ಸಜ್ಜುಗೊಳಿಸಲ್ಪಟ್ಟ ಜೈವಿಕ ಶಕ್ತಿಯನ್ನು ನಿರ್ಲಕ್ಷಿಸಿ ಅದನ್ನು ಮೂಲ ಹಾದಿಯಿಂದ ತಪ್ಪಿಸಿದ೦ತಾದೀತು. ಅನಿವಾರ್ಯ ಪರಿಸ್ಥಿತಿಗಳಲ್ಲಿ ಹಾಗಾಗುವುದಿದ್ದರೆ ತೊಂದರೆಯಿಲ್ಲ. ಆದರೆ ಒಂದು ಮಾನವ ಜನಾಂಗದ ಅನಾಗರಿಕ ಭಾವ ಕುಚೇಷ್ಟೆಗಳಿಗನುಗುಣವಾಗಿ ಆಕೆಯನ್ನು ಕುಣಿಯಗೊಡಬೇಕೆಂಬ

38 ಮಹಿಳೆ ಇಸ್ಲಾಮಿನಲ್ಲಿ

ವಾದವು ಗ೦ಡಾ೦ತರಕಾರಿಯಾಗಿದೆ. ಅತಿ ಭೋಗ ಲಾಲಸೆಯೇ ಅದರ ಹಿಂದಿರುವ ಸ್ವಾರ್ಥ ಧ್ಯೇಯ. ಅದರಲ್ಲಿ ಸುಪ್ತವಾಗಿರುವ ಭಾವಿ ಗಂಡಾಂತರವನ್ನು ಯಾರೂ ಗಮನಿಸುವುದಿಲ್ಲ. ಆದರೆ ಇಸ್ಲಾಮಿಗೆ ಅದನ್ನೆ೦ದೂ ಅಂಗೀಕರಿಸಲು ಸಾಧ್ಯವಿಲ್ಲ. ಒಂದು ವೇಳೆ ಅದನ್ನು ಅಂಗೀಕರಿಸಿದರೆ ಅದರ ಅತಿ ದೊಡ್ಡ ವೈಶಿಷ್ಟ್ಯವು ನಷ್ಟವಾದೀತು. ಹೌದು, ಜನಾಂಗಗಳ ಮಧ್ಯೆ ಯಾವ ಭೇದಭಾವವನ್ನೂ ತೋರದೆ ಮಾನವಕುಲದ ಸಮಗ್ರ ಏಕತೆಯನ್ನು ವೀಕ್ಷಿಸುವ ಅದರ ವಿಶಾಲ ದೃಷ್ಟಿಕೋನ.

ಮಾತೆಯಾಗಿರುತ್ತಾ ಸ್ತ್ರೀಯು ಉದ್ಯೋಗ ನಿರ್ವಹಿಸಬಹುದಲ್ಲವೇ. ಮಕ್ಕಳ ಸಮಸ್ಯೆ ಯನ್ನು ಮಕ್ಕಳ ಕಲ್ಯಾಣ ಕೇಂದ್ರಗಳು ನಿವಾರಿಸಬಹುದೆಂದು ಕೆಲವರು ವಾದಿಸುತ್ತಾರೆ.

ಇದು ಅನುಭವದಿಂದ ತಿರಸ್ಕೃತವಾಗಿರುವ ಬಾಲಿಶ ವಾದವಾಗಿದೆ. ಮಕ್ಕಳಿಗೆ ಅಗತ್ಯವಿರುವ ದೈಹಿಕ ಸಂರಕ್ಷಣೆ ಮತ್ತು ಬೌದ್ಧಿಕ, ಮಾನಸಿಕ ಶಿಕ್ಷಣ ನೀಡಲು ನರ್ಸರಿಗಳಿಗೆ ಸಾಧ್ಯವಾಗಬಹುದು. ಆದರೆ ಜೀವನದ ಅಸ್ತಿತ್ವಕ್ಕೆ ಅನಿವಾರ್ಕವಾಗಿರುವ ಉತ್ತಮ ಗುಣ ನಡವಳಿಕೆಗಳ ಪೋಷಣೆಗೆ ಅತ್ಯಗತ್ಯವಾಗಿರುವ ಅಂಶ ದೊರೆಯಲಾರದು. ಮಾತೃಸ್ನೇಹ! ಮಾತೃಲಾಲನೆ! ಹತ್ತಮ್ಮ ಹೊತ್ತರೂ ಹೆತ್ತಮ್ಮಳಿಗೆ ಸಾಟಿಯಾಗದ ಸ್ವಂತ ಅಮ್ಮ!

ಆಧುನಿಕ ಹುಚ್ಚು ನಾಗರಿಕತೆಗಾಗಲೀ ವಿವೇಕಹೀನ ಕಮ್ಮೂನಿಸ್ಟರಿಗಾಗಲೀ ಮಾನವ ಪ್ರಕೃತಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ಅತಿ ಕಡಿಮೆಯೆಂದರೂ ಪ್ರಥಮ ಎರಡು ವರ್ಷಗಳಲ್ಲಿ ಮಗುವಿಗೆ ಮಾತೃಲಾಲನೆ ದೊರೆಯಲೇಬೇಕು. ಅದರಲ್ಲಿ ಇನ್ನಾರೂ ಭಾಗಿಗಳಾಗ ಬಾರದು. ಪ್ರೀತಿಯ ಸಹೋದರನೂ ಕೂಡಾ. ಅದಕ್ಕೆ ತನ್ನ ಬೇಡಿಕೆಗಳನ್ನು ಸದಾ ಗಮನಿಸುವ, ತನ್ನ ಕಷ್ಟ ಯಾತನೆಗಳನ್ನು ತಿಳಿಯುವ, ಸಾ೦ತ್ವನ ಮತ್ತು ಅಭಯ ನೀಡಿ ಸಂರಕ್ಷಿಸುವ, ನಿರಂತರ ಜಾಗ್ರತೆ ವಹಿಸುವ ಅಮ್ಮನ ಅಗತ್ಯವಿದೆ. ತಾಯಿಯ ಕೊರತೆಯು ಆತನ ಮನಸ್ಸಿನಲ್ಲಿ ಸ೦ಘರ್ಷ ಮತ್ತು ಸಂಕುಚಿತತೆಯನ್ನು ನಿರ್ಮಿಸುವುದು. ಶಿಶುಕಲ್ಮಾಣ ಕೇಂದ್ರಗಳಲ್ಲಿ ನಡೆಯುವುದೇನು? ಅಲ್ಲಿ ಹತ್ತಿಪ್ಪತ್ತು ಮಕ್ಕಳು ಓರ್ವ ಕೃತಕ ಮಮ್ಮಿಯ ಆಶ್ರಯದಲ್ಲಿ ಸೇರುವರು. ಆಕೆಯನ್ನು ಒಲಿಸಿಕೊಳ್ಳಲು ಎಲ್ಲರೂ ಪ್ರಯತ್ನಿಸುತ್ತಾರೆ. ಪ್ರಯತ್ನವು ಕ್ರಮೇಣ ಸ್ಪರ್ಧೆಗೆ ತಿರುಗುತ್ತದೆ. ಸಂಘರ್ಷ ಮತ್ತು ಸ್ಪರ್ಧಾತ್ಮಕ ಮನೋಭಾವ ದಿಂದ ಅವರು ಬೆರೆಯುತ್ತಾರೆ. ಇದರಿಂದಾಗಿ ಮುದ್ದು ಹೃದಯಗಳು ಪ್ರೀತಿ ಮತ್ತು ಸಹೋದರತೆಯ ಒರತೆಯಿಲ್ಲದ ಬರಡು ಭೂಮಿಯಾಗಿ ಮಾರ್ಪಡುತ್ತವೆ.

ಸ್ತ್ರೀಗೆ ಉದ್ಯೋಗವು ಕೆಲವೊಮ್ಮೆ ಅನಿವಾರ್ಕವಾಗುವ೦ತೆಯೇ ಮಕ್ಕಳಿಗೆ ಪರಿಸ್ಥಿತಿಯ ಒತ್ತಡಗಳಿಂದಾಗಿ ಶಿಶುಕಲ್ಮಾಣ ಕೇಂದ್ರಗಳ ಪರಿಪಾಲನೆಯೂ ಅನಿವಾರ್ಯವಾಗುತ್ತದೆ. ಅದೇ ವೇಳೆ ಯಾವ ಅನಿವಾರ್ಯತೆಯೂ ಇಲ್ಲದೆ ಅದನ್ನೇ ಆಧಾರಗೊಳಿಸುವುದು ಅವಿವೇಕತನ ವಾಗಿದೆ. '“

ಭಾವೀ ಜನಾ೦ಗವನ್ನು ವಿನಾಶಕೂಪಕ್ಕೆ ಎಸೆದು ಲೌಕಿಕ ಸವಲತ್ತುಗಳ ಉತ್ಪಾದನೆಯನ್ನು ಹೆಚ್ಚಿಸುವುದರಿಂದ ಯಾವ ಪ್ರಯೋಜನವಿದೆ?

ಮಹಿಳೆ ಇಸ್ಲಾಮಿನಲ್ಲಿ 39

ಮತಿಗೆಟ್ಟ ಪಾಶ್ಚಾತ್ಮ ಲೋಕದಲ್ಲಿ ಅದರ ಐತಿಹಾಸಿಕ, ಭೌಗೋಳಿಕ, ರಾಜಕೀಯ ಮತ್ತು ಆರ್ಥಿಕ ಒತ್ತಡಗಳ ಬಗ್ಗೆ ಏನಾದರೂ ಸಮರ್ಥನೆಯಿರಬಹುದು. ಆದರೆ ಮುಸ್ಲಿಮ್‌ ಲೋಕದಲ್ಲಿ ನಮಗೆ ಬಗ್ಗೆ ಯಾವ ಸಮರ್ಥನೆಯಿದೆ? ಸ್ತ್ರೀಯರು ಉದ್ಯೋಗ ಕೇಂದ್ರಗಳಿಗೆ ಹೋಗುವುದಕ್ಕೆ, ದುಡಿಯುವ ಸಾಮರ್ಥ್ಯವಿರುವ ಪುರುಷರ ಅಭಾವ ಕಾರಣವೇ? ಮುಸ್ಲಿಮ್‌ ಪುರುಷನು, ಆತ ಪತಿ, ಪಿತ, ಸಹೋದರ ಅಥವಾ ಸಂಬಂಧಿಕ ಯಾರೇ ಆಗಿರಲಿ ಸ್ತ್ರೀಯ ಸಂರಕ್ಷಣೆಯ ಹೊಣೆಯಿಂದ ಹಿಂದೆ ಸರಿದು ಆಕೆಯನ್ನು ಜೀವನ ನಿರ್ವಹಣೆಗಾಗಿ ಬೀದಿಗಿಳಿಸುವುದನ್ನು ನಾವು ಹೇಗೆ ತಾನೇ ಸಮರ್ಥಿಸಬಹುದು?

ಸ್ತ್ರೀಯು ಉದ್ಯೋಗದಲ್ಲಿದ್ದರೆ ಅದರಿಂದ ಆಕೆಗೆ ಸ್ವತಂತ್ರ ಆರ್ಥಿಕ ಅಸ್ತಿತ್ವ ಮತ್ತು ತನ್ಮೂಲಕ ಗೌರವ ದೊರೆಯುವುದೆಂದು ಅವರು ವಾದಿಸುತ್ತಾರೆ. ಸ್ತ್ರೀಯರಿಗೆ ಸ್ವತಂತ್ರ ಆರ್ಥಿಕ ಅಸ್ತಿತ್ವವಿರಬಾರದೆಂದು ಇಸ್ಲಾಮ್‌ ಹೇಳುತ್ತಿದೆಯೇ? ಮುಸ್ಲಿಮ್‌ ಲೋಕ ದಲ್ಲಿರುವ ಸಮಸ್ಯೆಯು ವ್ಯವಸ್ಥೆಯದ್ದಲ್ಲ. ಸ್ತ್ರೀ-ಪುರುಷರಿಗೆ ಗೌರವಾರ್ಹವಾದ ಜೀವನೋ ಪಾಯವಿಲ್ಲದೆ ಸಾರ್ವತ್ರಿಕವಾಗಿರುವ ಬಡತನವೇ ವಾಸ್ತವಿಕ ಸಮಸ್ಯೆಯಾಗಿದೆ. ಸ್ರೀ- ಪುರುಷರನ್ನೊಳಗೊ೦ಡ ಇಡೀ ಸಮಾಜವನ್ನು ಶ್ರೀಮಂತಗೊಳಿಸಲಿಕ್ಕಾಗಿ ಉತ್ಪಾದನಾ ಬಲವನ್ನು ಹೆಚ್ಚಿಸುವುದೇ ಅದಕ್ಕೆ ಪರಿಹಾರವಾಗಿದೆ. ಹೀಗೆ ಬಡತನವನ್ನು ಸಂಪೂರ್ಣವಾಗಿ ತೊಲಗಿಸಬೇಕು. ಅದರ ಹೊರತು ಉದ್ಯೋಗ ರಂಗದಲ್ಲಿ ಸ್ತ್ರೀಯು ಪುರುಷನೊಂದಿಗೆ ಸ್ಪರ್ಧಿಸುವುದು ಪರಿಹಾರವಲ್ಲ.

ಕುಟು೦ಬ ಪೋಷಣೆಗೆ ಒ೦ದೇ ಆದಾಯ ಮೂಲವಿರುವುದಕ್ಕಿಂತ ಎರಡು ಆದಾಯ ಮೂಲಗಳಿರುವುದು ಹೆಚ್ಚು ಸುರಕ್ಸಿತವೆ೦ದು ಕೆಲವರು ವಾದಿಸುತ್ತಾರೆ. ವಿರಳ ಪರಿಸ್ಥಿತಿ ಗಳಲ್ಲಿ ಅದು ಸೂಕ್ತ ವಾಗಿರಬಹುದು. ಆದರೆ ನೈಸರ್ಗಿಕವಾಗಿ ಸ್ತ್ರೀಗೆ ಸರಿ ಹೊಂದದ ಕೆಲಸ ಗಳಿಂದ ಪುರುಷನನ್ನು ದೂರವಿರಿಸಿ ಸ್ತ್ರೀಯರೆಲ್ಲರೂ ಸಾಮೂಹಿಕವಾಗಿ ರಂಗಕ್ಕಿಳಿಯ ಬೇಕೆಂದರೆ, ಒಂದು ಹೊಸ ಕುಟುಂಬದ ಉದಯವನ್ನು ತಡೆಯ ಬೇಕೆಂದರ್ಥ. ಅದರಿಂದ ಕಾನೂನು ಬದ್ಧವಾದ ಲೈಂಗಿಕ ಸಂಬಂಧಕ್ಕೆ ಆತ೦ಕವೊಡ್ಡಿ ಅನೈತಿಕ ಕೃತ್ಯಗಳಿಗೆ ದಾರಿ ಮಾಡಿ ಕೊಟ್ಟಂತಾದೀತು. ಇ೦ತಹ ದುರವಸ್ಥೆಯನ್ನು ನಿರ್ಮಿಸುವುದಕ್ಕೆ ಯಾವ ಆರ್ಥಿಕ, ಸಾಮಾಜಿಕ ಅಥವಾ ನೈತಿಕ ಸಮರ್ಥನೆ ದೊರೆಶೀತು?

ಸ್ತ್ರೀಯನ್ನು ಆಕೆಯ ಜನ್ಮಸಿದ್ದ ಧೈೇಯವಾಗಿರುವ ತಾಯ್ತನಕ್ಕಾಗಿ ವಿಶಿಷ್ಟವಾಗಿ ಚುನಾಯಿಸುವ ಮೂಲಕ ಇಸ್ಲಾಮ್‌, ಮಾನವನ ನೈಸರ್ಗಿಕತೆ ಮತ್ತು ಸಮಾಜದ ಬೇಡಿಕೆಗಳನ್ನು ಜಂಟಿಯಾಗಿ ಪರಿಗಣಿಸಿದೆ. ಆದ್ದರಿಂದಲೇ ಸ್ತ್ರೀಯ ಸ೦ರಕ್ಷಣಾ ಹೊಣೆಯನ್ನು ಪುರುಷರಿಗೆ ವಹಿಸಿಕೊಡಲಾಯಿತು. ಅದರಿಂದ ಹಿ೦ಜರಿಯಲು ಆತನಿಗೆ ಅನುಮತಿಯಿಲ್ಲ. ಜೀವನ ನಿರ್ವಹಣೆಯ ಸಂಕೀರ್ಣತೆಯಿಂದ ಆಕೆಯ ಮನಸ್ಸಿಗೆ ನೆಮ್ಮದಿ ನೀಡುವುದೇ ಅದರ ಧ್ಯೇಯ. ಆಕೆಯು ತನ್ನ ಸಂಪೂರ್ಣ ಸಾಮರ್ಥ್ಯವನ್ನು ಮಾನವ ಸೃಷ್ಟಿಯ

40 ಮಹಿಳೆ ಇಸ್ಲಾಮಿನಲ್ಲಿ

ನಿರ್ಮಾಣಕ್ಕೆ ವಿನಿಯೋಗಿಸಲೆ೦ದು .ಹಾಗೆ ಮಾಡಲಾಗಿದೆ. ನೀತಿ ನಿರ್ವಹಣೆಯಲ್ಲಿ ಇಸ್ಲಾಮ್‌ ಆಕೆಗೆ ಉನ್ನತ ಪದವಿ ಮತ್ತು ಗೌರವವನ್ನು ನೀಡಿತು. ಒಮ್ಮೆ ಓರ್ವರು ಪ್ರವಾದಿ ವರ್ಯರೊಡನೇಸ) ವಿಚಾರಿಸಿದರು: "ಜನರಲ್ಲಿ ನನ್ನ ಉತ್ತಮ ಬಾಂಧವ್ಯಕ್ಕೆ ಅತ್ಯಂತ ಅರ್ಹರು ಯಾರು?" ಅವರು ಹೇಳಿದರು: "ನಿನ್ನ ಮಾತೆ.” ವ್ಯಕ್ತಿ ಪುನಃ ಪ್ರಶ್ನಿಸಿತು: "ಅನಂತರ ಯಾರು"? 'ನಿನ್ನ ಮಾತೆ." ಪ್ರವಾದಿ(ಸ) ಎರಡನೇ ಬಾರಿ ಅದೇ ಉತ್ತರ ನೀಡಿದರು. ಅವರು ತನ್ನ ಪ್ರಶ್ನೆಯನ್ನು ಮೂರನೇ ಬಾರಿ ಕೇಳಿದರು. ಪ್ರವಾದಿ(ಸ) ಅದೇ ಉತ್ತರ ಪುನರಾವರ್ಶಿಸಿದರು. ನಾಲ್ಕನೆಯ ಬಾರಿಯೂ ಪ್ರಶ್ನಿಸಿದಾಗ ಪ್ರವಾದಿವರ್ಕರು(ಸ) ಹೇಳಿದರು: "ನಿನ್ನ ಪಿತ." (ಬುಖಾರಿ, ಮುಸ್ಲಿಮ್‌)

ಇದರಲ್ಲಿ ಮುಸ್ಲಿಮ್‌ ಮಹಿಳೆಯು ಮೊರೆಯಿಡುವ ಸಮಾನತೆಯ 'ಸಮಸ್ಯೆ' ಎಲ್ಲಿದೆ? ಮತದಾನ ಹಕ್ಕು ಮತ್ತು ಶಾಸನ ಸಭೆಯ ಪ್ರಾತಿನಿಧ್ಯಕ್ಕಾಗಿ ಕದ ತಟ್ಟುವ೦ತಹ ಯಾವ ಧ್ಯೇಯವನ್ನು ಇಸ್ಲಾಮ್‌ ಆಕೆಗೆ ಸಾಧಿಸದೆ ಬಿಟ್ಟಿದೆ?

ಪುರುಷನೊಂದಿಗಿರುವ ಮಾನವೀಯ ಸಮಾನತೆಯನ್ನು ಆಕೆ ಬಯಸುತ್ತಾಳೆಯೇ? ಸರಿ, ಕಾನೂನಿನ ದೃಷ್ಟಿಯಲ್ಲಿ ತಾತ್ವಿಕವಾಗಿಯೂ ಕಾರ್ಕರೂಪದಲ್ಲಿಯೂ ಇಸ್ಲಾಮ್‌ ಅದನ್ನು ಆಕೆಗೆ ನೀಡಿದೆ.

ಆರ್ಥಿಕ ಸ್ವಾತಂತ್ರ್ಯ ಮತ್ತು ಸಮಾಜದೊಂದಿಗೆ ನೇರವಾಗಿ ವ್ಯವಹಾರ ನಡೆಸುವ ಹಕ್ಕನ್ನು ಆಕೆ ಆಗ್ರಹಿಸುತ್ತಿದ್ದಾಳೆಯೇ? ಹಾಗಿದ್ದರೆ ಇಸ್ಲಾಮ್‌ ಪ್ರಸ್ತುತ ಹಕ್ಕುಗಳನ್ನು ಆಕೆಗೆ ಪ್ರಪ್ರಥಮವಾಗಿ ನೀಡಿದೆ!

ಶಿಕ್ಷಣ ಸೌಲಭ್ಯ ಬೇಕೆಂದು ಆಗ್ರಹಿಸುತ್ತಾಳೆಯೇ? ಹೌದು, ಅದನ್ನೂ ಇಸ್ಲಾಮ್‌ ಆಕೆಗೆ ಒದಗಿಸಿದೆ. ಮಾತ್ರವಲ್ಲದೇ ಅದು ಆಕೆಯ ಕಡ್ಡಾಯ ಕರ್ತವ್ಯವೆಂದೂ ನಿಶ್ಚಯಿಸಿದೆ.

ತನ್ನ ಒಪ್ಪಿಗೆಯಿಲ್ಲದೆ ವಿವಾಹ ಮಾಡಿಸಬಾರದೆ೦ದು ಹೇಳುತ್ತಾಳೆಯೇ? ಅಥವಾ ಸ್ವಯಂ ವಿವಾಹ ಪ್ರಸ್ತಾಪ ಮಾಡುವ ಹಕ್ಕು ಆಕೆಗೆ ಬೇಕೇ?

ಉತ್ತಮ ಪತ್ನಿಯಾಗಿರುವ ತನಕ ವೈವಾಹಿಕ ಜೀವನದಲ್ಲಿ ಗೌರವಾರ್ಹ ಒಡನಾಟ ದೊರೆಯಬೇಕಾಗಿದೆಯೇ? ಸಭ್ಯ ಒಡನಾಟ ದೊರೆಯದಿದ್ದಾಗ ಸಂಬಂಧ ಮುರಿಯುವ ಹಕ್ಕು ಬೇಕೆಂದು ಹೇಳುತ್ತಾಳೆಯೇ?

ಹೌದು, ಅವೆಲ್ಲವನ್ನೂ ಇಸ್ಲಾಮ್‌ ಆಕೆಗೆ ಅನುಮತಿಸಿದೆ. ಅದಲ್ಲದೇ ಹಕ್ಕುಗಳ ಸಂರಕ್ಷಣೆ ಪುರುಷನ ಕಡ್ಡಾಯ ಕರ್ತವ್ಯವೆಂದೂ ಇಸ್ಲಾಮ್‌ ಆದೇಶಿಸಿದೆ.

ಉದ್ಯೋಗ ಮಾಡುವ ಹಕ್ಕನ್ನು ಆಕೆ ಅಪೇಕ್ಷಿಸುತ್ತಿದ್ದಾಳೆಯೇ? ಅದನ್ನೂ ಇಸ್ಲಾಮ್‌ ಆಕೆಗೆ ನೀಡಿದೆ. |

ಹಾಗಲ್ಲ, ಮಾನ-ಮರ್ಯಾದೆಗಳನ್ನು ಬಿಟ್ಟು ಮಜಾ ಮಾಡಿ ಸಂತೋಷ ಪಡುವ ಸ್ವಾತಂತ್ರ್ಯವನ್ನು ಆಕೆ ಅಪೇಕ್ಷಿಸುತ್ತಾಳೆಯೇ? ಹಾಗಿದ್ದರೆ, ಇಸ್ಲಾಮ್‌ ಆಕೆಗೆ ನಿಷೇಧಿಸಿರುವ ಹಕ್ಕು ಕೇವಲ ಅದೊಂದೇ. ಅದೇ ವೇಳೆ ಪುರುಷನಿಗೂ ಇಸ್ಲಾಮ್‌ ಹಕ್ಕನ್ನು ನಿಷೇಧಿಸಿದೆ.

ಮಹಿಳೆ ಇಸ್ಲಾಮಿನಲ್ಲಿ 41

ಹಕ್ಕು ಸ್ಥಾಪನೆಗಾಗಿ ಪಾರ್ಲಿಮೆ೦ಟಿಗೇನೂ ಹೋಗಬೇಕಾಗಿಲ್ಲ. ಸಾಮಾಜಿಕ ಸಂಬಂಧ. ಮತ್ತು ವಿಶ್ವಾಸಾಚಾರಗಳನ್ನು ಸ್ವಲ್ಪ ಸಡಿಲು ಬಿಟ್ಟರಾಯಿತು. ತನ್ಮೂಲಕ ಎಲ್ಲಾ ಕಡಿವಾಣಗಳೂ ತುಂಡರಿಸೆಲ್ಪಡುವುವು. ಆಗ ಯಥೇಷ್ಟವಾಗಿ ಸುಖಪಡಬಹುದು. ಕೆಲವು ಡಾಂಬಿಕರು ಮತ್ತು ಮತಿಭ್ರಾಂತ ಸ್ತ್ರೀ ಚಳವಳಿಗಾರರು ಭ್ರಮಿಸಿರುವ೦ತೆ ಪಾರ್ಲಿಮೆಂಟಿನ ಪ್ರಾತಿನಿಧ್ಯವು. ಸ್ವಯಂ ಒಂದು ಧೈೇಯವಲ್ಲ. ಬದಲಾಗಿ ಅದು ಇನ್ನೊಂದು ಧೈೇಯದೆಡೆಗೊಯ್ಯುವ ಉಪಾಧಿಯಾಗಿದೆ. ಧ್ಯೇಯವು ಸಾಧಿಸಲ್ಪಟ್ಟಿರುವಾಗ ಮಾರ್ಗದ ಬಗ್ಗೆ ಹಠವೇಕೆ? ಅದು ಕೇವಲ ಪಥಭ್ರಷ್ಟ ಪಾಶ್ಚಾತ್ಮ ಲೋಕವನ್ನು ಕಣ್ಣುಮುಚ್ಚಿ ಅನುಕರಿಸುವ ಭ್ರಮೆಯಾಗಿದೆ. ಅವರ ಮತ್ತು ನಮ್ಮ ಪರಿಸ್ಥಿತಿಗಳು ಭಿನ್ನವಾಗಿವೆ. ಅವರ ಹಾಗೂ ನಮ್ಮ ದೃಷ್ಟಿಕೋನದಲ್ಲಿ ಜೀವನ ಮೌಲ್ಯಗಳು ಭಿನ್ನವಾಗಿವೆ. ಹಾಗಿರುತ್ತಾ ಅನುಕರಣೆಯೇಕೆ?

೫೫

ಆದರೆ ಕೆಲವರು ಪ್ರಶ್ನಿಸಬಹುದು. ಭಿನ್ನ ಪರಿಸ್ಥಿತಿ ಮತ್ತು ವಿಭಿನ್ನ ಜೀವನ ಮೌಲ್ಯಗಳೊಂದಿಗೆ ನಮ್ಮ ಸಂಬಂಧವೇನು? ಪೌರ್ವಾತ್ಮ ಲೋಕದಲ್ಲಿ ಸ್ತ್ರೀಯ ಸ್ಥಿತಿಯು ಅತ್ಯಂತ ಶೋಚನೀಯವಾಗಿದೆ. ಬಗ್ಗೆ ಮೌನ ವಹಿಸಲು ಸಾಧ್ಯವಿಲ್ಲ. ಪಾಶ್ಚಾತ್ಯ ಮಹಿಳೆಯು ಸ್ವತಂತ್ರಳಾಗಿ ಆಕೆಯ ಸ್ಥಾನಮಾನಗಳನ್ನು ಗಳಿಸಿಕೊಂಡಿದ್ದಾಳೆ. ಆದ್ದರಿಂದ ಪೌರ್ವಾತ್ಮ ಸ್ತ್ರೀಯೂ ಅದೇ ಮಾರ್ಗವನ್ನವಲಂಬಿಸಿ, ಕಸಿಯಲ್ಪಟ್ಟಿರುವ ತನ್ನ ಹಕ್ಕು ಗಳಿಗಾಗಿ ಹೋರಾಡಬೇಕು!

ಇದು ವಾಸ್ತವಿಕ ಸಲಹೆಯಾಗಿದೆ. ಬಗ್ಗೆ ಯಾವ ಸ೦ದೇಹವೂ ಇಲ್ಲ. ಮುಸ್ಲಿಮ್‌ ರಾಷ್ಟ್ರಗಳಲ್ಲಿ ಸ್ತ್ರೀಯು ಸಾಮಾನ್ಯವಾಗಿ ಅಜ್ಞಾನ, ವಿವಶತೆ ಮತ್ತು ಹಿಂದುಳಿದ ಸ್ಥಿತಿಯಲ್ಲಿದ್ದಾಳೆ. ಆಕೆ ಹೀನಳೂ ಬಹಿಷ್ಠೆಯೂ ಆಗಿ ಬಾಳುತ್ತಿದ್ದಾಳೆ. ಆಕೆಯ ಜೀವನವು ಮೃಗ ಸಮಾನ ವಾಗಿದೆ. ದೈಹಿಕ ಹಾಗೂ ಮಾನಸಿಕ ಮ್ಲೇಚ್ಛತೆಗಳಿಗೆ ಸಿಲುಕಿ, ದೌರ್ಭಾಗ್ಯದ ನಿತ್ಯ ನರಕದಲ್ಲಿ ಏನನ್ನೂ ಗಳಿಸಲಾಗದೆ ಸರ್ವಸ್ವವನ್ನೂ ಕಳೆದುಕೊಂಡು ದಿನ ದೂಡುತ್ತಿದ್ದಾಳೆ. ಕೇವಲ . ದೈಹಿಕ ಬೇಡಿಕೆಗಳಿಂದ ಉನ್ನತಿಗೇರಲಾಗದೆ ಆಕೆಯು ಪಶು ಸಮಾನ. ಜೀವನ ಸಾಗಿಸು ತ್ರಿದ್ದಾಳೆ. ಉನ್ನತಿ ಮತ್ತು ಬೆಳವಣಿಗೆಯೆಲ್ಲವೂ ಆಕೆಗೆ ಕನಸು ಮತ್ತು ಮರೀಚಿಕೆಯಾಗಿವೆ!

ಇದೊಂದು ವಾಸ್ತವಿಕತೆ. ಆದರೆ ಇದಕ್ಕೆ ಯಾರು ಹೊಣೆ? ಇಸ್ಲಾಮ್‌. ಅಥವಾ ಇಸ್ಲಾಮೂ, ಶಿಕ್ಷಣಗಳು ಹೊಣೆಯಾಗಿವೆಯೇ?

ಪೌರ್ವಾತ್ಮ ಮಹಿಳೆಯ ಶೋಚನೀಯಾವಸ್ಥೆಗೆ ಅಲ್ಲಿ ಅಸ್ತಿತ್ವದಲ್ಲಿರುವ ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಮಾನಸಿಕ ಪರಿಸ್ಥಿತಿಗಳೇ ಕಾರಣವಾಗಿದೆ. ನಾವು ಅವುಗಳನ್ನು ಕೂಲಂಕಷವಾಗಿ ಅವಲೋಕಿಸಿ ವಿಪತ್ತುಗಳ ಉಗಮವನ್ನು ತಿಳಿದುಕೊಳ್ಳಬೇಕಾಗಿದೆ. ಸುಧಾರಣೆಗೆ ಪ್ರಯತ್ನಿಸುವವರೆ೦ಬ ನೆಲೆಯಲ್ಲಿ ವಸ್ತುಸ್ಥಿತಿಯನ್ನು ತಿಳಿದಿರಬೇಕಾದುದು ನಮ್ಮ ಕರ್ತವ್ಯವಾಗಿದೆ.

42 ಮಹಿಳೆ ಇಸ್ಲಾಮಿನಲ್ಲಿ

ಸಾಮಾಜಿಕ ಅಸಮಾನತೆಯಿಂದಾಗಿ ಒಂದು ವಿಭಾಗವು ಅತಿ ಆಡಂಬರ ಮತ್ತು ಶ್ರೀಮಂತಿಕೆಯಲ್ಲಿ ಮುಳುಗಿರುವಾಗ ಇನ್ನೊಂದು ವಿಭಾಗವು ಒಂದು ತುತ್ತು ಅನ್ನಕ್ಕೆ ಗತಿಯಿಲ್ಲದೆ, ಮೈಮುಚ್ಚಲು ಬಟ್ಟೆಯಿಲ್ಲದೆ ಜೀವಚ್ಛವಗಳಾಗಿ ಜೀವಿಸುತ್ತಿರುತ್ತದೆ. ರಾಜಕೀಯ ಮರ್ದನದಿಂದಾಗಿ ಜನರು ಆಳುವ ಮತ್ತು ಆಳಲ್ಪಡುವ ಎರಡು ವಿಭಾಗ ಗಳಲ್ಲಿ ಹ೦ಚಿ ಹೋಗಿದ್ದಾರೆ. ಆಡಳಿತಗಾರರು ಹೊಣೆಗೇಡಿಗಳಾಗಿ, ಆದರೆ ಎಲ್ಲ ಹಕ್ಕುಗಳಿರುವ ವಿಶಿಷ್ಟ ವರ್ಗವಾಗಿ ಮಾರ್ಪಟ್ಟಿದ್ದಾರೆ. ಪ್ರಜೆಗಳ ಮೇಲೆ ಎಲ್ಲ ಭಾರ ಮತ್ತು ಕರ್ತವ್ಯಗಳನ್ನು ಬಲಾತ್ಕಾರವಾಗಿ ಹೇರಲಾಗುತ್ತದೆ. ಅದಕ್ಕೆ ಪ್ರತಿಯಾಗಿ ಅವರಿಗೆ ಏನನ್ನೂ ಕೊಡಲಾಗುವುದಿಲ್ಲ. ಹಿನ್ನೆಲೆಗಳಿಂದಾಗಿ ಬಹುವ೦ಶ ಪ್ರಜೆಗಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಮತ್ತು ಕರಾಳತೆ- ಇತ್ಕಾದಿಗಳೆಲ್ಲವೂ “ಸ್ತ್ರೀಯರು ಅನುಭವಿಸುತ್ತಿರುವ ಅಪಮಾನ ಮತ್ತು ಹಿಂಸೆಗಳಿಗೆ ಪ್ರೇರಕವಾಗಿವೆ. ಸ್ತ್ರೀಪುರುಷರ ಅನ್ಯೋನ್ಯತೆಗೆ ಪ್ರೀತ್ಕಾದರ ತುಂಬಿದ ವಾತಾವರಣದ ಅಗತ್ಯವಿದೆ. ಸಮಾಜವನ್ನು ಆಮೂಲಾಗ್ರವಾಗಿ ಪೀಡಿಸಿರುವ ಅಭಿಶಪ್ತ ಬಡತನ ಮತ್ತು ದಬ್ಬಾಳಿಕೆ ತಾಂಡವವಾಡುತ್ತಿರುವಾಗ ಅಂತಹ ವಾತಾವರಣ ಹೇಗೆ ತಾನೇ ನಿರ್ಮಾಣವಾದೀತು? ಇಲ್ಲಿ ದುರಂತಕ್ಕೆ ಕೇವಲ ಸ್ತ್ರೀ ಗುರಿಯಾಗಿರುವುದಲ್ಲ. ತೋರಿಕೆಗೆ ಪುರುಷನ ಸ್ಥಿತಿಯು ಸ್ವಲ್ಪಂಶ ಉತ್ತಮವೆಂದು ಕಂಡು ಬಂದರೂ ಆತನ ಸ್ಥಿತಿಯೂ ಭಿನ್ನವಲ್ಲ. ಪುರುಷನು ಸ್ತ್ರೀಯ ಮೇಲೆ ಕ್ರೌರ್ಯ ಮತ್ತು ದಬ್ಬಾಳಿಕೆ ಎಸಗುತ್ತಾನೆ. ಮೂಲಕ ಆತನು ತಾನು ಬಾಹ್ಮ ಲೋಕದಲ್ಲಿ ಕಳಕೊಂಡಿರುವ ಅಸ್ತಿತ್ವವನ್ನು ಮರಳಿ ಗಳಿಸಲು ಪ್ರಯತ್ನಿಸುತ್ತಿದ್ದಾನೆ. ಮೇಲಧಿಕಾರಿ, ಯಜಮಾನ ಅಥವಾ ಭೂಮಾಲಿಕ ಅಪಹರಿಸಿರುವ _ ತನ್ನ ಅಸ್ತಿತ್ವವನ್ನು ಪೊಲೀಸಧಿಕಾರಿ, ಫ್ಯಾಕ್ಟರಿ - ಮಾಲಿಕ, ನಾಯಕ ಕಸಿದುಕೊಂಡಿರುವ ಗೌರವವನ್ನು, ಅಪಮಾನ, ಬಡತನ ಮತ್ತು ದುಷ್ಪ ಪದ್ಧತಿಗಳು ಬೆದರಿಸುತ್ತಿರುವ ತನ್ನ ಭದ್ರತೆಯನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಾನೆ. ಆದರೆ ತನ್ನ ಪ್ರತಿಸ್ಪರ್ಧಿಗಳನ್ನು ಎದುರಿಸುವ ಅಥವಾ ಸೋಲಿಸುವ ಶಕ್ತಿ ಆತನಿಗಿಲ್ಲ. ಆದ್ದರಿಂದ ಅಲ್ಲಿ ಸಹಿಸಿಕೊಂಡಿರುವ ಕೋಪ ಮತ್ತು ಸೇಡಿನ ಗಂಟನ್ನು ತನ್ನ ಪತ್ನಿ ಮತ್ತು ಆಶ್ರಿತರ ಮುಂದೆ ಬಿಚ್ಚುತ್ತಾನೆ. ಸಮಾಜವನ್ನು ನಖಶಿಖಾ೦ತ ಪೀಡಿಸುತ್ತಿರುವ ಅಭಿಶಪ್ತ ಬಡತನ, ಪ್ರರುಷನ ಶ್ರಮವನ್ನು ಸ೦ಪೂರ್ಣವಾಗಿ ಕಬಳಿಸಿ ಆತನ ಮಾನಸಿಕ ಮತ್ತು ವೈಚಾರಿಕ ಶಕ್ತಿಯನ್ನು ನಾಶಪಡಿಸುತ್ತಿರುವ ಬಡತನ, ಇತರರೊಂದಿಗೆ ಸಭ್ಯತೆಯಿಂದ ವ್ಯವಹರಿಸಲು ಮತ್ತು ಪ್ರೀತ್ಕಾದರಗಳಿ೦ದ ವರ್ತಿಸಲು ಅಗತ್ಯವಿರುವ ವಿಶಾಲ ಮನೋಭಾವವನ್ನು ಹಾಳುಗೆಡಹುವ ಕ್ರೂರ ಬಡತನ; ಸಹನೆ, ತಾಳ್ಮೆ ಮತ್ತು ತಪ್ಪಗಳನ್ನು ಮನ್ನಿಸುವ ಆತನ ಶಕ್ತಿಯನ್ನು ದುರ್ಬಲಗೊಳಿಸುವ ಭೀಕರ ಬಡತನ!... ಬಡತನವೇ ಸ್ತ್ರೀಯನ್ನು ಪುರುಷನ ಗುಲಾಮಳನ್ನಾಗಿ ಮಾಡುತ್ತದೆ. ಅರಕ್ಷಿತ ಜೀವನಕ್ಕಿಂತ ಉತ್ತಮವಲ್ಲವೇ ಎ೦ಬ ಭಾವನೆಯಿಂದ ಆತನ ಎಲ್ಲ ರೀತಿಯ ಅಕ್ರಮ

ಮಹಿಳೆ ಇಸ್ಲಾಮಿನಲ್ಲಿ 43

ಮರ್ದನಗಳನ್ನು ಸಹಿಸಲು ಆಕೆ ಸಿದ್ಧಳಾಗುತ್ತಾಳೆ. ಧರ್ಮವು ಆಕೆಗೆ ನೀಡಿರುವ ಹಕ್ಕುಗಳನ್ನು ಉಪಯೋಗಿಸುವುದಕ್ಕೆ ಆತನು ತಡೆಯೊಡ್ಡುತ್ತಾನೆ. ಆಕೆಯು ತನ್ನ ಹಕ್ಕುಗಳನ್ನು ಉಪಯೋಗಿಸಿದ್ದರೆ ಪುರುಷನನ್ನು ಹದ್ದುಬಸ್ತಿನಲ್ಲಿಡಲು ಖಂಡಿತ ಸಾಧ್ಯವಾಗುತ್ತಿತ್ತು. ಆದರೆ ತಲಾಕ್‌ ನೀಡಬಹುದೆ೦ಬ ಭೀತಿಯಿಂದ ಆಕೆ ದಿನದೂಡುತ್ತಾಳೆ. ಹೀಗಿರುತ್ತಾ, ಆಕೆಗೆ ಏನು ಸಾಧ್ಯವಾದೀತು? ಮಕ್ಕಳನ್ನು ಅವರ ತಂದೆ ಸಾಕ ಬಹುದು. ಆದರೆ ಆಕೆ? ಆಕೆಯನ್ನು ಯಾರು ರಕ್ಷಿಸಬೇಕು? ಬಡತನದ ನಿತ್ಯ ನರಕದಲ್ಲಿ ಬಾಳುತ್ತಿರುವ ಆಕೆಯ ಸಂಬಂಧಿಕರೇ? ಜೀವನದ ಹೊಣೆಯನ್ನು ಹೊರಲಾಗದೆ ಉಸಿರುಗಟ್ಟಿರುವಾಗ ಅವರು ಆಕೆಯ ವಿವಾಹ ವಿಚ್ಛೇದನವನ್ನು ಸ್ವಾಗತಿಸಲಾರರು. ಅದರಿಂದ ತಮ್ಮ ಹೊಣೆ ಹೆಚ್ಚಾದೀತೆ೦ಬ ಭೀತಿಯಿಂದ ಶಾಪಗ್ರಸ್ತ ನಿ೦ದನೆಯನ್ನು ಸಹಿಸುವಂತೆ ಅವರು ಆಕೆಗೆ ಉಪದೇಶಿಸಬಹುದು.

ಎರಡನೆಯದಾಗಿ, ಹಿಂದುಳಿದ ಸಮಾಜಗಳಲ್ಲಿ ಎಲ್ಲ ಮಾನವೀಯ ಮೌಲ್ಯಗಳಿಗೂ ಬೆಲೆ ಕುಸಿತ ಉಂಟಾಗಿದೆ. ಪೌರ್ವಾತ್ಮ ಲೋಕವೂ ಹಿಂದುಳಿದ ಸ್ಥಿತಿಯಲ್ಲಿದೆ. ಅದರ ಧ್ರೇಯ ಮತ್ತು ಆತ್ಮವು ಕಳೆಗುಂದಿ ಇಂದು ಅದು ಕಾರ್ಗತ್ತಲೆಯಲ್ಲಿ ಮುಳುಗಿದೆ. ಎಲ್ಲಾ ರೂಪ ಮತ್ತು ಭಾವಗಳಲ್ಲಿ ಕೇವಲ ಶಕ್ತಿಗೆ ಶ್ರೇಷ್ಠತೆ ಮತ್ತು ಗೌರವವಿದೆ. ದೌರ್ಬಲ್ಯ, ನೀಚತೆ ಮತ್ತು ಅತಿಕ್ರಮಗಳು ಸಮರ್ಥಿಸಲ್ಪಡುತ್ತಿವೆ!

ಪುರುಷನು ಸ್ತ್ರೀಗಿ೦ತ ಪ್ರಬಲನಾಗಿದ್ದರೆ ಆತನು ಆಕೆಯನ್ನು ನಿಂದಿಸುತ್ತಾನೆ. ಮಾನವನನ್ನು ಮಾನವನೆಂಬ ನೆಲೆಯಲ್ಲಿ ಗೌರವಿಸುವ ಮಾನವೀಯ ಮಟ್ಟದಿಂದ ಆತ ಕೆಳಗಿಳಿಯುತ್ತಾನೆ. ಮಟ್ಟಕ್ಕೇರಲು ಆತನಿಗೆ ಸಾಧ್ಯವಾಗುವುದಿಲ್ಲ. ಆಕೆ ಒಡತಿಯಾಗಿದ್ದರೆ ಪರಿಸ್ಥಿತಿ ಬದಲಾಗಬಹುದು. ಆಗ ಆಕೆಯಲ್ಲಿ ಬಲ ಮತ್ತು ಅಧಿಕಾರವಿದೆಯೆಂಬ ದೃಷ್ಟಿಯಿಂದ ಆಕೆಯನ್ನು ಗೌರವಿಸುತ್ತಾನೆ.

ಹಿಂದುಳಿದ ಸಮಾಜದಲ್ಲಿ ಮಾನವರು ವೈಚಾರಿಕವಾಗಿ ಪಾಶವೀಮಟ್ಟಕ್ಕೆ ಅಥವಾ ಅದರ ಸಮೂಪಕ್ಕೆ ಇಳಿಯುತ್ತಾರೆ. ಮುಖ್ಯವಾಗಿ, ಲೈಂಗಿಕ ಭಾವನೆಗಳು ಮಾನವರ ಮೇಲೆ ಪ್ರಭಾವ ಬೀರುತ್ತವೆ.. ಜೀವನವು ಕೇವಲ ವಲಯದಲ್ಲಿ ಹುದುಗಿದೆಯೆಂದು ಅವರು ಭಾವಿಸುತ್ತಾರೆ. ತನ್ನಿಮಿತ್ತ ಪುರುಷನ ಮಟ್ಟಿಗೆ ಸ್ತ್ರೀಯು ಕೇವಲ ಭೋಗ ವಸ್ತುವಾಗಿ ಮಾರ್ಪಡುತ್ತಾಳೆ.* ಮಾನವೀಯ ಆಧಾರದಲ್ಲಿ ಗೌರವಾರ್ಹಗೊಳಿಸುವ ಮಾನಸಿಕ, ವೈಚಾರಿಕ ಮತ್ತು ನೈತಿಕ ಶ್ರೇಷ್ಠತೆಯನ್ನು ಆಕೆಗೆ ನೀಡುವುದಿಲ್ಲ.

ಹಿ೦ದುಳಿದ ಸಮಾಜಗಳಲ್ಲಿ ಶಿಕ್ಷಣ ಶೀಲಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಅಜ್ಞಾನ ಮತ್ತು ಬಡತನದ ವಾಶಾಫರಣದಲ್ಲಿ ಅದೊಂದು ದುಂದುವೆಚ್ಚವೆನಿಸಬಹುದು. ಆದರೆ ನೈತಿಕ ಶಿಕ್ಷಣವೇ ಮಾನವನನ್ನು ಮಾನವನಾಗಿ ಮಾಡುವ ಏಕೈಕ ಉಪಾಧಿಯಾಗಿದೆ. 8. ಸ್ತ್ರೀಯ ದೃಷ್ಟಿಯಲ್ಲಿಯೂ ಪುರುಷನ ಸ್ಥಿತಿ ಹಾಗೆಯೇ ಇರಬಹುದು. ಆದರ ಕಲನ ಮತ್ತು

ಉದ್ಯೋಗ ಮಾಡುವವ ಮತ್ತು ಕುಟುಂಬ ಪಾಲಕನೆಂಬ ನೆಲೆಯಲ್ಲಿ ಲೈಂಗಿಕತೆಗಿಂತ ಮಿಗಿಲಾದ ಭಾವನೆಯೂ ಆಕೆಯಲ್ಲಿರುವುದು.

44 _ ಮಹಿಳೆ ಇಸ್ಲಾಮಿನಲ್ಲಿ

ಆತನನ್ನು ಪಾಶವೀ ಮಟ್ಟದಿಂದ ಮೇಲೆತ್ತುವ ಅನ್ಕ ಮಾರ್ಗವಿಲ್ಲ. ಶಿಕ್ಷಣ ಸಂಪ್ರದಾಯವಿಲ್ಲ ದಿರುವಾಗ ಅಥವಾ ಅದು ಕೆಟ್ಟ ರೀತಿಯಲ್ಲಿರುವಾಗ ಜನರು ಜೀವನವನ್ನು ಭಾವನೆಗಳ ಮಾಪಕದಿಂದ ಅಳೆಯುವ ಹಾಗೂ ಬಲವನ್ನು ಪೂಜಿಸುವ ಪಾಶವೀ ಮಟ್ಟದಿಂದ ಮೇಲೇರಲಾರರು.

ಇ೦ತಹ ವಾತಾವರಣದಲ್ಲಿ ಸ್ತ್ರೀಯು ತನಗರಿವಿಲ್ಲದೆಯೇ, ತನ್ನ ಬಗೆಗಿನ ಪುರುಷನ ಭಾವನೆಗಳನ್ನು ಕೆಡಿಸಲು ಹಾಗೂ ಆತನಿಗೆ ನಿರಂಕುಶತೆ ಮತ್ತು ಸರ್ವಾಧಿಕಾರದ ಸ್ಥಾನ ನೀಡಲು ಪ್ರಯತ್ನಿಸುತ್ತಾಳೆ. ತನ್ನ ಮಗುವನ್ನು ಅತಿಯಾಗಿ ಮುದ್ದಾಡುವ ತಾಯಿಯು ಮಗುವಿನ ಮೇಲೆ ಯಾವ ನಿಯಂತ್ರಣವನ್ನೂ ಹೇರುವುದಿಲ್ಲ. ತಪ್ಪಾಗಿರಲಿ ಸರಿಯಾಗಿರಲಿ ತನ್ನ ಮಾತುಗಳು ಪಾಲಿಸಲ್ಪಡುತ್ತಿವೆಯೆ೦ಬ ಭಾವನೆಯು ಮಗುವಿನಲ್ಲಿ ಬೆಳೆದು ಬರುವುದು. ಆತನ ಭಾವನೆ ಮತ್ತು ಅಭಿಲಾಷೆಗಳಿಗೆ ಕಡಿವಾಣ ಹಾಕಲು ಆಕೆ ಪ್ರಯತ್ನಿಸುವುದಿಲ್ಲ. ಹೀಗೆ ಬೆಳೆಯುವ ಭಾವನೆ ಮತ್ತು ಅಭಿಲಾಷೆಗಳ ಪ್ರೇರಣೆಯಿಂದಾಗಿಯೇ ಆತನು ತನ್ನ ಆಜ್ಞೆಗಳನ್ನು ಅನ್ಯರ ಮೇಲೆ ಬಲಾತ್ಕಾರವಾಗಿ ಹೇರಲು ಪ್ರಯತ್ನಿಸುತ್ತಾನೆ. ಸಂಕಷ್ಟ, ಬಡತನ ಮತ್ತು ದಬ್ಬಾಳಿಕೆಗಳು ತಾಂಡವವಾಡುತ್ತಿರುವ ಬಾಹ್ಮ ಲೋಕವು ಆತನ ಸರಿ ಯಾ ತಪ್ಪು ವರ್ತನೆಗಳನ್ನು ಅಂಗೀಕರಿಸದಿರುವಾಗ, ಸಕಲ ದುರ್ಗುಣಗಳನ್ನೂ ತನ್ನ ಆಶ್ರಯದಲ್ಲಿರುವ ಸ್ತ್ರೀಯರ, ಪುರುಷರ ಮತ್ತು ಮಕ್ಕಳ ಮೇಲೆ ಹೊರಿಸುತ್ತಾನೆ!

Xkkk

ಇವು ಪೌರ್ವಾತ್ಮ ಸಮಾಜವನ್ನು ಪೀಡಿಸಿರುವ ದೋಷಗಳ ಸ್ಪಷ್ಟ ಕಾರಣಗಳಾಗಿವೆ. ಕಾರಣಗಳೇ ಆಕೆಯನ್ನು -ಶೋಚನೀಯ ಸ್ಥಿತಿಗೆ ದೂಡಿ, ಆಕೆಯನ್ನು ಒಂದು ಸಮಸ್ಯೆಯನ್ನಾಗಿ ಮಾಡಿದೆ. ಪೈಕಿ ಯಾವುದು ಇಸ್ಲಾಮಿನಿಂದಾಗಿ ಹುಟ್ಟಿ ಕೊಂಡಿದೆ? ಇಸ್ಲಾಮೊ ನೀತಿಗೆ ಸರಿಹೊಂದುವ ಕಾರಣ ಯಾವುದು?

ಬಡತನವೇ?

ಉಮರ್‌ ಬಿನ್‌ ಅಬ್ದುಲ್‌ ಅಮೀರು್‌ರ ಕಾಲದಲ್ಲಿ ರುಕಾತ್‌ ದಾನ ಸ್ಟೀಕರಿಸ ಲರ್ಹವಾದ ಒಬ್ಬನೇ ಒಬ್ಬ ಬಡವನಿಲ್ಲದಂತಹ ಸ್ಥಿತಿಗೆ ಸಮಾಜವನ್ನು ಸಮೃದ್ಧಗೊಳಿಸಿದ್ದು ಇಸ್ಲಾಮಲ್ಲವೇ? ಅದು ವಾಸ್ತವಿಕ ಲೋಕದಲ್ಲಿ ಸಾಕ್ಷಾತ್ಕಾರಗೊಂಡ ಇಸ್ಲಾಮ್‌ ಆಗಿದೆ. ಇಂದು ಅದನ್ನು ಕಾರ್ಯಗತಗೊಳಿಸಬೇಕೆಂದು ನಾವು ವಿನಂತಿಸುತ್ತಿದ್ದೇವೆ. ಅದು ಸಮಾಜದಲ್ಲಿ ಸಂಪತ್ತು ನ್ಯಾಯೋಚಿತವಾಗಿ ವಿತರಣೆಯಾಗುವಂತಹ ಪದ್ಧತಿಯಾಗಿದೆ. "ನಿಮ್ಮಲ್ಲಿರುವ ಧನಿಕರಲ್ಲಿಯೇ ಸುತ್ತಾಡದಿರಲಿಕ್ಕಾಗಿ!" ಅದು ಜನರ ಮಧ್ಯೆ ಇರುವ ಆರ್ಥಿಕ ಅಂತರವನ್ನು ಕಡಿಮೆಗೊಳಿಸುತ್ತದೆ, ಆಡಂಬರವನ್ನು ನಿಷೇಧಿಸುತ್ತದೆ. ಬಡತನವನ್ನು ದ್ವೇಷಿಸುತ್ತದೆ 'ಹಾಗೂ ಅದರ ನಿವಾರಣೆಗಾಗಿ ಪ್ರಯತ್ನಿಸುತ್ತದೆ.

ಪೌರ್ವಾತ್ಮ ಮಹಿಳೆಯ ಸಮಸ್ಯೆಗೆ ಬಡತನವೇ ಮೂಲ ಕಾರಣವಾಗಿದೆ. ' ಅದು ನಿವಾರಣೆಯಾದರೆ ಎಲ್ಲ ಸ೦ಕಷ್ಟಗಳೂ ಪರಿಹಾರವಾಗಿ ಸ್ತ್ರೀಗೆ ಆಕೆಯ ಗೌರವವು ಮರಳಿ

ಮಹಿಳೆ. ಇಸ್ಲಾಮಿನಲ್ಲಿ 45

ದೊರೆಯುವುದು. ಜೀವನ ನಿರ್ವಹಣೆಗಾಗಿ ದುಡಿಯುವ ಅನುಮತಿಯಿದ್ದರೂ ಅದು ಆಕೆಗೆ ಅನಿವಾರ್ಯವಾಗಲಾರದು. ಬದಲಾಗಿ ಸಮಾಜದ ಆರ್ಥಿಕ ಮಟ್ಟವು ಉತ್ತಮಗೊಂಡು -ವಾರಸು ಸೊತ್ತಿನಲ್ಲಿರುವ ಆಕೆಯ. ಹಕ್ಕು. ಅದು ಕೇವಲ ಆಕೆಯ ಸ್ವಂತ ಖರ್ಚಿಗಾಗಿ ಇರುವುದು. ಅದರಲ್ಲಿ ಅನ್ಯರಿಗೆ ಪಾಲಿಲ್ಲ ಅದು ಪುರುಷನ ಗೌರವ ಸಂಪಾದನೆಗೆ ಪರ್ಯಾಪ್ತವಾಗಿರುವುದು. ಬಡತನದ ಭೀತಿಯಿಂದ ಆಕೆ ಕೈ ಬಿಟ್ಟಿರುವ ಹಕ್ಕುಗಳನ್ನು ಮರಳಿ ಗಳಿಸಲು ಅದು: ಆಕೆಗೆ ಪ್ರೇರಣೆ ನೀಡುವುದು.

ಮಾನವನನ್ನು ಮರ್ದಿಸಿ ದ್ವೇಷದ ವಿಷಸರ್ಹವನ್ನಾಗಿಸುವ ರಾಜಕೀಯ ದಮನ ಇಸ್ಲಾಮಿನಲ್ಲಿದೆಯೇ?

ಇಸ್ಲಾಮ್‌, ಅನ್ಯಾಯ ಮರ್ದನಗಳ ವಿರುದ್ಧ ಭತ ಕ್ರಾಂತಿಕಾರೀ ಆ೦ದೋಲನವಾಗಿರಲಿಲ್ಲವೇ? ಅದು ಅನ್ಯಾಯವನ್ನು ತಡೆಯುವ ಆಹ್ವಾನವಾಗಿರಲಿಲ್ಲವೇ? ಅದು ಮಾನವರನ್ನು ಮಾದರಿ ಆಡಳಿತಗಾರ ಮತ್ತು ಮಾದರಿ ಪ್ರಜೆಗಳನ್ನಾಗಿಸಿದಂತಹ ಪದ್ಧತಿಯಾಗಿರಲಿಲ್ಲವೇ? ಅದು ಯಾವ ಉನ್ನತ ಮಟ್ಟಕ್ಕೆ ತಲಪಿದ್ದಿತೆ೦ದು ನೋಡಿರಿ. ಒಮ್ಮೆ ಉಮರ್‌ರು(ರ) ಜನರೊಡನೆ ಹೀಗೆಂದರು: "ಗಮನಿಸಿರಿ ಮತ್ತು ಪಾಲಿಸಿರಿ." ಆಗ ಸಭಿಕರಲ್ಲೋರ್ವರು ಎದ್ದು ನಿಂತು ಹೇಳಿದರು, "ನೀವು ಧರಿಸಿರುವ ಉಡುಪು ನಿಮಗೆ ಎಲ್ಲಿಂದ ಲಭಿಸಿತೆಂದು ಹೇಳದೆ ನಾವು ನಿಮ್ಮನ್ನು (ಮಾತನ್ನು) ಆಲಿಸಲಾರೆವು, ಅನುಸರಿಸಲಾರೆವು." ಉಮರ್‌(ರ) ಕೋಪಗೊಳ್ಳಲಿಲ್ಲ. ಬದಲಾಗಿ ಪ್ರಶ್ನಿಸಿದವರ ಹಕ್ಕನ್ನು ಮನ್ನಿಸಿ ಅವರಿಗೆ ಮನವರಿಕೆಯಾಗುವ ರೀತಿಯಲ್ಲಿ ವಿಷಯವನ್ನು ಸ್ಪಷ್ಟಪಡಿಸಿದರು. ತರುವಾಯ ಪ್ರಶ್ನಾರ್ಥಿಯು ಹೇಳಿದರು: "ಈಗ ನೀವು ಆಜ್ಞಾಪಿಸಿರಿ. ಇನ್ನು ನಾವು . ಆಲಿಸುತ್ತೇವೆ ಮತ್ತು ಅನುಸರಿಸುತ್ತೇವೆ.” '

ಇದುವೇ ಇಸ್ಲಾಮ್‌. ಅದನ್ನೊಮ್ಮೆ ಲೋಕವು ನೋಡಿದೆ. ಅದನ್ನೇ ನಾವು ಇನ್ನೊಮ್ಮೆ ಅಪೇಕ್ಷಿಸುತ್ತೇವೆ. ಅಂದು ಆಡಳಿತಗಾರರು ಪ್ರಜೆಗಳನ್ನು ದಮನಿಸಲಾರರು. ಅವರ ಕೈ-ಬಾಯಿಗಳನ್ನು ಬಿಗಿದು ಕಟ್ಟಲಾರರು. ಸತ್ಯವನ್ನು ಬಹಿರಂಗ ಪಡಿಸಲು ಅವರು ಕಿಂಚಿತ್‌ ಹಿ೦ಜರಿಯಲಾರರು. ಆಡಳಿತಗಾರನ ನಡವಳಿಕೆಯು ಪ್ರಜೆಗಳಿಗೆ ಮಾದರಿ ಯೋಗ್ಯವಾಗಿರುವುದು. ಅವರು ಪರಸ್ಪರ ನಡವಳಿಕೆಗಳಲ್ಲಿ ಅದನ್ನು ಅನುಕರಿಸುವರು. ಮಾಲಿಕನು ಕಾರ್ಮಿಕನೊಂದಿಗೂ- ನಾಯಕನು ಆಶ್ರಿತನೊಂದಿಗೂ ಪತಿಯು ಪತ್ನಿ- ಮಕ್ಕಳೊ೦ದಿಗೂ ಹಾಗೆಯೇ ವರ್ತಿಸುವರು. ಒಳಿತು, ನ್ಯಾಯ ಮತ್ತು ಸಹೋದರತೆಯು ಅದರಲ್ಲಿ ಕಂಗೊಳಿಸುವುದು!

ನುಚ್ಚುನೂರಾದ ಮಾನವೀಯ ಮೌಲ್ಯ ಗಳಿಗೆ ಇಸ್ಲಾಮಿನೊಂದಿಗೆ ಸಂಬಂಧವಿದೆಯೇ? ಜನರನ್ನು ಅಧಃಪತನದಿ೦ದ ಮೇಲೆತ್ತಲಿಕ್ಕಾಗಿ , ಇಸ್ಲಾಮ್‌ ಬ೦ತಲ್ಲವೇ? ಅವರನ್ನು ಮಾನವರಾಗಿ ಮಾಡುವುದೇ ಅದರ ಧೈ್ಯೇಯವಲ್ಲವೇ? "ನಿಮ್ಮಲ್ಲಿ ಅತ್ಯಧಿಕ ಭಯಭಕ್ತಿ ಉಳ್ಳವನೇ ಅತ್ಯಂತ ಗೌರವಾರ್ಹನು." ಬಲಾಢ್ಯನಲ್ಲ, ಶ್ರೀಮಂತನಲ್ಲ, ಅಧಿಕಾರಾಧಿಪತ್ಯಗಳ

46 ಮಹಿಳೆ ಇಸ್ಲಾಮಿನಲ್ಲಿ

ಒಡೆಯನೂ ಅಲ್ಲ. ಮಾನವೀಯ ಮೌಲ್ಯಗಳು ಅಷ್ಟೊಂದು ಉನ್ನತಗೊ೦ಡರೆ ದೌರ್ಬಲ್ಯ ಮತ್ತು ಅಸಾಮರ್ಥ್ಯಗಳಿಗಾಗಿ ಸ್ತ್ರೀಯರು ನಿಂದಿಸಲ್ಪಡಲಾರರು. ಸ್ತ್ರೀಯೊಂದಿಗಿನ ಸಭ್ಯ ನಡವಳಿಕೆಯೇ ಮಾನವೀಯತೆಯ ಮಾಪಕವಾಗುವುದು. ಅದು ಪ್ರವಾದಿವರ್ಯರು(ಸ) ಸ್ಪಷ್ಟವಾಗಿ ನಿರ್ಣಯಿಸಿರುವ ಮಾಪಕವಾಗಿದೆ. "ತನ್ನ ಮನೆ ಮಂದಿಯೊಂದಿಗೆ ಉತ್ತಮವಾಗಿ ವರ್ಶಿಸುವವನೇ ನಿಮ್ಮಲ್ಲಿ ಅತ್ಕುತ್ತಮನು.” ಮನೆಮಂದಿಯೆಂದರೆ ಅರಬೀ ಶೈಲಿಯಲ್ಲಿ ಪತ್ನಿಯೆ೦ದರ್ಥ. ಮಾನಸಿಕ ಸತ್ಯವನ್ನು ಪ್ರವಾದಿವರ್ಯರು(ಸ) ಎಷ್ಟೊಂದು ಆಳವಾಗಿ ಅರಿತಿದ್ದರೆಂಬುದನ್ನು ಪ್ರಸ್ತುತ ವಚನಗಳು ಸ್ಪಷ್ಟಪಡಿಸುತ್ತವೆ. ತಮ್ಮ ಕೈ ಕೆಳಗಿರುವವ ರೊಡನೆ ಕೆಟ್ಟ ರೀತಿಯಿಂದ ವರ್ತಿಸಲು ಮನೋರೋಗಿಗಳಿಗೆ ಮಾತ್ರ .ಸಾಧ್ಯ. ಪೈಶಾಚಿಕ ಭಾವನೆಗಳ ಮಟ್ಟಕ್ಕಿಳಿಯಲು ಇಸ್ಲಾಮ್‌ ಪ್ರೇರೇಪಿಸುತ್ತದೆಯೇ? ಮಾನವನು ಭಾವನೆಗಳನ್ನು ಸಂಸ್ಕರಿಸದೆ ಜೀವಿಸಲು ಇಸ್ಲಾಮ್‌ ಯಾವ ಕಾಲದಲ್ಲಿ ಅನುಮತಿಸಿದೆ? ಸಹಜ ಕಾಮನೆ ಮತ್ತು ನೈಸರ್ಗಿಕ ಭಾವನೆಗಳನ್ನು ಅದು ಅಂಗೀಕರಿಸುತ್ತದೆ ನ್ನುವುದು ನಿಜ. ಅದರೆ ಅವುಗಳ ಹಿಡಿತಕ್ಕೆ ಸಿಲುಕಿ ಪಶುಸಮಾನನಾಗಿ ವರ್ತಿಸಲು ಅದೆಂದೂ ಅನುಮತಿಸುವುದಿಲ್ಲ. ಅದು ಸ್ತ್ರೀ-ಪುರುಷನೊಡನೆ ತಂತಮ್ಮ ಸಂಗಾತಿಯ ಲೈಂಗಿಕ ಭಾವನೆ ಗಳನ್ನು ಪೂರೈಸಬೇಕೆ೦ದು ಹೇಳಿರುವುದಕ್ಕೆ ಪಶು ಸಮಾನವಾಗಬೇಕೆಂದರ್ಥವಲ್ಲ. ತನ್ಮೂಲಕ ಜೀವನದ ಬೇಡಿಕೆಗಳ ಬಂಧನದಿಂದ ಮಾನವರನ್ನು ವಿಮೋಚನೆಗೊಳಿಸಬೇಕೆ೦ದಷ್ಟೇ ಅದು ಬಯಸುತ್ತದೆ. ಅಂತಹ ಬೇಡಿಕೆಗಳು ಅವರ ಮನಸ್ಸು ಮತ್ತು ವಿಚಾರವನ್ನು ತೊಂದರೆ ಪಡಿಸುವಂತೆ ಆಗಬಾರದು. ಆತನ ಸಾಮರ್ಥ್ಯಗಳನ್ನು ಉನ್ನತ ರಚನಾತ್ಮಕ ಮಟ್ಟಕ್ಕೆ ತಿರುಗಿಸಲು ಅದು ತಡೆಯಾಗಬಾರದು. ಅದು ಕೆಲಸ, ಕಲೆ, ಆರಾಧನೆಯೇ ಮೊದಲಾದ ಯಾವ ರಂಗವಾಗಿದ್ದರೂ ಸರಿಯೇ. ಹಾಗೆಯೇ ಅದು ಕಾನೂನುಬದ್ಧ ಮಾರ್ಗಗಳಿಗೆ ಅಡ್ಡಿಯು೦ಟಾದಾಗ ಅಪರಾಧ ಕೃತ್ಯಗಳಿಗೆ ಅವರನ್ನು ದೂಡದಿರಲಿಕ್ಕಾಗಿದೆ.: ಆದರೆ ಇಸ್ಲಾಮ್‌ ಅವರನ್ನು, ಉನ್ನತ ಮಾನವೀಯ ಮೌಲ್ಯಗಳನ್ನು ಕಡೆಗಣಿಸಿ ಸುಖಭೋಗಗಳಲ್ಲಿ ಮೈಮರೆತು ಭಾವನಾಲೋಕದಲ್ಲಿ ವಿಹರಿಸುವಂತೆ ಹಗ್ಗ ಬಿಚ್ಚಿ ಬಿಡುವುದಿಲ್ಲ. ಅಲ್ಲಿ ಪುರುಷನ ಕೆಲಸವು ದೇವಮಾರ್ಗದ ಹೋರಾಟವಾಗಿದೆ, ನಿತ್ಯ ಹೋರಾಟ. ಕುಟು೦ಬವು ಸ್ತ್ರೀಯ ಹೋರಾಟರಂಗ. ಶಿಶುಪಾಲನೆ ಮತ್ತು ಗೃಹಾಡಳಿತ ಆಕೆಯ ಕೆಲಸ. ಇದು ಅಲ್ಲಿ ಉಭಯತ್ರರ ಧ್ಯೇಯವು ಕೇವಲ ಕೆಲವು ಜೀವನಾವಶ್ಯಕತೆಗಳು ಮತ್ತು ದೇಹೇಚ್ಛೆಗಳ ವ್ಯಾಪ್ತಿಗೆ: ಸೀಮಿತವಾಗಬಾರದೆ೦ದಾಗಿದೆ. ಇಸ್ಲಾವೂ ಶಿಕ್ಷಣ ಪದ್ಧತಿಯು ಮುಸ್ಲಿಮ್‌ ಸಮುದಾಯದ ಅಧಃಪತನಕ್ಕೆ ಕಾರಣವೇ? ಖಂಡಿತ ಅಲ್ಲ. ಇಸ್ಲಾಮಿನ ಕುರಿತು ಹಾಗೆ ಆರೋಪಿಸಲು ಯಾರಿಗೂ ಧೈರ್ಯ ಬಾರದು. ಕುರ್‌ಆನ್‌ ಮತ್ತು ಪ್ರವಾದಿ ವಚನಗಳಲ್ಲಿ ಚಾರಿತ್ರ್ಯ ಸಂಸ್ಕರಣೆಯ ಆಹ್ವಾನವೇ ತುಂಬಿವೆ. ಅವು ಮಾನಸಿಕ ತರಬೇತಿ, ಆತ್ಮ ನಿಯಂತ್ರಣ ಪಾಲನೆ, ಅನ್ಕರೊಡನೆ ನ್ಯಾಯ ಗೌರವದ ವರ್ತನೆ ಮತ್ತು ತನ್ನ೦ತೆ ಪರರನ್ನು ಪ್ರೀತಿಸುವ ನಿಯಮ ನಿರ್ದೇಶಗಳನ್ನು ಒಳಗೊಂಡಿದೆ.

ಮಹಿಳೆ ಇಸ್ಲಾಮಿನಲ್ಲಿ 47

ಆಧುನಿಕ ಬರಹಗಾರರು ಆಚಾರ ಸಂಪ್ರದಾಯಗಳನ್ನು ಟೀಕಿಸುತ್ತಾರೆ. ಸ್ತ್ರೀಯರ ಪ್ರಗತಿಯನ್ನು ಅವು ತಡೆದು ಪೈಶಾಚಿಕತೆ, ನಿಷ್ಕ್ರಿಯತೆ, ಸಂಕುಚಿತತೆ ಮತ್ತು ಅಜ್ಞಾನದ ಗೋಡೆಗಳೊಳಗೆ ಆಕೆಯನ್ನು ಬಂಧಿಸಿಡುವುದೆಂ ದೂ ಅವರು ಆರೋಪಿಸುತ್ತಾರೆ. ಆದರೆ ವಾಸ್ತವಿಕತೆಯೇನು?

ಆಚಾರಗಳು? ವಿಜ್ಞಾನವನ್ನು ತಡೆಯುವುದಿಲ್ಲ. ಉದ್ಯೋಗಕ್ಕೆ ಅಡ್ಡಿಯಾಗುವುದಿಲ್ಲ. ಸಮಾಜದಲ್ಲಿ ವ್ಯವಹರಿಸುವುದನ್ನು ವಿರೋಧಿಸುವುದಿಲ್ಲ. ಹೀಗಿರುತ್ತಾ ಅವುಗಳಿಂದ ತೊಡಕೇನಿದೆ?

ಇಸ್ಲಾಮ್‌ ಕೇವಲ ನೈತಿಕ ಕೆಡುಕುಗಳನ್ನು ನಗ್ಗತಾ ಪ್ರದರ್ಶನ ಮತ್ತು ಸ್ತ್ರೀಯು ಅನಗತ್ಯವಾಗಿ ಬೀದಿಗಿಳಿಯುವುದನ್ನು ತಡೆಯುತ್ತದೆ. ಅವು ಸ್ತ್ರೀಯರ ಪ್ರಗತಿ ಮತ್ತು ಗೌರವ ಸಂಪಾದನೆಗಿರುವ ಏಕೈಕ 'ಮಾರ್ಗವೇ?

ವಿನಾಶದ ವಿಷಬೀಜದೊಂದಿಗೆ ಬೀದಿಗಿಳಿದು ತನ್ನ ದೇಹವನ್ನು ಓರ್ವ ತರುಣನ ಮುಂದೆ ಪ್ರದರ್ಶಿಸುವುದು. ಆತ ಕೇವಲ ದುಷ್ಟ ಮತ್ತು ಮಾಂಸದಾಹಿಯಾಗಿದ್ದು, ಸ್ತ್ರೀಯೆಂಬ ನೆಲೆಯಲ್ಲಿ ಆತನು ತನ್ನ ಅಸ್ತಿತ್ವವನ್ನು ಗೌರವಿಸಲು ಸಿದ್ಧನಿಲ್ಲವೆ೦ದು ಅನುಭವದಿಂದ ತಿಳಿದ ಬಳಿಕ ನವ ತರುಣನೊಬ್ಬನನ್ನು ಹುಡುಕುವುದು. ಆತನೊ೦ದಿಗಿನ ಸಂಬಂಧವೂ ಹಿತಕರವಲ್ಲವೆಂದು ಮನಗಂಡಾಗ ಇನ್ನೊಬ್ಬನನ್ನು ಸಮೂಪಿಸುವುದು... 'ಆಧುನಿಕ' ಸ್ತ್ರೀಯರು ಅಂಗೀಕರಿಸುವ ಮಾರ್ಗವೇ ಸ್ತ್ರೀಯ ವ್ಯಕ್ತಿತ್ವ ರಚನೆ ಮತ್ತು ಅನುಭವಗಳಿಂದ ಅದನ್ನು ಪೋಷಿಸುವ ಏಕೈಕ ಮಾರ್ಗವೆಂದು ಯಾರೂ ಹೇಳಲಾರರು. ಸಮಾಜದಲ್ಲಿ ಲೈಂಗಿಕ ಅರಾಜಕತೆಯ ಪ್ರಸಾರ ಹಾಗೂ ಆಚಾರಗಳನ್ನು ಕೈ ಬಿಟ್ಟು ತಮ್ಮ ನೀಚ ಭಾವನೆಗಳನ್ನು ವಾಮ ಮಾರ್ಗಗಳಿ೦ದ ತಣಿಸ ಬಯಸುವವರ ಹೊರತು ಇನ್ನಾರಾದರೂ ಹಾಗೆ ಹೇಳಿಯಾರೇ?

ವಿದ್ಯಾಭ್ಯಾಸದ ನೀತಿಯೇನು? ಅದು ಜೀವನದ ಸಮಸ್ಯೆಗಳನ್ನು ತಾಶ್ಟಿಕವಾಗಿಯಾದರೂ ಮನವರಿಕೆ ಮಾಡಿಸದಿದ್ದೀತೇ?

ವಿವಾಹ! ಅದೊಂದು ಪವಿತ್ರ ವ್ಯಾವಹಾರಿಕ ಪರಿಜ್ಞಾನವಲ್ಲವೇ? ಅನುಭವಗಳ ಮೂಲಕ ಮನಸ್ಸನ್ನು ಪಕ್ಕಗೊಳಿಸಿ, ಬುದ್ಧಿಯನ್ನು ವಿಕಾಸಗೊಳಿಸುವ ಕೆಲಸವು ಅದರಿಂದಾಗುವುದಿಲ್ಲವೇ?

ಈಜಿಪ್ಟ್‌ನಲ್ಲಿ ಓರ್ವ ಮುಸ್ಲಿಮೇತರ ಬರಹಗಾರರಿದ್ದಾರೆ. ಇಸ್ಲಾಮನ್ನು ಪ್ರತ್ಯಕ್ಷ ವಾಗಿಯೂ ಪರೋಕ್ಷವಾಗಿಯೂ ವಾರಪತ್ರಿಕೆಯೊ೦ದರ ಸಂಚಿಕೆಗಳಲ್ಲಿ ನಿರಂತರ ಟೀಕಿಸು ವುದೇ ಅವರ ನಿತ್ಕ ವೃತ್ತಿ. ಒಮ್ಮೆ ಅವರು ಸ್ತ್ರೀಯರಿಗೆ ನೀಡಿದ ಉಪದೇಶವು ಹೀಗಿತ್ತು:

9. ಇಲ್ಲಿ ಆಚಾರವೆಂದರೆ, ಕಲಬೆರಕೆಯಿಲ್ಲದ ನೈಜ ಇಸ್ಲಾಮೂ ಸಂಪ್ರದಾಯ ಮತ್ತು ವಿಶ್ವಾಸಗಳೆಂದರ್ಥ. ಆದರೆ ಬರಹಗಾರರು ಜೊಳ್ಳು-ಕಾಳುಗಳನ್ನು ಬೇರ್ಪಡಿಸದೆ ಆರೋಪಿಸುತ್ತಾರೆ.

10. ಲೇಖಕನ ಹೆಸರು ಸಲಾಮ್‌ ಮೂಸಾ. ತನ್ನ ಸುದೀರ್ಥ ಜೀವನ ಕಾಲದಲ್ಲಿ ಬರೆದ ಪ್ರತಿಯೊಂದು ಪಂಕ್ತಿಯನ್ನು ಅವರು ಇಸ್ಲಾಮಿನ ತೇಜೋವಧೆಗಾಗಿ ಬಳಸಿದರು, ಕ್ರೈಸ್ತ ಲೇಖಕ

48 ಮಹಿಳೆ ಇಸ್ಲಾಮಿನಲ್ಲಿ

"ನಿಮ್ಮ ಪುರಾತನ ಆಚಾರಗಳನ್ನು ಕಿತ್ತೆಸೆಯಿರಿ. ಹೊರಗಿಳಿದು ಪುರುಷರೊಡನೆ ಧೈರ್ಯವಾಗಿ ಬೆರೆಯಿರಿ. ಫ್ಯಾಕ್ಟರಿಗಳಲ್ಲಿಯೂ ವ್ಯಾಪಾರ ಕೇಂದ್ರಗಳಲ್ಲಿಯೂ ಉದ್ಯೋಗಕ್ಕಾಗಿ "ಸ್ಪರ್ಧಿಸಿ ಮುಂದೆ ಸಾಗಿರಿ. ಪರಿಸ್ಥಿತಿಯ ಅನಿವಾರೃತೆಗಾಗಿಯಲ್ಲ, ಮಾತೃತ್ವ ನೀತಿ ಮತ್ತು ಮಾನವ ಸೃಷ್ಟಿಯ ಸಂರಕ್ಷಣೆಗಾಗಿ. ನಿಮ್ಮನ್ನು ಬಂಧಿಸಿಟ್ಟಿರುವ ಆಚಾರಗಳಿಗೆ ಸವಾಲೊಡ್ಡಲಿಕ್ಕಾಗಿ ಮಾತ್ರ!"

ಅದು ಸಾಲದೆಂಬಂತೆ ಅವರು ಹೀಗೂ ಹೇಳಿದರು: "ಬೀದಿಗಳಲ್ಲಿ ಕೆಳ ನೋಟ ಬೀರಿ ನಡೆಯುವಾಕೆಯು ಸ್ವಂತಿಕೆಯ ಬಗ್ಗೆ ಒಲವಿಲ್ಲದವಳಾಗಿದ್ದಾಳೆ. ಆಕೆ ಸಮಾಜ ಮತ್ತು ಪುರುಷ ನಿಗೆ ಹೆದರುವವಳಾಗಿದ್ದಾಳೆ. ಆದರೆ ಅನುಭವದಿಂದ ಮನಗ೦ಡಾಗ ಆಕೆ ಪಂಥಾ ಹ್ವಾನದಿ೦ದ ತಲೆಯೆತ್ತುವಳು. ಪುರುಷರನ್ನು ಧೈರ್ಯದಿಂದ ಎದುರಿಸಲೂ ಆಕೆಗೆ ಸಾಧ್ಯ ವಾಗುವುದು."

ಇಸ್ಲಾಮಿನ ಆರಂಭಿಕ ಹಂತದಲ್ಲಿ ಸಾಮಾನ್ಮ ರಾಜಕೀಯದಲ್ಲಿ ಪಾಲ್ಗೊಂಡು, ಸೇನೆಯನ್ನು ಮುನ್ನಡೆಸಿ ಯುದ್ಧರಂಗದಲ್ಲಿ ಹೋರಾಡಿದ್ದ ಹರ್ರುತ್‌ ಆಯಿಶಾರು(ರ) ಪರ್ದಾದ ಮರೆಯೊಳಗಿದ್ದು ಮಾತನಾಡುತ್ತಿದ್ದರೆಂದು ಚರಿತ್ರೆಯಲ್ಲಿ ಉಲ್ಲೇಖಿಸಲ್ಪಟ್ಟಿದೆ!

ಕೆಳನೋಟ ಬೀರುವ ಗುಣವು ಕೇವಲ ಸ್ತ್ರೀಯರ ವೈಶಿಷ್ಟವಲ್ಲ. ಪ್ರವಾದಿ ಮುಹಮ್ಮದ್‌ರು(ಸ) ತರುಣಿಯರಿಗಿಂತ ಹೆಚ್ಚು ಲಜ್ಜಾಶೀಲರಾಗಿದ್ದರೆ೦ದು ಚರಿತ್ರೆಯಲ್ಲಿ ಉಲ್ಲೇಖಿ ಸಲ್ಪಟ್ಟಿದೆ. ತನ್ನ ಸ್ವಂತಿಕೆಯ ಬಗ್ಗೆ ಪ್ರವಾದಿವರ್ಯರಿಗೆ(ಸ) ನಂಬಿಕೆಯಿರ ಲಿಲ್ಲವೇ? ಮಾನವಕುಲಕ್ಕೆ ತಾನು ತ೦ದ ರಾಯಭಾರದ ವಾಸ್ತವಿಕತೆಯನ್ನು ಅವರು ಮನಗಂಡಿರಲಿಲ್ಲವೇ? ಇಂತಹ ಬಾಲಿಶ ವಾದಗಳನ್ನು ಆರೋಪಕರು ಇನ್ನೆಷ್ಟು ಕಾಲ 'ಮುಂದುವರಿಸುವರೋ?

ಜೋರ್ಜ್‌ ಸೈದಾನ್‌ ಅವರ ಪಡಿಯಚ್ಚು. ಅವರು ಇಂದು ಕಾವೇರಿರುವ ಯುದ್ಧದ ಮುಂಚೂಣಿ ಯಲ್ಲಿದ್ದಾರೆ.